ರಾಜ್ಯದಲ್ಲಿ ಇಂದು 9,140 ಮಂದಿಗೆ ಕೊರೊನಾ ವೈರಸ್ ಸೋಂಕು

ಬೆಂಗಳೂರು, ಸೆಪ್ಟೆಂಬರ್ 12: ರಾಜ್ಯದಲ್ಲಿ ಇಂದು 9,140 ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ, ಇದರಿಂದ ರಾಜ್ಯದಲ್ಲಿ ಒಟ್ಟು ಪ್ರಕರಣ ಸಂಖ್ಯೆ 4,49,551ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 97,815ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 94 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಇದುವರೆಗೂ ಕೊರೊನಾ ವೈರಸ್‌ಗೆ ರಾಜ್ಯದಲ್ಲಿ 7161 ಮಂದಿ ಜೀವ ಕಳೆದುಕೊಂಡಿದ್ದಾರೆ. ಹಾಗೆಯೇ ಇಂದು ಆಸ್ಪತ್ರೆಯಿಂದ 9557 ಮಂದಿ ಬಿಡುಗಡೆಯಾಗಿದ್ದು, ಬಿಡುಗಡೆ ಹೊಂದಿದವರ ಒಟ್ಟು ಸಂಖ್ಯೆ 3,44,556ಕ್ಕೆ ತಲುಪಿದೆ. ಇಂದು ರಾಜ್ಯದಾದ್ಯಂತ ಸುಮಾರು 63,583 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಸಂಕಷ್ಟ ಮುಂದುವರಿದಿದೆ. ಶನಿವಾರ 3,552 ಹೊಸ ಪ್ರಕರಣಗಳು ವರದಿಯಾಗಿವೆ. 21 ಮಂದಿ ಮೃತಪಟ್ಟಿದ್ದು, 3,538 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,67,183ಕ್ಕೆ ತಲುಪಿದೆ. ಮೈಸೂರಿನಲ್ಲಿ 637 ಮಂದಿ ಇಂದು ಕೊರೊನಾ ವೈರಸ್‌ಗೆ ಒಳಗಾಗಿದ್ದಾರೆ. ಬಳ್ಳಾರಿಯಲ್ಲಿ 366, ದಕ್ಷಿಣ ಕನ್ನಡ 401, ಹಾಸನ 324, ತುಮಕೂರು 304 ಮಂದಿ ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ.

9140 Coronavirus Positive Cases In Karnataka On Saturday

ಬಾಗಲಕೋಟೆ 175, ಬೆಳಗಾವಿ 201, ಬೆಂಗಳೂರು ಗ್ರಾಮಾಂತರ 211, ಬೀದರ್ 101, ಚಾಮರಾಜನಗರ 60, ಚಿಕ್ಕಬಳ್ಳಾಪುರ 101, ಚಿಕ್ಕಮಗಳೂರು 159, ಚಿತ್ರದುರ್ಗ 227, ದಾವಣಗೆರೆ 267, ಧಾರವಾಡ 239, ಗದಗ 49, ಹಾವೇರಿ 213, ಕಲಬುರಗಿ 222, ಕೊಡಗು 22, ಕೋಲಾರ 53, ಕೊಪ್ಪಳ 183, ಮಂಡ್ಯ 193, ರಾಯಚೂರು 131, ರಾಮನಗರ 81, ಶಿವಮೊಗ್ಗ 155, ಉಡುಪಿ 169, ಉತ್ತರ ಕನ್ನಡ 130, ವಿಜಯಪುರ 58 ಮತ್ತು ಯಾದಗಿರಿಯಲ್ಲಿ 151 ಮಂದಿಗೆ ಸೋಂಕು ತಗುಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+