'ಮಾಂಸ ತಿಂದು ಹೋಗಲಿ ಅಥವಾ ಕೊರಳಿಗೆ ನೇತು ಹಾಕಿಕೊಂಡು ಹೋಗಲಿ'
Recommended Video

ಚಿಕ್ಕಮಗಳೂರು, ಅಕ್ಟೋಬರ್ 24 : 'ಮಾಂಸ ತಿಂದು ಹೋಗಲಿ ಅಥವಾ ಮಾಂಸ ಕೊರಳಿಗೆ ನೇತುಹಾಕಿಕೊಂಡು ಹೋಗಲಿ. ನಮ್ಮ ದೇವರುಗಳು ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ' ಎಂದು ಬಿಜೆಪಿ ನಾಯಕಿ ತೇಜಸ್ವಿನಿ ರಮೇಶ್ ಹೇಳಿದರು.
ಚಿಕ್ಕಮಗಳೂರಿನಲ್ಲಿ ಮಂಗಳವಾರ ಮಾತನಾಡಿ ಅವರು, 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ-ನುಡಿಗಳ ಬಗ್ಗೆ ನಾವೇನು ತಲೆಕೆಡಿಸಿಕೊಳ್ಳುವುದಿಲ್ಲ. ಮಾಂಸ ತಿಂದು ದೇವರ ದರ್ಶನ ಮಾಡಿರುವುದು ಅವರ ವೈಯಕ್ತಿಕ ವಿಚಾರ' ಎಂದು ಎಂದರು.

'ಸಿದ್ದರಾಮಯ್ಯ ಅವರೇನು ದೈವ ಭಕ್ತರಲ್ಲ. ಸಿದ್ದರಾಮಯ್ಯ ಯಾವಾಗಲೂ ಪರಂಪರೆ, ಆಚರಣೆ, ಧರ್ಮದ ವಿರೋಧಿ. ಅವರ ನಡೆನುಡಿಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ' ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಧರ್ಮಸ್ಥಳ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅದಕ್ಕೂ ಮೊದಲು ಬಂಟ್ವಾಳದಲ್ಲಿ ಮೀನು ಊಟ ಮಾಡಿದದ್ದರು. ಮೀನು ಊಟದ ಬಳಿಕ ದೇವಾಲಯಕ್ಕೆ ಹೋದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ಈ ವಿಚಾರದ ಬಗ್ಗೆ ಚರ್ಚೆ ಆರಂಭವಾದ ಬಳಿಕ ಬಳಿಕ, 'ಮಾಂಸ ಸೇವಿಸಿ ಧರ್ಮಸ್ಥಳ ದೇವಸ್ಥಾನಕ್ಕೆ ಪ್ರವೇಶಿಸಬಾರದು ಎಂಬ ನಿಯಮ ರೂಪಿಸಿಲ್ಲ' ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ಆಪ್ತ ಕಾರ್ಯದರ್ಶಿ ಎ.ವಿ.ಶೆಟ್ಟಿ ಸ್ಪಷ್ಟಪಡಿಸಿದ್ದರು.












Click it and Unblock the Notifications