ಕರುನಾಡಲ್ಲಿ 24 ಗಂಟೆಗಳಲ್ಲೇ 8852 ಮಂದಿಗೆ ಕೊರೊನಾವೈರಸ್ ಸೋಂಕು
ಬೆಂಗಳೂರು, ಆಗಸ್ಟ್.30: ಕರ್ನಾಟಕದಲ್ಲಿ ನೊವೆಲ್ ಕೊರೊನಾವೈರಸ್ ಸೋಂಕಿನ ಅಟ್ಟಹಾಸ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ 8852 ಮಂದಿಗೆ ಮಹಾಮಾರಿ ಅಂಟಿಕೊಂಡಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.
ರಾಜ್ಯದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಒಂದೇ ದಿನ ಕೊರೊನಾವೈರಸ್ ಸೋಂಕಿಗೆ 106 ಜನರು ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 5589ಕ್ಕೆ ಏರಿಕೆಯಾಗಿದೆ.
ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಒಟ್ಟು ಸಂಖ್ಯೆ 335928ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಈವರೆಗೂ 2,42,229 ಸೋಂಕಿತರು ಗುಣಮುಖರಾಗಿದ್ದರೆ 88091 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿದು ಬಂದಿದೆ. ಕಳೆದ 24 ಗಂಟೆಗಳಲ್ಲಿ 7101 ಕೊವಿಡ್-19 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.
Recommended Video

ಒಂದೇ ದಿನ ರಾಜ್ಯದಲ್ಲಿ ಎಷ್ಟು ಜನರ ತಪಾಸಣೆ?
ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆ ಸಾರ್ವಜನಿಕರನ್ನು ಕೊವಿಡ್-19 ತಪಾಸಣೆಗೆ ಒಳಪಡಿಸುವುದು ತುರ್ತು ಅಗತ್ಯವಾಗಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲೇ 26176 ಜನರನ್ನು ರಾಪಿಡ್ ಆಂಟಿಜೆನ್ ಡಿಟೆಕ್ಷನ್ ತಪಾಸಣೆಗೆ ಒಳಪಡಿಸಲಾಗಿದ್ದು, 40781 ಜನರಿಗೆ RT-PCR ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಒಂದೇ ದಿನ 66957 ಜನರನ್ನು ಕೊವಿಡ್-19 ಟೆಸ್ಟ್ ಗೆ ಒಳಪಡಿಸಲಾಗಿದೆ. ರಾಜ್ಯದಲ್ಲಿ ಇದುವರೆಗೂ 28,52,675 ಜನರಿಗೆ ಕೊವಿಡ್-19 ತಪಾಸಣೆಗೆ ಒಳಪಡಿಸಲಾಗಿದೆ.

ರಾಜ್ಯ ರಾಜಧಾನಿಯಲ್ಲಿ 2821 ಕೊವಿಡ್-19 ಪ್ರಕರಣ
ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲೇ 2821 ಮಂದಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಖಾತ್ರಿಯಾಗಿದೆ. ಇದರಿಂದ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 127263ಕ್ಕೆ ಏರಿಕೆಯಾಗಿದೆ. ಇಂದು 2406 ಸೋಂಕಿತರು ಗುಣಮುಖರಾಗಿದ್ದು, ಇದುವರೆಗೂ ಬೆಂಗಳೂರಿನಲ್ಲೇ 87621 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇನ್ನು, ಒಂದೇ ದಿನ ಮಹಾಮಾರಿಗೆ 27 ಜನರು ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 1938ಕ್ಕೆ ಏರಿಕೆಯಾಗಿದೆ.

ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಎಷ್ಟು ಕೊರೊನಾವೈರಸ್ ಕೇಸ್?
ರಾಜ್ಯದಲ್ಲಿ ಒಟ್ಟು 8852 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 132, ಬಳ್ಳಾರಿ 428, ಬೆಳಗಾವಿ 357, ಬೆಂಗಳೂರು ಗ್ರಾಮಾಂತರ 55, ಬೆಂಗಳೂರು 2821, ಬೀದರ್ 73, ಚಾಮರಾಜನಗರ 54, ಚಿಕ್ಕಬಳ್ಳಾಪುರ 127, ಚಿಕ್ಕಮಗಳೂರು 207, ಚಿತ್ರದುರ್ಗ 95, ದಕ್ಷಿಣ ಕನ್ನಡ 334, ದಾವಣಗೆರೆ 373, ಧಾರವಾಡ 300, ಗದಗ 196, ಹಾಸನ 268, ಹಾವೇರಿ 105, ಕಲಬುರಗಿ 199, ಕೊಡಗು 65, ಕೋಲಾರ 82, ಕೊಪ್ಪಳ 240, ಮಂಡ್ಯ 179, ಮೈಸೂರು 734, ರಾಯಚೂರು 147, ರಾಮನಗರ 114, ಶಿವಮೊಗ್ಗ 292, ತುಮಕೂರು 314, ಉಡುಪಿ 254, ಉತ್ತರ ಕನ್ನಡ 113, ವಿಜಯಪುರ 127, ಯಾದಗಿರಿ 67 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.

ರಾಜ್ಯದಲ್ಲಿ 24 ಗಂಟೆಗಳಲ್ಲಿ 7101 ಸೋಂಕಿತರು ಗುಣಮುಖ
ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ನಡುವೆಯೂ ಗುಣಮುಖರ ಸಂಖ್ಯೆ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲೇ ರಾಜ್ಯದಲ್ಲಿ 7101 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಬಾಗಲಕೋಟೆ 184, ಬಳ್ಳಾರಿ 274, ಬೆಳಗಾವಿ 715, ಬೆಂಗಳೂರು ನಗರ 2406, ಬೀದರ್ 21, ಚಾಮರಾಜನಗರ 12, ಚಿಕ್ಕಬಳ್ಳಾಪುರ 40, ಚಿಕ್ಕಮಗಳೂರು 97, ದಕ್ಷಿಣ ಕನ್ನಡ 213, ದಾವಣಗೆರೆ 168, ಧಾರವಾಡ 249, ಗದಗ 134, ಹಾಸನ 190, ಹಾವೇರಿ 111, ಕಲಬುರಗಿ 159, ಕೊಡಗು 39, ಕೋಲಾರ 49, ಕೊಪ್ಪಳ 181, ಮಂಡ್ಯ 117, ಮೈಸೂರು 255, ರಾಯಚೂರು 134, ರಾಮನಗರ 64, ಶಿವಮೊಗ್ಗ 191, ತುಮಕೂರು 193, ಉಡುಪಿ 195, ಉತ್ತರ ಕನ್ನಡ 180, ವಿಜಯಪುರ 196, ಯಾದಗಿರಿ 334 ಸೋಂಕಿತರು ಗುಣಮುಖರಾಗಿದ್ದಾರೆ.












Click it and Unblock the Notifications