ಕುಮಾರಸ್ವಾಮಿ ಅವರಿಗೆ ಮತ್ತೆ ಕೈ ಕೊಡಲಿದೆಯೇ ಅವೇ 5 ಅಂಶಗಳು?

ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿಯಾಗಿ ಇದು ಎರಡನೇ ಅವಕಾಶ. ಕರ್ನಾಟಕ ರಾಜಕಾರಣದ ಅದೃಷ್ಟವಂತ ರಾಜಕಾರಣಿಗಳ ಪೈಕಿ ಕುಮಾರಸ್ವಾಮಿ ಕೂಡ ಒಬ್ಬರು ಎಂಬುದು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುವ ಮಾತು. ಆದರೆ ಕುಮಾರಸ್ವಾಮಿ ಅವರಿಗೆ ಮೊದಲ ಬಾರಿಗೆ ಮುಖ್ಯಮಂತ್ರಿ ಆದಾಗ ಯಾವ ಅಂಶಗಳು ಕೈ ಕೊಟ್ಟವೋ ಈ ಬಾರಿಯೂ ಅದೇ ಪುನರಾವರ್ತನೆ ಆದಂತೆ ಇದೆ.

ಸಮ್ಮಿಶ್ರ ಸರಕಾರದ ಬಗ್ಗೆ ಈಗ ಆಕ್ಷೇಪ ವ್ಯಕ್ತಪಡಿಸಿರುವವರು ಹೇಳಿರುವ ವಿಚಾರಗಳು, ಈ ಹಿಂದೆ ಅಂದರೆ ಕುಮಾರಸ್ವಾಮಿ ಮೊದಲ ಅವಧಿಯಲ್ಲಿ ಕೂಡ ಸಿಟ್ಟು-ಅಸಮಾಧಾನಕ್ಕೆ ಕಾರಣವಾಗಿತ್ತು. ಅವ್ಯಾವು ಕೈ ಕೊಟ್ಟ ಅಂಶಗಳು ಎಂಬ ಪಟ್ಟಿ ಇಲ್ಲಿದೆ.

* ಕುಮಾರಸ್ವಾಮಿ ಅವರ ಸೋದರ ಸಚಿವ ರೇವಣ್ಣ ಅವರು ಎಲ್ಲ ಇಲಾಖೆಯಲ್ಲೂ ಹಸ್ತಕ್ಷೇಪ ಮಾಡುತ್ತಾರೆ.

* ದೇವೇಗೌಡರ ಕುಟುಂಬದವರ ಮೂಗಿನ ಅಡಿಯಲ್ಲೇ ಕೆಲಸ ಮಾಡಿಕೊಂಡು ಹೋಗಬೇಕು.

* ಕುಮಾರಸ್ವಾಮಿ ಅವರು ಬೇರೆಯವರ ಅಭಿಪ್ರಾಯಕ್ಕೆ ಕಿವಿಗೊಡುವುದಿಲ್ಲ. ತಮ್ಮ ಮನಸಿಗೆ ಬಂದದ್ದನ್ನೇ ಮಾಡುತ್ತಾರೆ.

HD Kumaraswamy

* ದೇವೇಗೌಡರು ಹಾಗೂ ಕುಮಾರಸ್ವಾಮಿ ಆಲೋಚನೆಯಲ್ಲೇ ಬಹಳ ವ್ಯತ್ಯಾಸ ಇದೆ. ಇಬ್ಬರೂ ಒಂದೊಂದು ರೀತಿ ಮಾತನಾಡಿ, ಕಾರ್ಯಕರ್ತರು ಮುಖಂಡರು ಗೊಂದಲಕ್ಕೆ ಸಿಲುಕುತ್ತಾರೆ.

* ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಂಡರೆ, ಅವರು ಜತೆಯಲ್ಲಿರು ಪಕ್ಷದಲ್ಲೇ ಬಿರುಕು ತರಲು ಯತ್ನಿಸುತ್ತಾರೆ, ಪಕ್ಷ ಒಡೆಯಲು ಪ್ರಯತ್ನಿಸುತ್ತಾರೆ.

ಕಾಂಗ್ರೆಸ್-ಜೆಡಿಎಸ್ ಈ ಹಿಂದೆ ಮೈತ್ರಿ ಮಾಡಿಕೊಂಡಿದ್ದಾಗ ಧರಂ ಸಿಂಗ್ ಅವರು ಮುಖ್ಯಮಂತ್ರಿ ಆಗಿದ್ದರು. 'ಪಕ್ಷ ಉಳಿಸಿಕೊಳ್ಳುವ' ಸಲುವಾಗಿ ಆಗಿನ ಸರಕಾರವನ್ನು ಕೆಡವಿ, ಬಿಜೆಪಿ ಜತೆಗೆ ಸೇರಿ, ಸರಕಾರ ರಚಿಸಿ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು. ಆದರೆ ಈಗ ಅದೇ ಕೈ-ತೆನೆ ಕಾಂಬಿನೇಷನ್ ನಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದಾರೆ.

ಆ ಸಲ ಎಚ್ ಡಿಕೆ ನೀಡಿದ್ದ 'ಪಕ್ಷ ಉಳಿಸಿಕೊಳ್ಳುವ' ಮಾತನ್ನು ಕಾಂಗ್ರೆಸ್ ನವರು ಈಗ ಹೇಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+