ಹಜ್ ಯಾತ್ರೆಗೆ ರಾಜ್ಯದಿಂದ 5 ಸಾವಿರ ಯಾತ್ರಾರ್ಥಿಗಳು

Posted By:
Subscribe to Oneindia Kannada

ಕೊಪ್ಪಳ ಜು.13: ಕರ್ನಾಟಕ ರಾಜ್ಯ ಹಜ್ ಸಮಿತಿಯ ಸಹಕಾರದಲ್ಲಿ ಹೊಸಪೇಟೆಯ ಹಜರತ್‍ ಉಮಾರ್ ಫಂಕ್ಷನ್ ಹಾಲ್ ನಲ್ಲಿ ಹಜ್ ಪ್ರವಾಸ ತರಬೇತಿ ಶಿಬಿರ ಜು.17ರಿಂದ 18ರವರೆಗೆ ಎರಡು ದಿನಗಳ ಕಾಲ ನಡೆಯಲಿದೆ. ಹಜ್ ಯಾತ್ರೆಗೆ ಈ ಬಾರಿ ದೇಶದಿಂದ 1.25ಲಕ್ಷ ಯಾತ್ರಾರ್ಥಿಗಳು ಹಾಗೂ ರಾಜ್ಯದಿಂದ 5 ಸಾವಿರ ಯಾತ್ರಾರ್ಥಿಗಳು ಹೋಗುತ್ತಿದ್ದಾರೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಸೈಯದ್ ಇಜಾಜ್ ಅಹ್ಮದ್ ಹೇಳಿದರು.

ಎರಡು ದಿನಗಳ ಪ್ರವಾಸ ತರಬೇತಿ ಶಿಬಿರದಲ್ಲಿ ಕೊಪ್ಪಳ, ಬಳ್ಳಾರಿ, ರಾಯಚೂರು, ಗದಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಸುಮಾರು 600 ಯಾತ್ರಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಚಾರ್ಟರ್ಡ್ ಅಕೌಂಟೆಂಟ್ ಸೈಯದ್ ಮೊಹ್ಮದ್ ಮತ್ತು ನಿವೃತ್ತ ಕೆಎಎಸ್ ಅಧಿಕಾರಿ ಸೈಯದ್ ಇಜಾಜ್ ಅಹ್ಮದ್ ಹೇಳಿದರು. 2016ರ ಹಜ್ ಟ್ರೈನಿಂಗ್ ಕ್ಯಾಂಪ್‍ಗೆ ಸಂಬಂಧಿಸಿದಂತೆ ಹೊಸಪೇಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. [ಹಜ್ ಯಾತ್ರಿಗಳಿಗೆ ಫ್ರೆಶ್ ಚಿಕನ್, ಮಟನ್ : ಬೇಗ್]

ಹಜ್ ಯಾತ್ರೆಗೆ ರಾಜ್ಯದಿಂದ 5 ಸಾವಿರ ಯಾತ್ರಾರ್ಥಿಗಳು: ಇಸ್ಲಾಂ ಧರ್ಮದ 5 ಕಡ್ಡಾಯ ತತ್ವಗಳಲ್ಲಿ ಹಜ್ ಆಚರಣೆಯೂ ಒಂದಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ದೇಶವು ಅತಿ ಹೆಚ್ಚಿನ ಹಜ್ ಯಾತ್ರಾರ್ಥಿಗಳನ್ನು ಕಳುಹಿಸುವಲ್ಲಿ 2ನೇ ಸ್ಥಾನದಲ್ಲಿದೆ.

5,000 Haj pilgrims to go on pilgrimage this year From Karnataka

ಭಾರತ ಸರ್ಕಾರದ ವಿದೇಶಾಂಗ ಶಾಖೆ, ರಾಷ್ಟ್ರದ ಎಲ್ಲಾ ರಾಜ್ಯ ಹಜ್ ಸಮಿತಿಗಳಿಗೆ, ಹಜ್ ಯಾತ್ರಾರ್ಥಿಗಳಿಗೆ ತರಬೇತಿ ನೀಡಬೇಕೆಂದು ನಿರ್ದೇಶಿಸಿರುವುದರಿಂದ ರಾಜ್ಯದಾದ್ಯಂತ ತರಬೇತಿಗಳು ನಡೆಯುತ್ತವೆ. ಇದರಲ್ಲಿ ಪ್ರಮುಖವಾಗಿ ಗುಲ್ಬರ್ಗ, ಬಿಜಾಪುರ, ಹೊಸಪೇಟೆ ಮತ್ತು ಬೆಂಗಳೂರು ಕೇಂದ್ರಿಕೃತವಾಗಿದ್ದು ಪ್ರಮುಖವಾಗಿವೆ ಎಂದು ಚಾರ್ಟರ್ಡ್ ಅಕೌಂಟೆಂಟ್ ಸೈಯದ್ ಮೊಹ್ಮದ್ ಮತ್ತು ನಿವೃತ್ತ ಕೆಎಎಸ್ ಅಧಿಕಾರಿ ಸೈಯದ್ ಇಜಾಜ್ ಅಹ್ಮದ್ ಅವರು ವಿವರಿಸಿದರು.

ಈ ತರಬೇತಿಯಲ್ಲಿ ಯಾತ್ರಾರ್ಥಿಗಳಿಗೆ ಅವರ ಅಂತಾರಾಷ್ಟ್ರೀಯ ಪ್ರಯಾಣ, ಮೆಕ್ಕಾ ನಗರದಲ್ಲಿ ವಸತಿ ಮತ್ತು ಊಟದ ವ್ಯವಸ್ಥೆಯ ಪರಿಚಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಮಾರು 30 ದಿವಸ ಸೌದಿ ಅರೇಬಿಯಾದಲ್ಲಿ ಆರೋಗ್ಯ ಮತ್ತು ಆಡಳಿತಾತ್ಮಕ ವ್ಯವಸ್ಥೆಯ ಪರಿಚಯ ಸೇರಿದಂತೆ ಇದರೊಂದಿಗೆ ಧಾರ್ಮಿಕವಾಗಿ ಬೋಧನೆ ನೀಡಲಾಗುವುದು.

ಈ ತರಬೇತಿಗೆ ಕರ್ನಾಟಕ ರಾಜ್ಯ ಹಜ್ ಸಮಿತಿ ವತಿಯಿಂದ ಯಾತ್ರೆ ಕೈಗೊಳ್ಳುವವರಲ್ಲದೇ, ಖಾಸಗಿ ಟೂರ್ ಆಪರೇಟರ್‍ಗಳ ಮೂಲಕ ಯಾತ್ರೆ ಕೈಗೊಳ್ಳುವವರನ್ನು ಸಹ ಆಹ್ವಾನಿಸಲಾಗಿದೆ. ಇದರ ಸದುಪಯೋಗವನ್ನು ಎಲ್ಲಾ ಯಾತ್ರಾರ್ಥಿಗಳು ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದ ಅವರು, ತರಬೇತಿಯಲ್ಲಿ ಉಚಿತ ಊಟ ಮತ್ತು ವಸತಿ ಸಯ್ಯದ್ ಮೊಹಮ್ಮದ್ ಮತ್ತು ಸಯ್ಯದ್ ಖಾದರ್ ರಫಾಯಿ ಮತ್ತು ಸ್ನೇಹಿತರು ಕೈಗೊಳ್ಳಲಿದ್ದಾರೆ.

ಇಂಡಿಯನ್ ಹಜ್ ಟ್ರೈನಿಂಗ್ ಫೋರಂ ಪರವಾಗಿ ಹಜರತ್ ಲೂತ್‍ಫುಲ್ಲಾ ಮಜಹರ್ ರಷಾದಿ ಮತ್ತು ನಿವೃತ್ತ ಕೆಎಎಸ್ ಅಧಿಕಾರಿ ಸೈಯಾದ್ ಇಜಾಜ್ ಅಹಮದ್ ಅವರು ಧಾರ್ಮಿಕ ಮತ್ತು ಸಾಮಾಜಿಕ ವಿಷಯಗಳ ಕುರಿತು ತರಬೇತಿ ನೀಡಲಿದ್ದಾರೆ ಎಂದು ಅವರು ವಿವರಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
More than 5,000 people from the State will be going to Haj this year and special flight arrangements have been made for the pilgrims. A two day special camp will be conducted in Hospete from July 17 said retd. KAS officer Syed Ejaj Ahmed.
Please Wait while comments are loading...