ರಾಜ್ಯದಲ್ಲಿ ಏಳು ಹೊಸ ರಾಷ್ಟ್ರೀಯ ಹೆದ್ದಾರಿಗಳು
ಬೆಂಗಳೂರು, ಮೇ 7 : ಕೇಂದ್ರದ ಯುಪಿಎ ಸರ್ಕಾರ ತನ್ನ ಅಧಿಕಾರಾವಧಿಯ ಕೊನೆಯ ದಿನಗಳಲ್ಲಿ ಕರ್ನಾಟಕದ ಎಂಟು ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳಾಗಿ ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆಗೆ ಅಂಗೀಕಾರ ನೀಡಿದೆ. ಒಟ್ಟು 1668.03 ಕಿ.ಮೀ. ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗಲಿದೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಲೋಕೋಪಯೋಗಿ ಸಚಿವ ಡಾ.ಎಚ್.ಎಸ್.ಮಹದೇವಪ್ಪ, ಬೆಂಗಳೂರು-ಮೈಸೂರು ನಡುವಿನ ಹೆದ್ದಾರಿಯನ್ನು ಆರು ಪಥದ ರಸ್ತೆಯಾಗಿ ಪರಿವರ್ತಿಸುವ ಕಾಮಗಾರಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಜೊತೆಗೆ ತುಮಕೂರು- ಶಿವಮೊಗ್ಗ ನಡುವಿನ 203 ಕಿ.ಮೀ. ಮಾರ್ಗವನ್ನು 2030 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಪಥದ ರಸ್ತೆಯನ್ನಾಗಿ ಮೇಲ್ದ ರ್ಜೆಗೇರಿಸಲು ಒಪ್ಪಿಗೆ ದೊರೆತಿದೆ ಎಂದರು. [ಬೆಂ-ಮೈಸೂರು ನಡುವೆ ಆರುಪಥದ ರಸ್ತೆ]

ರಾಜ್ಯದ ಒಟ್ಟು 1668.03 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿಯನ್ನು ಸುಮಾರು 40 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲಾಗುವುದು. ಇದರಿಂದ ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಯವು ಜೊತೆಗೆ ಅಪಘಾತಗಳ ನಿಯಂತ್ರಣವಾಗಲಿದೆ ಎಂದರು. ಈ ಕಾಮಗಾರಿಗಾ ಆರಂಭಿಸಲು ಶೀಘ್ರವೇ ಟೆಂಡರ್ ಕರೆಯಲಾಗುತ್ತದೆ ಎಂದು ಸಚಿವರು ಹೇಳಿದರು. [ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಟೋಲ್ ವಿವಾದ]
ಅಭಿವೃದ್ಧಿಯಾಗಲಿರುವ ರಸ್ತೆಗಳು : ಬೀದರ್-ಹುಮ್ನಾಬಾದ್-ಗುಲ್ಬರ್ಗ-ಜೇವರ್ಗಿ-ಬಿಜಾಪುರ- ಹೊಸಪೇಟೆ (680 ಕಿ.ಮೀ.), ಬೆಂಗಳೂರು-ಮೈಸೂರು-ಮಡಿಕೇರಿ-ಬಂಟ್ವಾಳ (367 ಕಿ.ಮೀ.), ತೀರ್ಥಹಳ್ಳಿ-ಆಗುಂಬೆ-ಹೆಬ್ರಿ (87 ಕಿ.ಮೀ.), ಶಿವಮೊಗ್ಗ-ತುಮಕೂರು (203 ಕಿ.ಮೀ.), ಸಿರಗುಪ್ಪ-ಬಳ್ಳಾರಿ- ಹಿರಿಯೂರು-ಹುಳಿಯಾರ್-ಚಿಕ್ಕನಾಯಕನಹಳ್ಳಿ-ನಾಗಮಂಗಲ-ಶ್ರೀರಂಗಪಟ್ಟಣ-ಮೈಸೂರು-ನಂಜನಗೂಡು (638 ಕಿ.ಮೀ.), ಮೂಡಿಗೆರೆ- ಚಿಕ್ಕಮಗಳೂರು (72 ಕಿ.ಮೀ.), ಕೂಕನೂರು-ಯಲಬುರ್ಗಾ-ಗಜೇಂದ್ರಗಢ-ಬಾದಾಮಿ-ಗುಳೇದ್ ಗುಡ್ಡ-ಬಾಗಲಕೋಟೆ (156 ಕಿ.ಮೀ.), ಚೌಡಾಪುರ-ಅಫಜಲ್ ಪುರ (104 ಕಿ.ಮೀ.).
ಹೊಸ ಪ್ರಸ್ತಾವನೆ : ಕೇಂದ್ರ ಸರ್ಕಾರ 8 ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜಗೆ ಏರಿಸಲು ಒಪ್ಪಿಗೆ ನೀಡಿದ ನಂತರ ರಾಜ್ಯ ಸರ್ಕಾರ ಮತ್ತಷ್ಟ್ರು ರಾಜ್ಯ ಹೆದ್ದಾರಿಗಳನ್ನು ಪರಿವರ್ತನೆ ಮಾಡಲು ಪ್ರಸ್ತಾವನೆ ಸಲ್ಲಿಸಿದೆ. ಮೈಸೂರು-ಬನ್ನೂರು-ಮಳವಳ್ಳಿ (45 ಕಿ.ಮೀ.), ಸಂಕೇಶ್ವರ-ಗೋಕಾಕ್-ಜಗಳೂರು (335 ಕಿ.ಮೀ.), ಖಾನಾಪುರ-ತಾಳಗುಪ್ಪ-ಭಟ್ಕಳ (296 ಕಿ.ಮೀ.) ಹಾಗೂ ಬೆಳಗಾವಿ-ಬಾಗಲಕೋಟೆ-ರಾಯಚೂರು-ಮೆಹಬೂಬ್ ನಗರ (336 ಕಿ.ಮೀ.) ಮಾರ್ಗಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಪರಿವರ್ತಿಸಲು ಪಸ್ತಾವನೆ ಸಲ್ಲಿಸಲಾಗಿದೆ.











Click it and Unblock the Notifications