ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೋಶಿ, ಗೀತಾ ಸೇರಿ ಸೋಮವಾರ 73 ನಾಮಪತ್ರ

|
Google Oneindia Kannada News

ಬೆಂಗಳೂರು, ಮಾ. 25 : ಲೋಕಸಭಾ ಚುನಾವಣೆಗೆಗಾಗಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಸೋಮವಾರ ರಾಜ್ಯದಲ್ಲಿ ಒಟ್ಟು 73 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಅಧಿಸೂಚನೆ ಪ್ರಕಟವಾದ ಐದು ದಿನಗಳಲ್ಲಿ 190 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ರಾಜ್ಯ ಮುಖ್ಯಚುನಾವಣಾಧಿಕಾರಿ ಅನಿಲ್‌ಕುಮಾರ್‌ ಝಾ ಹೇಳಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ರಾಜ್ಯ ಮುಖ್ಯಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ, ಸೋಮವಾರ ಒಟ್ಟು 73 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದರು. ಲೋಕಸಭೆ ಚುನಾವಣೆಗೆ ಚುನಾವಣಾ ಆಯೋಗ ಸಜ್ಜಾಗಿದೆ. ರಾಜ್ಯದಲ್ಲಿ ಒಟ್ಟು 4.46 ಕೋಟಿ ಮತದಾರರಿದ್ದಾರೆ. ಕಳೆದ ಬಾರಿಗಿಂತ 28 ಲಕ್ಷ ಮತದಾರರು ಹೆಚ್ಚಾಗಿದ್ದಾರೆ ಎಂದರು. ಪತ್ರಿಕಾಗೋಷ್ಠಿಯ ವಿವರಗಳು (ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ)

73 ಅಭ್ಯರ್ಥಿಗಳ ನಾಮಪತ್ರ

73 ಅಭ್ಯರ್ಥಿಗಳ ನಾಮಪತ್ರ

ಶಿವಮೊಗ್ಗದಿಂದ ಜೆಡಿಎಸ್ ನ ಗೀತಾ ಶಿವರಾಜ್‌ ಕುಮಾರ್‌, ವಿಜಾಪುರದಿಂದ ಕಾಂಗ್ರೆಸ್‌ ಅಭ್ಯರ್ಥಿ ಪ್ರಕಾಶ್‌ ರಾಠೊಡ್‌, ಗುಲ್ಬರ್ಗದಿಂದ ಬಿಜೆಪಿಯ ರೇವುನಾಯಕ್‌ ಬೆಳಮಗಿ, ಜೆಡಿಎಸ್‌ ಧೂಳಪ್ಪ, ಜೆಡಿಯುನ ತಿಪ್ಪಣ್ಣ, ಧಾರವಾಡದಿಂದ ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ ಜೋಶಿ, ಉತ್ತರ ಕನ್ನಡದಿಂದ ಜೆಡಿಎಸ್‌ ಶಿವಾನಂದ ನಾಯ್ಕ, ಹಾವೇರಿಯಿಂದ ಬಿಜೆಪಿಯ ಶಿವಕುಮಾರ್‌ ಉದಾಸಿ, ಬೆಳಗಾವಿಯಿಂದ ಬಿಜೆಪಿಯ ಸುರೇಶ್‌ ಅಂಗಡಿ, ಕಾಂಗ್ರೆಸ್‌ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ, ಕೊಪ್ಪಳದಿಂದ ಬಿಜೆಪಿಯ ಸಂಗಣ್ಣ ಕರಡಿ, ಹಾಸನದಿಂದ ಬಿಜೆಪಿಯ ಸಿ.ಎಚ್‌.ವಿಜಯಶಂಕರ್‌ ಮುಂತಾದವರು ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.

ಚುನಾವಣೆಗೆ ಆಯೋಗ ಸಿದ್ಧವಾಗಿದೆ

ಚುನಾವಣೆಗೆ ಆಯೋಗ ಸಿದ್ಧವಾಗಿದೆ

ಲೋಕಸಭೆ ಚುನಾವಣೆಗೆ ಚುನಾವಣಾ ಆಯೋಗ ಸಜ್ಜಾಗಿದೆ. ರಾಜ್ಯದಲ್ಲಿ ಒಟ್ಟು 4.46 ಕೋಟಿ ಮತದಾರರಿದ್ದಾರೆ. ಕಳೆದ ಬಾರಿಗಿಂತ 28 ಲಕ್ಷ ಮತದಾರರು ಹೆಚ್ಚಾಗಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಹೇಳಿದ್ದಾರೆ.
ಮತದಾರರ ವಿವರ
ಒಟ್ಟು ಮತದಾರರು- 4,46,43,877
ಪುರುಷರು - 2,27,78,644
ಮಹಿಳೆಯರು - 2,18,65,233
18-19 ವಯಸ್ಸಿನವರು - 8 ಲಕ್ಷ

ಬೇಕಾಬಿಟ್ಟಿ ಕರಪತ್ರ ಮುದ್ರಿಸಬೇಡಿ

ಬೇಕಾಬಿಟ್ಟಿ ಕರಪತ್ರ ಮುದ್ರಿಸಬೇಡಿ

ಅಭ್ಯರ್ಥಿ ಅಥವಾ ಪಕ್ಷಗಳ ಪರವಾಗಿ ಪೋಸ್ಟರ್‌ ಅಥವಾ ಕರಪತ್ರ ಮುದ್ರಿಸುವ ಮುದ್ರಣ ಸಂಸ್ಥೆಗಳು ಕಡ್ಡಾಯವಾಗಿ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ಒದಗಿಸಬೇಕು ಎಂದು ಚುನಾವಣಾ ವಿಶೇಷ ಆಯುಕ್ತರು ಸೂಚನೆ ನೀಡಿದ್ದಾರೆ. ಜನಪ್ರತಿನಿಧಿ ಕಾಯ್ದೆ ಪ್ರಕಾರ ಕರಪತ್ರ ಹಾಗೂ ಪೋಸ್ಟರ್‌ಗಳಿಗೆ ಖರ್ಚು ಮಾಡಿದ ಮೊತ್ತವೂ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರ್ಪಡೆಯಾಗುತ್ತದೆ. ಆದ್ದರಿಂದ ಅಭ್ಯರ್ಥಿಗಳು ಯಾವ ಮುದ್ರಣ ಸಂಸ್ಥೆಯಲ್ಲಿ ಎಷ್ಟು ಕರಪತ್ರ ಮುದ್ರಿಸಿದ್ದಾರೆ ಎಂಬ ಮಾಹಿತಿಯನ್ನು ಮುದ್ರಣ ಸಂಸ್ಥೆಗಳು ಚುನಾವಣಾ ಅಧಿಕಾರಿಗಳಿಗೆ ನೀಡಬೇಕು. ಕರಪತ್ರಗಳ ಮೇಲೆ ಮುದ್ರಿಸಿದ ಪ್ರತಿಗಳ ಸಂಖ್ಯೆ ಹಾಗೂ ಮುದ್ರಣ ಸಂಸ್ಥೆಯ ಹೆಸರು ಕಡ್ಡಾಯವಾಗಿ ಹಾಕಬೇಕು ಎಂದು ಸೂಚನೆ ನೀಡಿದ್ದಾರೆ. ಮಾಹಿತಿ ನೀಡದೆ ಪೋಸ್ಟರ್‌ ಮುದ್ರಿಸಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ವಶ

ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ವಶ

ರಾಜ್ಯದಲ್ಲಿ ಇದುವರೆಗೆ 1.11 ಕೋಟಿ ರೂ. ಮೌಲ್ಯದ 14406 ಲೀಟರ್‌ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಅನಿಲ್ ಕುಮಾರ್ ಝಾ ಮಾಹಿತಿ ನೀಡಿದ್ದಾರೆ. ಗುಲ್ಬರ್ಗದ ಚಿತ್ತಾಪುರದಲ್ಲಿ 3.6 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದರು. ಧಾರವಾಡದಲ್ಲಿ 4444 ಸೀರೆ, ಕೋಲಾರ ಜಿಲ್ಲೆಯಲ್ಲಿ 100 ಚೀಲ ಅಕ್ಕಿ, ಬೆಂಗಳೂರು ಗ್ರಾಮಾಂತರದಲ್ಲಿ 780 ಸೀರೆ, ಗೋಕಾಕ್‌ನ ಯಮಕನಮರಡಿಯಲ್ಲಿ 480 ಚೀಲ ಅಕ್ಕಿ ಹಾಗೂ 300 ಅಡುಗೆ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಒಂದೇ ದಿನ 33 ಲಕ್ಷ ಹಣ ವಶ

ಒಂದೇ ದಿನ 33 ಲಕ್ಷ ಹಣ ವಶ

ಸೋಮವಾರ ಧಾರವಾಡದಲ್ಲಿ 28 ಲಕ್ಷ, ಹುಬ್ಬಳ್ಳಿ ಗ್ರಾಮಾಂತರದಲ್ಲಿ 2.3 ಲಕ್ಷ, ರಾಮನಗರ ಜಿಲ್ಲೆಯ ಚೆಕ್‌ಪೋಸ್ಟ್‌ನಲ್ಲಿ 1.5 ಲಕ್ಷ, ಗೋಕಾಕ್‌ ಪಟ್ಟಣದಲ್ಲಿ 1.3 ಲಕ್ಷ ಸೇರಿದಂತೆ ಒಂದೇ ದಿನ ಸುಮಾರು 33 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಅನಿಲ್ ಕುಮಾರ್ ಝಾ ಹೇಳಿದರು.

10 ದಿನದಲ್ಲಿ 16 ಲಕ್ಷ ಗುರುತು ಚೀಟಿ

10 ದಿನದಲ್ಲಿ 16 ಲಕ್ಷ ಗುರುತು ಚೀಟಿ

ಸುಮಾರು 16 ಲಕ್ಷ ಮತದಾರರು ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿದ್ದಾರೆ. ಆನ್‌ ಲೈನ್‌ನಲ್ಲಿ ಸಲ್ಲಿಸಲಾಗಿದ್ದ 1.6 ಲಕ್ಷ ಅರ್ಜಿ ಸೇರಿದಂತೆ ಈವರೆಗೆ 15.7ಲಕ್ಷ ಮತದಾರರ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿದ್ದು, ಇನ್ನೂ 30 ರಿಂದ 40 ಸಾವಿರ ಅರ್ಜಿಗಳ ಪರಿಶೀಲನೆ ನಡೆದಿದೆ. ಹತ್ತು ದಿನಗಳಲ್ಲಿ ಬಿಬಿಎಂಪಿ, ಬೆಂಗಳೂರು ಒನ್‌, ಕರ್ನಾಟಕ ಒನ್‌ ಕೇಂದ್ರಗಳಲ್ಲಿ ಎಪಿಕ್‌ ಕಾರ್ಡ್‌ ನೀಡಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಅನಿಲಕುಮಾರ್ ಝಾ ಹೇಳಿದ್ದಾರೆ.

English summary
Elections 2014 : On Monday, March 24 About 73 candidates belonging to national and regional parties as well as independents filed nominations for the Lok Sabha elections said, state chief electoral officer Anil Kumar Jha. March 26 last date for nominations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X