ಕಲಬುರಗಿಯಲ್ಲಿ ಮರ್ಮಾಂಗ ಕತ್ತರಿಸಿ ವ್ಯಕ್ತಿ ಕೊಲೆ

Posted By:
Subscribe to Oneindia Kannada

ಕಲಬುರುಗಿ, ಡಿಸೆಂಬರ್ 2: ಕಲಬುರಗಿಯ ಸೇಡಂ ತಾಲೂಕಿನ ಸೆಂಗಾವಿ(ಎಂ) ಗ್ರಾಮದಲ್ಲಿ ಯುವಕನ ಮಾರ್ಮಾಂಗವನ್ನು ಕತ್ತರಿಸಿ ದೇಹದ ವಿವಿಧ ಭಾಗಗಳನ್ನು ಬೇರೆ ಬೇರೆ ಜಾಗಗಳಲ್ಲಿ ಹಾಕಿ ಭೀಕರವಾಗಿ ಕೊಂದಿರುವ ಘಟನೆ ಜರುಗಿದೆ.

ಮೃತನಾದ ವ್ಯಕ್ತಿ ಮಾರುತಿ(20) ಎನ್ನಲಾಗಿದ್ದು, ಸೆಂಗಾವಿ(ಎಂ) ಗ್ರಾಮದ ಅಣ್ಣಪ್ಪ ವಾಲಿಕಾರ ಎಂಬುವವರ ಮನೆಗೆ ಕೆಲಸಕ್ಕೆ ಹೋಗುತ್ತಿದ್ದ ಎಂದು ಸ್ಥಳೀಯರು ತಿಳಿಸಿದರು.

ಗುರುವಾರ ರಾತ್ರಿ ಮಾರುತಿ ಮನೆ ಬಾರದಿದ್ದನ್ನು ಕಂಡ ಪೋಷಕರು ವಾಲಿಕಾರ ಎಂಬುವವರ ಮನೆಯಲ್ಲೆ ಇದ್ದಿರಬೇಕು ಎಂದುಕೊಂಡಿದ್ದಾರೆ. ಆದರೆ ಸೆಂಗಾವಿ(ಎಂ) ಗ್ರಾಮದ ರಾಜಶೇಖರ್ ತಮ್ಮ ತೊಗರಿ ತೋಟಕ್ಕೆ ತೋಟವನ್ನು ಕಾಯಲು ಬೆಳಗ್ಗೆ ಎದ್ದು ಹೋದಾಗ ತೊಗರಿ ತೋಟದ ಮಧ್ಯದಲ್ಲಿ ಮೃತದೇಹವಿರುವುದು ಕಂಡು ಬಂದಿದೆ. ದೇಹದ ಮರ್ಮಾಂಗವನ್ನು ಕತ್ತರಿಸಲಾಗಿತ್ತು. ಕೈ, ಬಾಯಿ, ಮೂಗು ಮತ್ತು ಬೆರಳುಗಳನ್ನು ಕತ್ತರಿಸಿ ವಿಕಾರಗೊಳಿಸಲಾಗಿದೆ.[ಕನಸಿನಲ್ಲಿ ದೇವಿ ಹೇಳಿಕೆ : ರುಂಡ ಚಂಡಾಡಿದ ಯುವಕ]

A cruel murderd in kalaburagi sengavi(m) village

ಇನ್ನು ಈ ವಿಷಯ ತಿಳಿಯುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಮಾಲಿಕಾರ ಅವರನ್ನು ವಿಚಾರಿಸಿದರೆ ಅವರು ರಾತ್ರಿ ಕೆಲಸ ಮುಗಿಸಿಕೊಂಡು ಎಂಟು ಗಂಟೆಗೆ ಹೋಗಿದ್ದಾನೆ. ನಂತರ ವಿಷಯ ತಿಳಿಯುತ್ತಿರುವುದು ಈಗಲೇ ಎಂದು ತಿಳಿಸಿದರು.

ಆದರೆ ಯಾರು ಈ ಕೊಲೆ ಮಾಡಿದವರು. ಏತಕ್ಕಾಗಿ ಮಾಡಿದ್ದಾರೆ? ಎಂಬ ವಿಷಯ ಇನ್ನು ತಿಳಿದು ಬಂದಿಲ್ಲ. ಅನೈತಿಕ ಸಂಬಂಧದಿಂದ ಕೊಲೆ ನಡೆದಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.

ಕಲಬುರಗಿ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆಗೆ ಮುಂದಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kalaburagi district Sedam taluk Sengavi(m) A man has murder has cruel by others. who is murderer still enquery police.
Please Wait while comments are loading...