ಮಂಡ್ಯದಲ್ಲಿ ಮನುಷ್ಯ ರೂಪದ ಕುರಿಮರಿ ಜನನ!

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮಂಡ್ಯ, ಜನವರಿ.05: ಪ್ರಕೃತಿಯ ವೈಚಿತ್ರಗಳು ಕೆಲವೊಮ್ಮೆ ಮನುಷ್ಯನನ್ನೇ ನಿಬ್ಬೆರಗಾಗುವಂತೆ ಮಾಡುತ್ತದೆ. ಕಳೆದ ವರುಷ ಮೈಸೂರು ಎಚ್.ಡಿ.ಕೋಟೆ ಬಳಿ ಕುರಿ ಹೊಟ್ಟೆಯಲ್ಲಿ ಮನುಷ್ಯ ರೂಪದ ಕುರಿಮರಿ ಹುಟ್ಟಿತ್ತು. ಇದೀಗ ಮಂಡ್ಯದ ನಾಗಮಂಗಲದಲ್ಲಿನ ಕುರಿಯು ಈ ಅಚ್ಚರಿಯ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ.

ರೈತನೊಬ್ಬ ತಂದಿದ್ದ ಕುರಿಯನ್ನು ಪಶು ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಆಗ ಹೊಟ್ಟೆಯಲ್ಲಿ ಮನುಷ್ಯ ರೂಪದ ಕುರಿಮರಿ ಇತ್ತು. ಆದರೆ ಅದು ಸತ್ತು ಹೋಗಿತ್ತು. ಅದನ್ನು ಪಶು ಇಲಾಖೆಯಲ್ಲಿ ಬಾಟಲ್ ವೊಂದರಲ್ಲಿ ಸಂರಕ್ಷಿಸಿಡಲಾಗಿದೆ.[ಕುರಿ ಮಾಂಸ ಪ್ರಿಯರಿಗೆ ಸುದ್ದಿ: ಜಿಲ್ಲೆ ಜಿಲ್ಲೆಗಳಲ್ಲಿ ಮಟನ್ ಕೇಂದ್ರ!]

Mandya

ನಾಗಮಂಗಲದ ಟ್ಯಾಂಕ್ ಮೈದಾನದ ಸಮೀಪವಿರುವ ಪಶು ವೈದ್ಯಕೀಯ ಆಸ್ಪತ್ರೆಗೆ ಕಳೆದ ಗುರುವಾರ ರೈತನೊಬ್ಬ ಕುರಿ ಕರೆತಂದಿದ್ದರು. ಆ ಕುರಿಗೆ ಡಾ.ಶಾಂತರಾಜು ಮತ್ತು ಡಾ. ಬಿಷುಜಮೂರ್ತಿ ಅವರು ಶಸ್ತ್ರಚಿಕಿತ್ಸೆ ಮಾಡಿ ಹೊಟ್ಟೆಯಲ್ಲಿದ್ದ ಮರಿಯನ್ನು ಹೊರತೆಗೆದರು. ಆಗ ಆ ಮರಿ ಮನುಷ್ಯನಂತೆ ಮುಖ, ದೇಹ, ಕೈ, ಕಾಲುಗಳ ರಚನೆ, ಇರುವುದು ಕಂಡು ಬಂದಿದೆ. ಇದನ್ನು ಕಂಡ ವೈದ್ಯರು ಆಶ್ಚರ್ಯಚಕಿತರಾಗಿದ್ದಾರೆ.[ಬಿಳಿ ಗೂಬೆ ಸಾಕಿದ್ರೆ ನಿಮ್ಮ ಬದುಕು ಬಂಗಾರವಾಗುತ್ತಂತೆ!]

ಮನುಷ್ಯನನ್ನೇ ಹೋಲುವ ಅಪರೂಪದ ಕುರಿಮರಿ ಮಾತ್ರ ತಾಯಿ ಹೊಟ್ಟೆಯಲ್ಲೇ ಸತ್ತು ಹೋಗಿತ್ತು. ಶಸ್ತ್ರ ಚಿಕಿತ್ಸೆ ಬಳಿಕ ತಾಯಿ ಕುರಿ ಆರೋಗ್ಯವಾಗಿದೆ. ಇದೊಂದು ಅಪರೂಪದ ಕುರಿಮರಿ ಎಂದು ಸತ್ತ ಕುರಿಮರಿ ದೇಹವನ್ನು ಹೆಚ್ಚಿನ ಅಧ್ಯಯನಕ್ಕಾಗಿ ಬಾಟಲ್ ವೊಂದರಲ್ಲಿ ಇಡಲಾಗಿದೆ.

ಈ ಆಶ್ಚರ್ಯಕ್ಕೆ ಪ್ರತಿಕ್ರಿಯೆ ನೀಡಿರುವ ನಾಗಮಂಗಲ ಪಶು ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಡಾ.ಶಾಂತರಾಜು ಅವರು, 'ಅಪರೂಪದ ಪ್ರಕರಣಗಳಲ್ಲಿ ಜನಿಟಿಕ್ ತೊಂದರೆಯಿಂದಾಗಿ ಲಕ್ಷಕ್ಕೊಂದು ಈ ರೀತಿಯ ಪ್ರಕರಣಗಳು ಅಲ್ಲಲ್ಲಿ ಕಂಡು ಬರುತ್ತವೆ' ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A goat gave birth one kid with a same to human face. This shocking incident took place at the Nagamangal, Mandya, Karnataka
Please Wait while comments are loading...