ಕರ್ನಾಟಕದಲ್ಲಿ ಕೊವಿಡ್ ಸ್ಫೋಟ: 5536 ಮಂದಿಗೆ ಅಂಟಿದ ಮಹಾಮಾರಿ!

ಬೆಂಗಳೂರು, ಜುಲೈ.28: ಕರುನಾಡಿನಲ್ಲಿ ಕೊರೊನಾವೈರಸ್ ಸೋಂಕಿನ ಅಟ್ಟಹಾಸ ಮಿತಿಮೀರುತ್ತಿದೆ. ಗಂಟೆ ಗಂಟೆಗೂ ಮಹಾಮಾರಿಯು ಮನೆ ಮನೆಗಳಿಗೆ ಹರಡುತ್ತಿದೆಯಾ ಎಂಬ ಅನುಮಾನವನ್ನು ಅಂಕಿ-ಅಂಶಗಳು ಹುಟ್ಟು ಹಾಕುತ್ತಿವೆ.

Recommended Video

      Andre Russell wasn't unhappy with me : Dinesh Karthik | Oneindia Kannada

      ಕಳೆದ 24 ಗಂಟೆಗಳಲ್ಲೇ ರಾಜ್ಯದಲ್ಲಿ ಬರೋಬ್ಬರಿ 5536 ಮಂದಿಗೆ ಕೊರೊನಾವೈರಸ್ ಸೋಂಕು ಅಂಟಿಕೊಂಡಿರುವುದು ವೈದ್ಯಕೀಯ ತಪಾಸಣೆ ವೇಳೆ ಖಾತ್ರಿಯಾಗಿದೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆಯು 107001ಕ್ಕೆ ಏರಿಕೆಯಾಗಿದೆ.

      ಕರ್ನಾಟಕದಲ್ಲಿ ಒಟ್ಟು 107001 ಸೋಂಕಿತ ಪ್ರಕರಣಗಳ ಪೈಕಿ 40504 ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ 64434 ಸಕ್ರಿಯ ಪ್ರಕರಣಗಳಿದ್ದು, ಕಳೆದ 24 ಗಂಟೆಗಳಲ್ಲೇ ಮಹಾಮಾರಿಗೆ 102 ಮಂದಿ ಪ್ರಾಣ ಬಿಟ್ಟಿದ್ದಾರೆ. ಕೊವಿಡ್-19ಗೆ ಬಲಿಯಾದವರ ಸಂಖ್ಯೆಯು 2055ಕ್ಕೆ ಏರಿಕೆಯಾಗಿದೆ.

      ರಾಜ್ಯದ ಎಷ್ಟು ಜನರಿಗೆ ಕೊರೊನಾವೈರಸ್ ತಪಾಸಣೆ?

      ರಾಜ್ಯದ ಎಷ್ಟು ಜನರಿಗೆ ಕೊರೊನಾವೈರಸ್ ತಪಾಸಣೆ?

      ಕಳೆದ 24 ಗಂಟೆಗಳಲ್ಲಿ 16340 ಜನರನ್ನು ರಾಪಿಡ್ ಆಂಟಿಜೆನ್ ಡಿಟೆಕ್ಷನ್ ತಪಾಸಣೆಗೆ ಒಳಪಡಿಸಲಾಗಿದ್ದು, 21,380 ಜನರಿಗೆ RT-PCR ತಪಾಸಣೆ ನಡೆಸಲಾಗಿದೆ. ಒಂದೇ ದಿನ 37720 ಜನರನ್ನು ಕೊವಿಡ್-19 ಟೆಸ್ಟ್ ಗೆ ಒಳಪಡಿಸಲಾಗಿದೆ. ರಾಜ್ಯದಲ್ಲಿ ಇದುವರೆಗೂ 12,42,771 ಜನರಿಗೆ ಕೊವಿಡ್-19 ತಪಾಸಣೆ ಮಾಡಲಾಗಿದೆ.

      ಸಿಲಿಕಾನ್ ಸಿಟಿಯಲ್ಲಿ ಮುಂದುವರಿದ ಕೊವಿಡ್-19 ಆರ್ಭಟ

      ಸಿಲಿಕಾನ್ ಸಿಟಿಯಲ್ಲಿ ಮುಂದುವರಿದ ಕೊವಿಡ್-19 ಆರ್ಭಟ

      ರಾಜ್ಯ ರಾಜಧಾನಿಯಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು ಪ್ರತಿನಿತ್ಯ ಜನರನ್ನು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಕಳೆದ 24 ಗಂಟೆಗಳಲ್ಲೇ 1898 ಮಂದಿಗೆ ಮಹಾಮಾರಿ ಅಂಟಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 48821ಕ್ಕೆ ಏರಿಕೆಯಾಗಿದೆ. ಒಂದೇ ದಿನ ಕೊರೊನಾವೈರಸ್ ನಿಂದಾಗಿ 40 ಮಂದಿ ಪ್ರಾಣ ಬಿಟ್ಟಿದ್ದು, ಇದುವರೆಗೂ ಬೆಂಗಳೂರು ಒಂದರಲ್ಲೇ ಹೆಮ್ಮಾರಿಗೆ 957 ಜನರು ಉಸಿರು ಚೆಲ್ಲಿದ್ದಾರೆ.

      ಯಾವ ಜಿಲ್ಲೆಯಲ್ಲಿ ಎಷ್ಟು ಕೊವಿಡ್-19 ಕೇಸ್?

      ಯಾವ ಜಿಲ್ಲೆಯಲ್ಲಿ ಎಷ್ಟು ಕೊವಿಡ್-19 ಕೇಸ್?

      ರಾಜ್ಯದಲ್ಲಿ ಒಟ್ಟು 5536 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದು, 30 ಜಿಲ್ಲೆಗಳಲ್ಲೂ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರು 1898, ಬಳ್ಳಾರಿ 452, ಕಲಬುರಗಿ 283, ಬೆಳಗಾವಿ 228, ಮೈಸೂರು 220, ತುಮಕೂರು 207, ಕೋಲಾರ 174, ದಕ್ಷಿಣ ಕನ್ನಡ 173, ಧಾರವಾಡ 173, ವಿಜಯಪುರ 153, ಕೊಪ್ಪಳ 144, ದಾವಣಗೆರೆ 135, ಬಾಗಲಕೋಟೆ 115, ಉಡುಪಿ 109, ಹಾಸನ 108, ಬೆಂಗಳೂರು ಗ್ರಾಮಾಂತರ 107, ರಾಮನಗರ 101, ಮಂಡ್ಯ 96, ರಾಯಚೂರು 93, ಗದಗ 73, ಚಿಕ್ಕಬಳ್ಳಾಪುರ 72, ಯಾದಗಿರಿ 67, ಚಿತ್ರದುರ್ಗ 66, ಚಿಕ್ಕಮಗಳೂರು 55, ಶಿವಮೊಗ್ಗ 54, ಚಾಮರಾಜನಗರ 52, ಉತ್ತರ ಕನ್ನಡ 47, ಹಾವೇರಿ 40, ಬೀದರ್ 39, ಕೊಡಗು 2 ಮಂದಿಗೆ ಸೋಂಕು ಅಂಟಿಕೊಂಡಿದೆ.

      ತುರ್ತುನಿಗಾ ಘಟಕದಲ್ಲಿ 612 ಮಂದಿ ಕೊವಿಡ್-19 ಸೋಂಕಿತರು

      ತುರ್ತುನಿಗಾ ಘಟಕದಲ್ಲಿ 612 ಮಂದಿ ಕೊವಿಡ್-19 ಸೋಂಕಿತರು

      ಕರ್ನಾಟಕದಲ್ಲಿ ಒಟ್ಟು 612 ಕೊರೊನಾವೈರಸ್ ಸೋಂಕಿತರಿಗೆ ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಬೆಂಗಳೂರು 331, ಧಾರವಾಡ 34, ಕಲಬುರಗಿ 29, ಹಾಸನ 24, ಬಳ್ಳಾರಿ 20, ಮಂಡ್ಯ 17, ರಾಯಚೂರು 71, ಗದಗ 16, ಕೊಪ್ಪಳ 15, ಮೈಸೂರು 12, ಬೀದರ್ 11, ಬೆಳಗಾವಿ 9, ದಾವಣಗೆರೆ 8, ಹಾವೇರಿ 8, ಶಿವಮೊಗ್ಗ 8, ದಕ್ಷಿಣ ಕನ್ನಡ 7, ಚಾಮರಾಜನಗರ 6, ಚಿತ್ರದುರ್ಗ 6, ಉತ್ತರ ಕನ್ನಡ 6, ಉಡುಪಿ 5, ಬಾಗಲಕೋಟೆ 4, ಕೊಡಗು 2, ಚಿಕ್ಕಮಗಳೂರು 2, ವಿಜಯಪುರ 1 ಸೋಂಕಿತರಿಗೆ ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+