Karnataka Election Results 2023: ಹೀನಾಯ ಸೋಲು ಕಂಡ 12 ಸಚಿವರು ಸೇರಿದಂತೆ 59 ಬಿಜೆಪಿ ಶಾಸಕರು
ಶನಿವಾರ, ಮೇ 13ರಂದು 2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ ಮತದಾರರು ಬಿಜೆಪಿ ಸರ್ಕಾರವನ್ನು ತಿರಸ್ಕರಿಸಿ, ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಜನಾದೇಶ ನೀಡಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು 136 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದಿದ್ದು, ಏಕಾಂಗಿಯಾಗಿ ಸರ್ಕಾರ ರಚನೆ ಮಾಡಲಿದೆ.
ಇನ್ನು ಆಡಳಿತರೂಢ ಬಿಜೆಪಿ ಪಕ್ಷ ಕೇವಲ 65 ಸ್ಥಾನ ಗಳಿಸಿ ಭಾರೀ ಮುಖಭಂಗ ಅನುಭವಿಸಿದ್ದು, ಜೆಡಿಎಸ್ ಪಕ್ಷ 20 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇದೇ ವೇಳೆ 4 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಕರ್ನಾಟಕದಾದ್ಯಂತ ಎದ್ದ ಆಡಳಿತ ವಿರೋಧಿ ಅಲೆಗೆ ಕಾಂಗ್ರೆಸ್‌ಗೆ ಬಹುಮತ ಸಿಗಲು ಸಾಧ್ಯವಾಗಿದೆ. ಈ ಅಲೆಯಲ್ಲಿ ಘಟನಾನುಘಟಿ ಹಾಲಿ ಸಚಿವರು ಸೇರಿದಂತೆ 59 ಶಾಸಕರು ಸೋಲು ಕಂಡಿದ್ದಾರೆ. ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಹಲವು ಸಚಿವರು ಮತ್ತು ಶಾಸಕರು ಅನಿರೀಕ್ಷಿತ ಸೋಲು ಕಂಡಿದ್ದಾರೆ. ಬಿಜೆಪಿ ಮಾತ್ರವಲ್ಲದೆ ಕಾಂಗ್ರೆಸ್‌ನ ಹಲವು ಶಾಸಕರು ಮಣ್ಣುಮುಕ್ಕಿದ್ದಾರೆ.
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಕಾಂಗ್ರೆಸ್‌ನ ಲಕ್ಷ್ಮಣ ಸವದಿ ಅವರು ಅಥಣಿಯಲ್ಲಿ ಮಹೇಶ್ ಕುಮಟಳ್ಳಿ ಎದುರು ಗೆದ್ದಿರುವುದು ಬಿಜೆಪಿಗೆ ತೀರಾ ಅವಮಾನವಾಗಿದೆ. ಈ ಕ್ಷೇತ್ರದಲ್ಲಿ ಗೆಲ್ಲಲೇಬೇಕು ಎಂದು ಬಿಜೆಪಿಯ ಪ್ರಯತ್ನಕ್ಕೆ ಸೋಲಾಗಿದೆ.

ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಲಕ್ಷ್ಮಣ ಸವದಿ ಮತ್ತು ಜಗದೀಶ್ ಶೆಟ್ಟರ್ ಅವರನ್ನು ಸೋಲಿಸಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ನಡೆಸಿತ್ತು. ಆದರೆ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ ಸೋಲಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.
ಈ ಬಾರಿ ಸೋಲು ಕಂಡ ಬಿಜೆಪಿ ಶಾಸಕರ ಪಟ್ಟಿ
| ಸೋತವರು | ಕ್ಷೇತ್ರ |
| ಗೋವಿಂದ ಕಾರಜೋಳ | ಮುಧೋಳ |
| ಮುರುಗೇಶ್ ನಿರಾಣಿ | ಬೀಳಗಿ |
| ವೀರಣ್ಣ ಚರಂತಿಮಠ | ಬಾಗಲಕೋಟೆ |
| ಹುನಗುಂದ | ದೊಡ್ಡನಗೌಡ ಪಾಟೀಲ್ |
| ಪಿ ರಾಜೀವ್ | ಕುಡಚಿ |
| ಮಹಾಂತೇಶ್ ದೊಡ್ಡನಗೌಡರ್ | ಕಿತ್ತೂರು |
| ಶ್ರೀಮಂತ್ ಪಾಟೀಲ್ | ಕಾಗವಾಡ |
| ಎಎಸ್ ಪಾಟೀಲ್ ನಡಹಳ್ಳಿ | ಮುದ್ದೇಬಿಹಾಳ |
| ರಾಜುಗೌಡ ನಾಯಕ್ | ಸುರಪುರ |
| ಸೋಮನಗೌಡ ಪಾಟೀಲ್ | ದೇವರಹಿಪ್ಪರಗಿ |
| ವೆಂಕಟರೆಡ್ಡಿ ಮುದ್ನಾಳ್ | ಯಾದಗಿರಿ |
| ರಮೇಶ್ ಬೂಸನೂರು | ಸಿಂದಗಿ |
| ರಾಜಕುಮಾರ್ ಪಾಟೀಲ್ | ಸೇಡಂ |
| ದತ್ತಾತ್ರೇಯ ಪಾಟೀಲ್ ರೇವೂರು | ಕಲಬುರಗಿ ದಕ್ಷಿಣ |
| ಸುಭಾಷ್ ಗುತ್ತೇದಾರ್ | ಆಳಂದ |
| ಶಿವನಗೌಡ ನಾಯಕ್ | ದೇವದುರ್ಗ |
| ಬಸವರಾಜ್ ದಡೇಸಗೂರ್ | ಕನಕಗಿರಿ |
| ಪರಣ್ಣ ಮುನವಳ್ಳಿ | ಗಂಗಾವತಿ |
| ಹಾಲಪ್ಪ ಆಚಾರ್ | ಯಲಬುರ್ಗಾ |
| ಶಂಕರ್ ಪಾಟೀಲ್ ಮುನೇನಕೊಪ್ಪ | ನವಲಗುಂದ |
| ಕಳಕಪ್ಪ ಬಂಡಿ | ರೋಣ |
| ಅಮೃತ್ ದೇಸಾಯಿ | ಧಾರವಾಡ |
| ರೂಪಾಲಿ ನಾಯ್ಕ್ | ಕಾರವಾರ-ಅಂಕೋಲಾ |
| ವಿಶ್ವೇಶ್ವರ ಹೆಗಡೆ ಕಾಗೇರಿ | ಶಿರಸಿ |
| ಸುನೀಲ್ ನಾಯ್ಕ್ | ಭಟ್ಕಳ |
| ವಿರೂಪಾಕ್ಷಪ್ಪ ಬಳ್ಳಾರಿ | ಬ್ಯಾಡಗಿ |
| ಬಿಸಿ ಪಾಟೀಲ್ | ಹಿರೇಕೆರೂರು |
| ಅರುಣ್ ಕುಮಾರ್ ಪೂಜಾರ್ | ರಾಣೇಬೆನ್ನೂರು |
| ಎಂಎಸ್ ಸೋಮಲಿಂಗಪ್ಪ | ಶಿರಗುಪ್ಪ |
| ಬಿ. ಶ್ರೀರಾಮಲು | ಬಳ್ಳಾರಿ ಗ್ರಾಮೀಣ |
| ಸೋಮಶೇಖರ್ ರೆಡ್ಡಿ | ಬಳ್ಳಾರಿ ನಗರ |
| ಜಿ. ತಿಪ್ಪಾರೆಡ್ಡಿ | ಚಿತ್ರದುರ್ಗ |
| ಪೂರ್ಣಿಮಾ ಶ್ರೀನಿವಾಸ್ | ಹಿರಿಯೂರು |
| ಎಸ್‌ವಿ ರಾಮಚಂದ್ರ | ಜಗಳೂರು |
| ಕರುಣಾಕರ ರೆಡ್ಡಿ | ಹರಪನಹಳ್ಳಿ |
| ಎಂಪಿ ರೇಣುಕಾಚಾರ್ಯ | ಹೊನ್ನಾಳಿ |
| ಅಶೋಕ್ ನಾಯಕ್ | ಶಿವಮೊಗ್ಗ ಗ್ರಾಮಾಂತರ |
| ಕುಮಾರ್ ಬಂಗಾರಪ್ಪ | ಸೊರಬ |
| ಹರತಾಳು ಹಾಲಪ್ಪ | ಸಾಗರ |
| ಸಿಟಿ ರವಿ | ಚಿಕ್ಕಮಗಳೂರು |
| ಡಿಎಸ್ ಸುರೇಶ್ | ತರೀಕೆರೆ |
| ಬೆಳ್ಳಿ ಪ್ರಕಾಶ್ | ಕಡೂರು |
| ಮಾಧುಸ್ವಾಮಿ | ಚಿಕ್ಕನಾಯಕನಹಳ್ಳಿ |
| ಬಿಸಿ ನಾಗೇಶ್ | ತಿಪಟೂರು |
| ಮಸಾಲೆ ಜಯರಾಂ | ತುರುವೆಕೆರೆ |
| ರಾಜೇಶ್ ಗೌಡ | ಶಿರಾ |
| ಡಾ. ಕೆ. ಸುಧಾಕರ್ | ಚಿಕ್ಕಬಳ್ಳಾಪುರ |
| ಎಂಟಿಬಿ ನಾಗರಾಜ್ | ಹೊಸಕೋಟೆ |
| ಆರ್ ಅಶೋಕ್ | ಕನಕಪುರ |
| ನಾರಾಯಣ ಗೌಡ | ಕೆಆರ್ ಪೇಟೆ |
| ಪ್ರೀತಂ ಗೌಡ | ಹಾಸನ |
| ಅಪ್ಪಚ್ಚು ರಂಜನ್ | ಮಡಿಕೇರಿ |
| ಕೆ.ಜಿ. ಬೋಪಯ್ಯ | ವಿರಾಜಪೇಟೆ |
| ಹರ್ಷವರ್ಧನ | ನಂಜನಗೂಡು |
| ಚಾಮರಾಜ | ಎಲ್ ನಾಗೇಂದ್ರ |
| ವಿ. ಸೋಮಣ್ಣ | ವರುಣಾ |
| ಎನ್ ಮಹೇಶ್ | ಕೊಳ್ಳೇಗಾಲ |
| ವಿ ಸೋಮಣ್ಣ | ಚಾಮರಾಜನಗರ |
| ನಿರಂಜನ್ ಕುಮಾರ್ | ಗುಂಡ್ಲುಪೇಟೆ |












Click it and Unblock the Notifications