ಬುಧವಾರದಿಂದ ಫೆ.20ರವರೆಗೆ ಆಗಸದಲ್ಲಿ ಪಂಚ ಗ್ರಹಕೂಟ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಗದಗ, ಜನವರಿ, 20: ಆಗಸದಲ್ಲಿ ಬುಧವಾರದಿಂದ ಫೆ.20 ರವರೆಗೆ ಪಂಚ ಗ್ರಹಗಳು ಏಕರೇಖೆಯಲ್ಲಿ ಇರುವುದನ್ನು ಕಣ್ಣಾರೆ ಕಾಣುವ ಸೌಭಾಗ್ಯ ನಮಗೆಲ್ಲ ಬಂದೊದಗಿದೆ. ಬುಧ, ಶುಕ್ರ, ಶನಿ, ಮಂಗಳ ಮತ್ತು ಗುರು ಗ್ರಹಗಳು ಸರಳರೇಖೆಯಲ್ಲಿ ಗೋಚರಿಸಲಿವೆ.

ಗದಗ ಜಿಲ್ಲೆ ರೋಣ ತಾಲೂಕಿನ ಸೂಡಿ ಗ್ರಾಮದ ಬಾಲಕರ ಸರಕಾರಿ ಮಾದರಿ ಕೇಂದ್ರ ಶಾಲೆಯ ಹವ್ಯಾಸಿ ಖಗೋಳ ವೀಕ್ಷಕ ಮತ್ತು ವಿಜ್ಞಾನ ಶಿಕ್ಷಕ ಅಶೋಕ ಉಂಡಿಯವರು ಈ ಕುರಿತು ಮಾಹಿತಿ ನೀಡಿದ್ದು, ಆಗಸ್ಟ್ ತಿಂಗಳಲ್ಲಿ ಇಂತಹ ದೃಶ್ಯ ನೋಡಬಹುದು. ಈ ಅವಕಾಶ ತಪ್ಪಿಸಿಕೊಂಡರೆ ಮತ್ತೆ ಈ ದೃಶ್ಯ 2018ನೇ ಅಕ್ಟೋಬರ್ ನಲ್ಲಿ ಕಾಣುತ್ತದೆ ಎನ್ನುತ್ತಾರೆ.[ಇಸ್ರೋದ ಮತ್ತೊಂದು ಸಾಧನೆಗೆ ನಮ್ಮ ಚಪ್ಪಾಳೆ]

Astrology

ಜನವರಿ 20ರ ಬುಧವಾರ ಪ್ರತಿನಿತ್ಯ ಬೆಳಗಿನ ಜಾವ ಸೂರ್ಯೋದಯಕ್ಕೆ ಮುನ್ನ ಬುಧ, ಶುಕ್ರ, ಶನಿ, ಮಂಗಳ ಮತ್ತು ಗುರು ಗ್ರಹಗಳನ್ನು ಒಟ್ಟಿಗೆ ಒಂದೇ ಸರಳ ರೇಖೆಯಲ್ಲಿ ಇರುವ ದೃಶ್ಯವನ್ನು ಬರೀಗಣ್ಣಿನಿಂದಲೇ ನೋಡಬಹುದಾಗಿದ್ದು, ಯಾವುದೇ ಸಲಕರಣೆಗಳ ಅವಶ್ಯವಿಲ್ಲ ಎನ್ನುತ್ತಾರೆ ಉಂಡಿ.

ಖಗೋಳ ವಿಜ್ಞಾನಿಗಳು, ಹವ್ಯಾಸಿ ಖಗೋಳ ವೀಕ್ಷಕರಿಗೆ ಮತ್ತು ಆಸಕ್ತ ಜನ ಹಾಗೂ ವಿದ್ಯಾರ್ಥಿಗಳಿಗೆ ಇದೊಂದು ಸುಂದರ ಸಿಹಿ ಸುದ್ದಿಯೆನ್ನಬಹುದು. ಶುಭ್ರ ಆಗಸದಲ್ಲಿ ಮೊದಲು ಶುಕ್ರ ಗ್ರಹದೊಟ್ಟಿಗೆ ಇರುವ ಅತ್ಯಂತ ಪ್ರಕಾಶಮಾನವಾದ ಬೆಳ್ಳಿ ಚುಕ್ಕಿ ಕಾಣುತ್ತದೆ. ಮೊದಲು ಅದನ್ನು ನೋಡಿ ಗುರುತಿಸಿಕೊಳ್ಳಬೇಕು. ಅದರ ಕೆಳಗೆ ಬುಧ ಗ್ರಹ ಇರುತ್ತದೆ. ಮೇಲಿನಿಂದ ಶನಿ, ಮಂಗಳ ಮತ್ತು ಗುರುಗ್ರಹಗಳನ್ನು ಏಕರೇಖೆಯಲ್ಲಿ ನೋಡಬಹುದು.[ನಿಮ್ಮನ್ನು ಬೆರಗುಗೊಳಿಸುವ ಮಂಗಳನ 3ಡಿ ಚಿತ್ರಗಳು]

ಇನ್ನು ಜ್ಯೋತಿಷ್ಯಾಸಕ್ತರು ಕ್ರಮವಾಗಿ ಗುರು ಸಿಂಹ ರಾಶಿಯಲ್ಲಿ, ತುಲಾದಲ್ಲಿ ಮಂಗಳ, ವೃಶ್ಚಿಕದಲ್ಲಿ ಶನಿ, ಶುಕ್ರ ಮತ್ತು ಬುಧ ಧನುಸ್ಸು ರಾಶಿಯಲ್ಲಿ ಇರುವುದನ್ನು ಭಾವ ಕುಂಡಲಿಯಲ್ಲಿ ನೋಡಿಕೊಳ್ಳಬಹುದು ಅಥವಾ ಕುಂಡಲಿಯಲ್ಲಿ ಇಂತಹ ಗ್ರಹಕೂಟವನ್ನು ನೋಡಬಹುದು. ಪಾಲಕರು ಮತ್ತು ಶಿಕ್ಷಕರು ಇಂತಹ ಮಹತ್ವದ ದೃಶ್ಯವನ್ನು ಮಕ್ಕಳಿಗೆ ತೋರಿಸಿ ಅವರಲ್ಲಿ ವೈಜ್ಞಾನಿಕ ಹಾಗೂ ಖಗೋಳ ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಬೇಕೆಂದು ಅಶೋಕ ಉಂಡಿ ಮನವಿ ಮಾಡಿದ್ದಾರೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
5 brightest planets Jupiter, Mars, Mercury, Venus, Saturn arranged in a row in sky from january 20 to February 20th told by Gadag astronomer Ashok undi
Please Wait while comments are loading...