ರಂಜಾನ್ ಹಬ್ಬದ ಪ್ರಯುಕ್ತ 500 ಹೆಚ್ಚುವರಿ KSRTC ಬಸ್ ವ್ಯವಸ್ಥೆ

ಬೆಂಗಳೂರು, ಜೂನ್ 23 : ರಂಜಾನ್ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ 500 ಕರ್ನಾಟಕ ರಾಜ್ಯ ಸಾರಿಗೆ ನಿಗಮ (ಕೆಎಸ್ಆರ್ ಟಿಸಿ) ವಿಶೇಷ ಬಸ್ ಗಳ ಸಂಚಾರ ಸೌಲಭ್ಯ ಕಲ್ಪಿಸಿದೆ.

ಜೂನ್ 23 ಮತ್ತು 24ರಂದು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಮಂಗಳೂರು, ಶಿವಮೊಗ್ಗ, ಧರ್ಮಸ್ಥಳ, ಬೆಳಗಾವಿ, ಹುಬ್ಬಳ್ಳಿ ಹಾಗೂ ಉತ್ತರ ಕರ್ನಾಟಕದ ಇತರೆ ಜಿಲ್ಲೆಗಳಿಗೆ ಬಸ್ ಗಳ ಹೊರಡಲಿವೆ. ರಾಜ್ಯ ಮತ್ತು ಹೊರರಾಜ್ಯಗಳಿಂದ ಬೆಂಗಳೂರಿಗೆ ಬರಲು 26ರಂದು ವಿಶೇಷ ಬಸ್ ಗಳು ಸಂಚರಿಸಲಿವೆ.

500 Special KSRTC buses for Ramzan

ಮೈಸೂರು, ಮಡಿಕೇರಿ ಕಡೆ ಹೊರಡುವ ಬಸ್ ಗಳು ಸ್ಯಾಟ್ ಲೈಟ್ ಬಸ್ ನಿಲ್ದಾಣದಿಂದ ಹಾಗೂ ತಮಿಳುನಾಡು, ಆಧ್ರಪ್ರದೇಶ ಕಡೆ ಸಂಚರಿಸುವ ಬಸ್ ಗಳು ಶಾಂತಿನಗರ ಟಿಟಿಎಂಸಿ ಬಸ್ ನಿಲ್ದಾಣದಿಂದ ತೆರಳಲಿವೆ ಎಂದು ಕೆಎಸ್ ಆರ್ ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+