• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕ; 7 ದಿನದಲ್ಲಿ 65,185 ಹೊಸ ಕೋವಿಡ್ ಪ್ರಕರಣ ದಾಖಲು!

|

ಬೆಂಗಳೂರು, ಅಕ್ಟೋಬರ್ 05: ಕರ್ನಾಟಕದಲ್ಲಿ ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 6,40,661ಕ್ಕೆ ಏರಿಕೆಯಾಗಿದೆ. ಒಂದು ವಾರದಲ್ಲಿ ರಾಜ್ಯದಲ್ಲಿ 65,185 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ.

ಭಾನುವಾರ ಕರ್ನಾಟಕದಲ್ಲಿ 10,145 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 67 ಜನರು ಮೃತಪಟ್ಟಿದ್ದಾರೆ. ಹಿಂದಿನ ವಾರ ರಾಜ್ಯದಲ್ಲಿ 60,192 ಪ್ರಕರಣಗಳು 7 ದಿನಗಳಲ್ಲಿ ದಾಖಲಾಗಿತ್ತು.

ಭಾರತ; 24 ಗಂಟೆಯಲ್ಲಿ 75,829 ಹೊಸ ಕೋವಿಡ್ ಪ್ರಕರಣ

ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗಿದ್ದು, ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಸೆಪ್ಟೆಂಬರ್ 28ರ ಬಳಿಕ ಶೇ 32.8ರಷ್ಟು ಪರೀಕ್ಷೆಗಳನ್ನು ಹೆಚ್ಚಿಸಲಾಗಿದೆ. ಪ್ರತಿದಿನ ಸುಮಾರು 84,000 ಪರೀಕ್ಷೆಗಳನ್ನು ಮಾಡಲಾಗುತ್ತಿದೆ.

ಮಾರಕವಾಗಬಹುದು ಕೋವಿಡ್ ಸ್ವ್ಯಾಬ್ ಟೆಸ್ಟ್: ಇರಲಿ ಈ ಎಚ್ಚರಿಕೆ

ಬೆಂಗಳೂರು ನಗರ ಜಿಲ್ಲೆಯಲ್ಲಿ ಭಾನುವಾರ 4340 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಅತಿ ಹೆಚ್ಚು ಪ್ರಕರಣ ದಾಖಲಾಗುತ್ತಿರುವುದು ಬೆಂಗಳೂರಿನಲ್ಲಿಯೇ.

ಅಮೆಜಾನ್‌ನ ಸುಮಾರು 20,000 ಉದ್ಯೋಗಿಗಳಿಗೆ ಕೋವಿಡ್ -19 ಪಾಸಿಟಿವ್

ಕೋವಿಡ್ ಪರೀಕ್ಷೆಗಳು ಹೆಚ್ಚಳ

ಕೋವಿಡ್ ಪರೀಕ್ಷೆಗಳು ಹೆಚ್ಚಳ

ಸೆಪ್ಟೆಂಬರ್ 20ರ ಬಳಿಕ ಕರ್ನಾಟಕದಲ್ಲಿ ಕೋವಿಡ್ ಪರೀಕ್ಷೆಗಳ ಸಂಖ್ಯೆ ಕಡಿಮೆಯಾಗಿತ್ತು. ಆದರೆ, ಅಕ್ಟೋಬರ್ ಮೊದಲ ವಾರದದಲ್ಲಿಯೇ ಪರೀಕ್ಷೆಗಳ ಸಂಖ್ಯೆ ಹೆಚ್ಚಳ ಮಾಡಲಾಗಿದೆ. ಭಾನುವಾರ 85,508 ಮಾದರಿಗಳ ಪರೀಕ್ಷೆಗಳನ್ನು ಮಾಡಲಾಗಿದೆ. ಇದರಿಂದಾಗಿ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.

3ನೇ ಬಾರಿ 10 ಸಾವಿರದ ಗಡಿ ದಾಟಿದೆ

3ನೇ ಬಾರಿ 10 ಸಾವಿರದ ಗಡಿ ದಾಟಿದೆ

ಭಾನುವಾರ ರಾಜ್ಯದಲ್ಲಿ 10,145 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಇದುವರೆಗೂ ಮೂರು ಬಾರಿ ರಾಜ್ಯದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ 10 ಸಾವಿರದ ಗಡಿ ದಾಟಿದೆ. ರಾಜ್ಯದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,15,574.

ಯಾವ ಜಿಲ್ಲೆಯಲ್ಲಿ ಎಷ್ಟು?

ಯಾವ ಜಿಲ್ಲೆಯಲ್ಲಿ ಎಷ್ಟು?

ಭಾನುವಾರ 4,340 ಹೊಸ ಕೋವಿಡ್ ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿವೆ. ರಾಜ್ಯದ ಒಟ್ಟು ಪ್ರಕರಣಗಳಲ್ಲಿ ಶೇ 43ರಷ್ಟು ಬೆಂಗಳೂರಿನ ಪ್ರಕರಣಗಳಿವೆ. ಮೈಸೂರಿನಲ್ಲಿ 1037, ಹಾಸನದಲ್ಲಿ 307 ಮತ್ತು ಬಳ್ಳಾರಿಯಲ್ಲಿ 304 ಪ್ರಕರಣಗಳು ದಾಖಲಾಗಿವೆ.

ಬೆಂಗಳೂರಿನಲ್ಲಿಯೂ ಪರೀಕ್ಷೆ ಹೆಚ್ಚಳ

ಬೆಂಗಳೂರಿನಲ್ಲಿಯೂ ಪರೀಕ್ಷೆ ಹೆಚ್ಚಳ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳೂರು ನಗರದಲ್ಲಿಯೂ ಕೋವಿಡ್ ಪರೀಕ್ಷೆಗಳ ಸಂಖ್ಯೆನ್ನು ಹೆಚ್ಚಳ ಮಾಡಿದೆ. ಸೆಪ್ಟೆಂಬರ್ 28ರ ತನಕ ಪ್ರತಿ ದಿನ 24 ಸಾವಿರ ಪರೀಕ್ಷೆ ನಡೆಯುತ್ತಿತ್ತು. ಈಗ ಅದನ್ನು 33 ಸಾವಿರಕ್ಕೆ ಏರಿಕೆ ಮಾಡಲಾಗಿದೆ.

ಕರ್ನಾಟಕದ ಕೋವಿಡ್ ವರದಿ

ಕರ್ನಾಟಕದ ಕೋವಿಡ್ ವರದಿ

ಭಾನುವಾರದ ವರದಿಯಂತೆ ಕರ್ನಾಟಕದ ಕೋವಿಡ್ ಸೋಂಕಿತರ ಸಂಖ್ಯೆ 6,40,661. ಸಕ್ರಿಯ ಪ್ರಕರಣಗಳು 115574. ಇದುವರೆಗೂ 515782 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. 9286 ಜನರು ರಾಜ್ಯದಲ್ಲಿ ಇದುವರೆಗೂ ಮೃತಪಟ್ಟಿದ್ದಾರೆ.

English summary
Karnataka reported 65,185 new COVID cases in 7 days. State tally stands at 6,40,661 with 10,145 cases being registered on October 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X