ಸಿಎಂ ಕಾರಿನ ಮೇಲೆ ಕುಳಿತ ಕಾಗೆಗೆ ಮಾಧ್ಯಮಗಳ ರೆಕ್ಕೆ ಪುಕ್ಕ!

Subscribe to Oneindia Kannada

ಬೆಂಗಳೂರು, ಜೂನ್ 2: ಗುರುವಾರ ಸಿಎಂ ಸಿದ್ದರಾಮಯ್ಯಗಿಂತ ಜಾಸ್ತಿ ಮಾಡಿದ್ದು ಒಂದು ಕಾಗೆ ಮರಿ. ಸಿದ್ದರಾಮಯ್ಯ ಅವರ ಕಾರಿನ ಮೇಲೆ ಕುಳಿತ ಕಾಗೆ ಒಂದು ಐದು ನಿಮಿಷ ಅಲ್ಲೇ ವಿಶ್ರಾಂತಿ ತೆಗೆದುಕೊಂಡಿತು. ಸಿಬ್ಬಂದಿ ಓಡಿಸಲು ಯತ್ನಿಸಿದರು ಕದಲದೆ ಬಿಸಿಲಿಗೆ ಮೈಯೊಡ್ಡಿ ಕುಳಿತುಕೊಂಡಿತ್ತು.

ಆಹಾರವಿಲ್ಲದೇ ನಿತ್ರಾಣವಾಗಿದ್ದ ಕಾಗೆ ಮರಿಗೆ ಕೂರಲು ಒಂದು ಜಾಗ ಬೇಕಾಗಿತ್ತು ಅಷ್ಟೆ. ಅದಕ್ಕೆ ಸಿಎಂ ಕಾರಾದರೇನು, ಮರದ ಟೊಂಗೆಯಾದರೇನು? ಬೆಳಗ್ಗೆ ಸಿದ್ದರಾಮಯ್ಯ ಅವರಿಗೆ ಕಾಗೆ ದರ್ಶನ ನೀಡಿದ್ದು ಕೊಂಚ ಗಲಿಬಿಲಿ ತಂದಿದ್ದು ಮಾಧ್ಯಮಗಳಿಗೆ.[ಸಾಡೇಸಾತಿ ಎಂದರೇನು, ಏನಿದರ ಮರ್ಮ?]

karnataka

ಈ ಘಟನೆ ನಡೆದ ಮೇಲೆ ಮಾಧ್ಯಮಗಳಲ್ಲಿ ಚರ್ಚೆಯೂ ಆರಂಭವಾಗಿದೆ. ಇದು ಅಪಶಕುನವೋ? ಕಾಕತಾಳೀಯವೋ ಎಂಬ ಚರ್ಚೆ ಶುರುವಾಗಿದೆ. ಸಿದ್ದರಾಮಯ್ಯನವರದು ವೃಶ್ಚಿಕ ರಾಶಿ, ವಿಶಾಖಾ ನಕ್ಷತ್ರ, ಅದರ ಮೇಲೆ ಕಾಗೆ ಬೀರುವ ಪರಿಣಾಮವೇನು ? ಎಂಬ ಚರ್ಚೆಯೂ ಜೋರಾಗಿದೆ. ಸರ್ಕಾರಿ ನೌಕರರ ಪ್ರತಿಭಟನೆ, ಪೊಲೀಸರ ಪ್ರತಿಭಟನೆ ಕಾವು ಏರಿದ್ದ ಸಮಯದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಅತ್ತ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಕೂಗು ಎದ್ದಿದ್ದು ಸದ್ಯಕ್ಕೆ ಮಾಧ್ಯಮಗಳಲ್ಲಿ ಕಾಗೆಯದ್ದೇ ಸುದ್ದಿ.

ಹಾಗಾಗಿ ಕಾಗೆ ಮರಿ ಕಾಗೆ ಮರಿಯಾಗಿ ಉಳಿದುಕೊಂಡಿಲ್ಲ. ನಿತ್ರಾಣಗೊಂಡು ಹಾರಲು ಸಾಧ್ಯವಾಗದ ಕಾಗೆ ಮರಿಗೆ ರೆಕ್ಕೆ ಪುಕ್ಕಗಳು ಜೋರಾಗೆ ಬಂದಿವೆ. ಅಪಶಕುನದ ಆಗಸದಲ್ಲಿ ಹಾರಾಡುತ್ತಿದೆ. ಇದ್ಯಾವುದಕ್ಕೂ ತಲೆಕೆಡಿಸದೇ ಸಿಎಂ ಸಿದ್ದರಾಮಯ್ಯ ಮಾತ್ರ ತಮ್ಮ ಕೆಲಸದಲ್ಲಿ ತಲ್ಲೀನರಾಗಿದ್ದಾರೆ.[ವೃಶ್ಚಿಕ ರಾಶಿಗೆ ಕೈ ಕೊಟ್ಟ ಗುರುಬಲ, ಮುಂದೇನು?]

A crow sits for 10 mins on CM Siddaramaiah’s car

ವೃಶ್ಚಿಕ ರಾಶಿಗೆ ಸಾಡೇಸಾತಿ
ಕವಡೆಕಾಯಿ ಜ್ಯೋತಿಷಿಗಳ ಪ್ರಕಾರ ವೃಶ್ಚಿಕ ರಾಶಿಗೆ ಸಾಡೇಸಾತಿ ಆರಂಭವಾಗಿದೆಯಂತೆ. ಪ್ರತಿ ಶನಿವಾರ ಶನಿದೇವರ ದೇವಸ್ಥಾನದಲ್ಲಿಯೋ, ಆಂಜನೇಯನ ಗುಡಿಯಲ್ಲಿಯೋ ಎಳ್ಳೆಣ್ಣೆ ದೀಪ ಹಚ್ಚಿದರೆ ಸಾಡೇಸಾತಿಯ ಪ್ರಭಾವ ಅಷ್ಟಾಗಿರುವುದಿಲ್ಲ ಎಂಬ ಸಲಹೆಯನ್ನೂ ಅವರೇ ನೀಡುತ್ತಾರೆ.[ಕಾಗೆ ಅಪಶಕುನಕ್ಕೆ ಹೆದರಿ ಇಂಜಿನಿಯರ್ ಆತ್ಮಹತ್ಯೆ!]

ಕವಡೆಕಾಯಿ ಜ್ಯೋತಿಷ್ಯ ನಂಬದ ಸಿದ್ದರಾಮಯ್ಯ
ಆದರೆ, ನಮ್ಮ ಸಿದ್ದರಾಮಯ್ಯನವರು ಹೇಗಂತೀರಿ? ಮೂಢನಂಬಿಕೆಯನ್ನು ಅಜೀಬಾತ್ ನಂಬದ ಸಿದ್ದರಾಮಯ್ಯನವರು ಕವಡೆಕಾಯಿ ಜ್ಯೋತಿಷ್ಯಕ್ಕೆ ಕವಡೆಕಾಸಿನ ಕಿಮ್ಮತ್ತನ್ನೂ ನೀಡುವುದಿಲ್ಲ. ಯಾರಾದರೂ ಈ ಪ್ರಶ್ನೇಯೇನಾದರೂ ಕೇಳಿದರೆ ಅಲ್ಲೇ ರೇಗಿಬಿಡುತ್ತಾರೆ. ಅವರು ಹಾಗೆಯೇ ಇರಲಿ ಬಿಡಿ. ನಂಬಿಕೆ ಇಲ್ಲದಿದ್ದರೆ ಏನು ಮಾಡೋಕಾಗುತ್ತೆ?

ವಿವಾದಗಳ ಕಾಲ
ಇತ್ತೀಚೆಗೆ, 70 ಲಕ್ಷದ ವಾಚಿನ ವಿವಾದ ಅವರ ರಿಸ್ಟ್ ಏರಿತ್ತು. ವಾಚನ್ನು ಕಳಚಿಟ್ಟಂತೆ ವಿವಾದವನ್ನು ಕಳಚಿಕೊಂಡುಬಿಟ್ಟರು. ಅವರ ಮಗನ ಲ್ಯಾಬ್ ವಿವಾದವೂ ಅವರ ಬೆನ್ನಿಗೆ ಬಿದ್ದಿತ್ತು. ಈಗ ಆ ವಿವಾದದ ಕೆಂಡದ ಮೇಲೆ ಬೂದಿ ಕೂಡ ಕಟ್ಟಿಲ್ಲ. ಇದೀಗ, ಕಾಗೆ ಅವರ ಕಾರಿನ ಮೇಲೆ ಕುಳಿತ ಪ್ರಸಂಗ ಚರ್ಚೆಗೆ ಗ್ರಾಸವಾದರೂ ಅಚ್ಚರಿಯಿಲ್ಲ. ಆದರೆ, ಪಾಪ ಆ ಕಾಗೆಗೆ ಇದೆಲ್ಲ ಎಲ್ಲಿ ಗೊತ್ತು?

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A Baby Crow Sits on CM Siddaramaiah’s Car on Thursday, June 2 Morning. And refuses to Budge by Delaying for over 10 mins . After this incident a debate was started in television Media.
Please Wait while comments are loading...