• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯದಲ್ಲಿ ಒಂದೇ ದಿನ 84 ಕೇಸ್, ಸೋಂಕಿತರ ಸಂಖ್ಯೆ 1231ಕ್ಕೆ ಏರಿಕೆ

|

ಬೆಂಗಳೂರು, ಮೇ 18: ಕರ್ನಾಟಕದಲ್ಲಿ ಹೊಸದಾಗಿ 84 ಕೊರೊನಾ ಕೇಸ್‌ಗಳು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಕೊವಿಡ್ ಸೋಂಕಿತರ ಸಂಖ್ಯೆ 1231ಕ್ಕೆ ಏರಿಕೆಯಾಗಿದೆ.

84 ಕೇಸ್‌ಗಳ ಪೈಕಿ 57 ಜನರು ಮಹಾರಾಷ್ಟ್ರ ಪ್ರಯಾಣ ಮಾಡಿರುವ ಹಿನ್ನೆಲೆ ಹೊಂದಿದ್ದಾರೆ. ಮುನ್ನೆಚ್ಚರಿಕೆ ಕ್ರಮದಿಂದ ಇವರೆಲ್ಲರನ್ನು ಕ್ವಾರಂಟೈನ್ ಮಾಡಲಾಗಿತ್ತು. ಕ್ವಾರಂಟೈನ್‌ನಲ್ಲಿದ್ದವರಿಗೆ ಸೋಂಕು ಖಚಿತವಾಗಿದೆ.

ಬೆಂಗಳೂರಿನಲ್ಲಿ ಇಂದು ಒಟ್ಟು 18 ಜನರಿಗೆ ಕೊರೊನಾ ಪಾಸಿಟಿವ್ ಆಗಿದೆ. ಶಿವಾಜಿನಗರ ಒಂದೇ ಕಡೆ 16 ಹೊಸ ಕೇಸ್ ಪತ್ತೆಯಾಗಿದೆ. 653ನೇ ಸೋಂಕಿತನ ಸಂಪರ್ಕದಲ್ಲಿದ್ದ 16 ಮಂದಿಗೆ ಕೊರೊನಾ ಸೋಂಕು ತಗುಲಿದೆ.

653ನೇ ಸೋಂಕಿತನಿಂದ ನಿಲ್ಲದ ತಲೆನೋವು, ಪಾದರಾಯನಪುರ ಹಿಂದಿಕ್ಕುವತ್ತ ಶಿವಾಜಿನಗರ?

* ಜಿಲ್ಲೆವಾರು ಇಂದು ವರದಿಯಾಗಿರುವ ಸೋಂಕಿತರ ಸಂಖ್ಯೆ

ಬೆಂಗಳೂರು ನಗರ 18

ಮೈಸೂರು 1

ಮಂಡ್ಯ 17

ಕಲಬುರಗಿ 6

ಬೀದರ್ 1

ಬಳ್ಳಾರಿ 1

ಕೊಡಗು 1

ಯಾದಗಿರಿ 5

ಹಾಸನ 4

ದಾವಣಗೆರೆ 1

ಉತ್ತರ ಕನ್ನಡ 8

ಬೆಳಗಾವಿ 2

ಗದಗ 5

ರಾಯಚೂರು 6

ವಿಜಯಪುರ 5

ಕೊಪ್ಪಳ 3

ಇಂದು 12 ಜನರು ಸೋಂಕಿನಿಂದ ಚೇತರಿಕೆ ಕಂಡಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಈವರೆಗೂ 521 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇನ್ನು 672 ಕೇಸ್‌ ಸಕ್ರಿಯವಾಗಿದೆ. ರಾಜ್ಯದಲ್ಲಿ ಒಟ್ಟು 37 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.

English summary
84 new cases reported in the Karnataka from 5 pm yesterday till 12 noon today, taking the total number of active cases to 672. Death toll stands at 37.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X