ಕರ್ನಾಟಕದಲ್ಲಿ 5199 ಮಂದಿಗೆ ಅಂಟಿದ ಕೊರೊನಾವೈರಸ್
ಬೆಂಗಳೂರು, ಜುಲೈ.26: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆ ಪ್ರಮಾಣ ದಿನದಿಂದ ದಿನಕ್ಕೆ ಜನರ ಎದೆಯಲ್ಲಿ ನಡುಕ ಹುಟ್ಟಿಸುತ್ತಿದೆ. ರಾಜ್ಯದಲ್ಲಿ ಪ್ರತಿದಿನ ಸೋಂಕಿತರ ಸಂಖ್ಯೆಯು 5000ಗಡಿ ದಾಟುತ್ತಿದೆ.
Recommended Video
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಆಘಾತವನ್ನು ಉಂಟು ಮಾಡಿದೆ. ಒಂದೇ ದಿನ ರಾಜ್ಯದಲ್ಲಿ 5199 ಮಂದಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು ಕೊರೊನಾವೈರಸ್ ಸೋಂಕಿತರ ಸಂಖ್ಯೆ 96141ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 12531 ಜನರನ್ನು ರಾಪಿಡ್ ಆಂಟಿಜೆನ್ ಡಿಟೆಕ್ಷನ್ ತಪಾಸಣೆಗೆ ಒಳಪಡಿಸಲಾಗಿದ್ದು, 21,034 ಜನರಿಗೆ RT-PCR ತಪಾಸಣೆ ನಡೆಸಲಾಗಿದೆ. ಒಂದೇ ದಿನ 33565 ಜನರನ್ನು ಕೊವಿಡ್-19 ಟೆಸ್ಟ್ ಗೆ ಒಳಪಡಿಸಲಾಗಿದೆ. ರಾಜ್ಯದಲ್ಲಿ ಇದುವರೆಗೂ 11,76,827 ಜನರಿಗೆ ಕೊವಿಡ್-19 ತಪಾಸಣೆ ಮಾಡಲಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಕೊರೊನಾವೈರಸ್ ಸ್ಫೋಟ
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆಯಲ್ಲಿ ಸಿಲಿಕಾನ್ ಸಿಟಿಯದ್ದೇ ಸಿಂಹಪಾಲು. ಇಂದೂ ಕೂಡಾ ಬೆಂಗಳೂರಿನಲ್ಲಿ 1950 ಮಂದಿಗೆ ಕೊರೊನಾವೈರಸ್ ಸೋಂಕು ತಗಲಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆಯು 45453ಕ್ಕೆ ಏರಿಕೆಯಾಗಿದೆ. ಈ ಪೈಕಿ 11405 ಸೋಂಕಿತರು ಗುಣಮುಖರಾಗಿದ್ದರೆ, 33156 ಸಕ್ರಿಯ ಪ್ರಕರಣಗಳಿವೆ. ಒಂದೇ ದಿನ ಬೆಂಗಳೂರಿನಲ್ಲಿ ಮಹಾಮಾರಿಗೆ 29 ಮಂದಿ ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ 891ಕ್ಕೆ ಏರಿಕೆಯಾಗಿದೆ.

ಕರ್ನಾಟಕದ ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?
ರಾಜ್ಯದಲ್ಲಿ ಒಟ್ಟು 5199 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದು, 30 ಜಿಲ್ಲೆಗಳಲ್ಲೂ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರು 1950, ಬಳ್ಳಾರಿ 579, ಮೈಸೂರು 230, ಬೆಂಗಳೂರು ಗ್ರಾಮಾಂತರ 213, ದಕ್ಷಿಣ ಕನ್ನಡ 199, ಉಡುಪಿ 169, ಧಾರವಾಡ 165, ಹಾಸನ 164, ಬೆಳಗಾವಿ 163, ಕಲಬುರಗಿ 152, ವಿಜಯಪುರ 132, ರಾಯಚೂರು 131, ದಾವಣಗೆರೆ 89, ಉತ್ತರ ಕನ್ನಡ 85, ಚಿಕ್ಕಬಳ್ಳಾಪುರ 81, ಬೀದರ್ 77, ಮಂಡ್ಯ 64, ಗದಗ 61, ಚಿಕ್ಕಮಗಳೂರು 61, ಯಾದಗಿರಿ 56, ಚಿತ್ರದುರ್ಗ 53, ಕೋಲಾರ 49, ಹಾವೇರಿ 47, ತುಮಕೂರು 46, ಬಾಗಲಕೋಟೆ 41, ಕೊಪ್ಪಳ 40, ಶಿವಮೊಗ್ಗ 39, ಚಾಮರಾಜನಗರ 28, ಕೊಡಗು 20, ರಾಮನಗರ 15 ಮಂದಿಗೆ ಸೋಂಕು ಅಂಟಿಕೊಂಡಿದೆ.

ತುರ್ತುನಿಗಾ ಘಟಕದಲ್ಲಿ 632 ಮಂದಿ ಕೊವಿಡ್-19 ಸೋಂಕಿತರು
ಕರ್ನಾಟಕದಲ್ಲಿ ಒಟ್ಟು 632 ಕೊರೊನಾವೈರಸ್ ಸೋಂಕಿತರಿಗೆ ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಬೆಂಗಳೂರು 353, ಧಾರವಾಡ 37, ಕಲಬುರಗಿ 29, ಹಾಸನ 20, ಬಳ್ಳಾರಿ 19, ಕೊಪ್ಪಳ 19, ಗದಗ 18, ಮಂಡ್ಯ 17, ರಾಯಚೂರು 17, ಮೈಸೂರು 12, ತುಮಕೂರು 12, ಬೀದರ್ 11, ಬೆಳಗಾವಿ 9, ದಾವಣಗೆರೆ 8, ಶಿವಮೊಗ್ಗ 8, ದಕ್ಷಿಣ ಕನ್ನಡ 7, ಚಾಮರಾಜನಗರ 6, ಹಾವೇರಿ 5, ಉಡುಪಿ 5, ಬಾಗಲಕೋಟೆ 4, ಚಿಕ್ಕಬಳ್ಳಾಪುರ 4, ಚಿತ್ರದುರ್ಗ 4, ಉತ್ತರ ಕನ್ನಡ 4, ಕೊಡಗು 2, ಚಿಕ್ಕಮಗಳೂರು 1, ವಿಜಯಪುರ 1 ಸೋಂಕಿತರಿಗೆ ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

2088 ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್
ಕರ್ನಾಟಕದಲ್ಲಿ ಗುರುವಾರ ಬರೋಬ್ಬರಿ 2088 ಮಂದಿಗೆ ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರು ನಗರವೊಂದರಲ್ಲೇ 647 ಮಂದಿ ಗುಣಮುಖರಾಗಿದ್ದಾರೆ. ಬೆಳಗಾವಿ 173, ಬಾಗಲಕೋಟೆ 153, ದಕ್ಷಿಣ ಕನ್ನಡ 147, ವಿಜಯಪುರ 143, ಕಲಬುರಗಿ 132, ಉಡುಪಿ 125, ಉತ್ತರ ಕನ್ನಡ 91, ಶಿವಮೊಗ್ಗ 67, ದಾವಣಗೆರೆ 57, ಧಾರವಾಡ 56, ಯಾದಗಿರಿ 46, ಚಿಕ್ಕಬಳ್ಳಾಪುರ 37, ಬೀದರ್ 32, ಕೊಪ್ಪಳ 29, ಗದಗ 26, ಮಂಡ್ಯ 25, ರಾಯಚೂರು 22, ಚಾಮರಾಜನಗರ 20, ಬಳ್ಳಾರಿ 17, ಮೈಸೂರು 15, ಕೊಡಗು 10, ಕೋಲಾರ 8, ಚಿಕ್ಕಮಗಳೂರು 5, ಹಾವೇರಿ ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೂ 35838 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.












Click it and Unblock the Notifications