ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೋಗಿದ್ದು ಚಿಕಿತ್ಸೆಗೆ, ಆದರೆ ಮಲಗಿದ್ದು ಮರಣ ಶಯ್ಯೆ ಮೇಲೆ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ನವೆಂಬರ್, 20 : ಪ್ರತಿಯೊಬ್ಬರು ಬಂದ ಖಾಯಿಲೆ ಬೇಗ ಗುಣವಾಗಲೆಂದು ಆಸ್ಪತ್ರೆಗೆ ಹೋಗುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಗಳೇ ಸಾವಿನ ಹಾದಿಯನ್ನು ತೋರಿಸುತ್ತಿವೆ. ಹೌದು, ಇಂತಹ ಘಟನೆಯೊಂದು ಹುಬ್ಬಳ್ಳಿಯ ಪ್ರತಿಷ್ಠಿತ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

ಕೆಲವು ದಿನಗಳ ಹಿಂದೆ ಹಾವೇರಿ ಜಿಲ್ಲೆಯ ಸುನೀಲ ಎಂಬ ಯುವಕ ಕಿಮ್ಸ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷಕ್ಕೆ ಒಳಗಾಗಿದ್ದಾನೆ. ಈತ ಮೂಲತಃ ಹಾನಗಲ್ ತಾಲೂಕಿನ ಯಲಿವಾಳ ಎಂಬ ಗ್ರಾಮದವನು.[ಮಂಡ್ಯ : ಪ್ರಿಯಾ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣಾನಾ?]

A Hubballi boy has gone to coma of KIMS hospital doctors negligence

ಸುನೀಲ ತನ್ನ ಗ್ರಾಮದಲ್ಲಿ ಏರ್ಪಡಿಸಿದ್ದ ಹೋರಿ ಹಿಡಿಯುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದನು. ಮೊದಲೇ ಜೀವಕ್ಕೆ ಪಣವೊಡ್ಡುವ ಆ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲ್ಲುವ ವಿಶ್ವಾಸದಿಂದ ಹೋರಿಯ ಆಟದಲ್ಲಿ ಪಾಲ್ಗೊಂಡು ತೀವ್ರ ಗಾಯಗಳಾಗಿದ್ದು, ಜೀವಕ್ಕೆ ಸಂಚಕಾರ ತಂದುಕೊಂಡಿದ್ದನು.

ತೊಂದರೆಗೆ ಒಳಗಾಗಿದ್ದ ಸುನೀಲನನ್ನು ಕೂಡಲೇ ಹತ್ತಿರದ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಸ್ಥಳೀಯ ವೈದ್ಯರು ಇಲ್ಲಿ ಸಾಧ್ಯವಾಗುವುದಿಲ್ಲ ಎಂದ ವೈದ್ಯರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲು ಸಲಹೆ ನೀಡಿದ್ದಾರೆ.[ವಿರೂಪರೇ, ಮರುಸೌಂದರ್ಯಕ್ಕಾಗಿ ವಿಕ್ಟೋರಿಯಾಕ್ಕೆ ತೆರಳಿ]

ಕಿಮ್ಸ್ ಗೆ ಬಂದ ತಕ್ಷಣ ಪಾಳಿಯ ವೈದ್ಯರು ಯಾವುದೇ ಪ್ರಥಮ ಚಿಕಿತ್ಸೆ ನೀಡದೆ ಕೂಡಲೇ ಗುಣಮುಖರಾಗಲೆಂದು ಇಂಜೆಕ್ಷನ್ ಮಾಡಿದ್ದಾರೆ. ಆದರೆ ವೈದ್ಯರ ತಪ್ಪು ತಿಳಿವಳಿಕೆಯಿಂದ ಇಂಜೆಕ್ಷನ್ ಕೊಟ್ಟ ಕೂಡಲೇ ಸುನೀಲ ಬಾಯಿಯಿಂದ ರಕ್ತ ಬರಲಾರಂಭಿಸಿ ಕೋಮ ಕ್ಕೆ ಜಾರಿದ್ದಾನೆ.

ವೈದ್ಯರು ನೀಡಿರುವ ತಪ್ಪು ಚಿಕಿತ್ಸೆ ಅರಿತ ಸುನೀಲ ಅವರ ತಾಯಿ ಮತ್ತು ಸಂಬಂಧಿಕರು ಆತನನ್ನು ಬದುಕಿಸಿಕೊಡಲು ವಿನಂತಿಸಿದ್ದಾರೆ. ಇವರ ವಿನಂತಿಗೆ ತಲದೂಗಿದ ವೈದ್ಯರು ಹೇಗಾದರೂ ಮಾಡಿ ಹೇಗಾದರೂ ಮಾಡಿ ನಿಮ್ಮ ಮಗನನ್ನು ಮೊದಲಿನ ಸ್ಥಿತಿಗೆ ತರುತ್ತೇವೆ ಎಂದು ಭರವಸೆ ನೀಡಿದ್ದಾರೆ.

English summary
A Hubballi boy has gone to coma of KIMS hospital doctors negligence on November 20th
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X