'ಮೋದಿ ಭಾಷಣ ಮಾಡಿದ್ರೂ ಬಿಹಾರದಲ್ಲಿ ಬಿಜೆಪಿ ಸೋತಿಲ್ಲವೇ?'

Posted By:
Subscribe to Oneindia Kannada

ಬೆಂಗಳೂರು, ಮೇ 20 : 'ನಮ್ಮ ನಿರೀಕ್ಷೆಯಂತೆ ಫಲಿತಾಂಶ ಬಂದಿಲ್ಲ. ಲೆಕ್ಕ ಹಾಕಿದರೆ ಬಿಜೆಪಿ ಪ್ರಾಬಲ್ಯ ಕುಸಿದಿದೆ. ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಕರ್ನಾಟಕದ ಮೇಲೆ ಪ್ರಭಾವ ಬೀರುವುದಿಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಸಿದ್ದರಾಮಯ್ಯ ಅವರು, 'ಐದು ರಾಜ್ಯಗಳ ಚುನಾವಣೆ ಫಲಿತಾಂಶ ಕರ್ನಾಟಕದ ಮೇಲೆ ಪ್ರಭಾವ ಬೀರುತ್ತದೆ' ಎಂಬ ಮಾಧ್ಯಮಗಳ ವರದಿಯನ್ನು ತಳ್ಳಿಹಾಕಿದರು. 'ಕಾಂಗ್ರೆಸ್ ಯಾವುದೇ ರಾಜ್ಯಗಳಲ್ಲಿ ನೆಲೆ ಕಳೆದುಕೊಂಡಿಲ್ಲ' ಎಂದರು. [ಐದು ರಾಜ್ಯಗಳ ಫಲಿತಾಂಶ : ಕರ್ನಾಟಕ ಕಾಂಗ್ರೆಸ್ಸಿಗೆ ಪಾಠ!]

siddaramaiah

ಸಿದ್ದರಾಮಯ್ಯ ಹೇಳಿದ್ದೇನು?

* ಕಾಂಗ್ರೆಸ್ ಪಕ್ಷ ಯಾವ ರಾಜ್ಯಗಳಲ್ಲಿಯೂ ನೆಲೆ ಕಳೆದುಕೊಂಡಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ನಮ್ಮ ನಿರೀಕ್ಷೆಯಂತೆ ಫಲಿತಾಂಶ ಬಂದಿಲ್ಲ. [ಸೋಲೊಪ್ಪಿಕೊಂಡ ರಾಹುಲ್ ರನ್ನು ಕಿಚಾಯಿಸಿದ ಟ್ವೀಟ್ಸ್]

* ಅಸ್ಸಾಂನಲ್ಲಿ 15 ವರ್ಷ ಕಾಂಗ್ರೆಸ್ ಅಧಿಕಾರ ನಡೆಸಿದೆ. ಕಾಕತಾಳೀಯವಾಗಿ ಜನರು ಬದಲಾವಣೆ ಬಯಸಿದ್ದರು. ಆದ್ದರಿಂದ, ಅಧಿಕಾರ ಕಳೆದುಕೊಂಡಿದೆ.

* ಚುನಾವಣೆಗಳ ಸೋಲಿಗೆ ರಾಹುಲ್ ಗಾಂಧಿ ಅವರನ್ನು ದೂರುವುದು ಸರಿಯಲ್ಲ. ನರೇಂದ್ರ ಮೋದಿ ಅವರು ಭಾಷಣ ಮಾಡಿದ್ದರೂ ಬಿಹಾರದಲ್ಲಿ ಬಿಜೆಪಿ ಸೋತಿಲ್ಲವೇ?

* ಪಂಚರಾಜ್ಯಗಳ ಫಲಿತಾಂಶ ಲೆಕ್ಕಹಾಕಿದರೆ ಬಿಜೆಪಿ ಪ್ರಾಬಲ್ಯ ಕುಸಿದಿದೆ. 5 ರಾಜ್ಯಗಳಲ್ಲಿ ಬಿಜೆ ಗೆದ್ದಿರುವುದು 65 ಸ್ಥಾನ. ಒಟ್ಟಾರೆಯಾಗಿ ಕಾಂಗ್ರೆಸ್ ಗೆದ್ದಿರುವುದು 115 ಸ್ಥಾನ.

* ಕೇರಳದಲ್ಲಿ ಒಮ್ಮೆ ಯುಡಿಎಫ್, ಒಮ್ಮೆ ಎಲ್‌ಡಿಎಫ್ ಅಧಿಕಾರಕ್ಕೆ ಬರುತ್ತದೆ. ಅಲ್ಲಿನ ಜನರೇ ಹಾಗೆ, ಒಮ್ಮೆ ಒಬ್ಬೊಬ್ಬರಿಗೆ ಮತ ಹಾಕುತ್ತಾರೆ. ಕೇರಳದಲ್ಲಿ ಕಸರತ್ತು ಮಾಡಿದರೂ ಬಿಜೆಪಿ ಗೆದ್ದಿದ್ದು ಮಾತ್ರ 1 ಸ್ಥಾನ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Chief Minister Siddaramaiah denied the reports that 5 states assembly election results may impact on Karnataka.
Please Wait while comments are loading...