ಮತ್ತೆ ಸದ್ದು ಮಾಡಿದ 40% ಕಮಿಷನ್ : ಕೆಂಪಣ್ಣ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದು ಹೀಗೆ?

ಚಿತ್ರದುರ್ಗ , ಫೆಬ್ರವರಿ 09: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 40 % ಕಮಿಷನ್‌ ಆರೋಪ ಸಾಕಷ್ಟು ಸದ್ದು ಮಾಡಿತ್ತು. ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ 40 % ಕಮಿಷನ್ ಸರ್ಕಾರವೆಂದು ಆರೋಪ ಮಾಡಿದ್ದಕ್ಕೆ, ನಾಗಮೋಹನ್ ದಾಸ್ ಕಮಿಷನ್ ಮಾಡಿದ್ದೇವೆ, ದಾಖಲೆ ನೀಡಲಿ ಎಂದು ಕೆಂಪಣ್ಣ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಹೌದು, ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, 40% ಭ್ರಷ್ಟಾಚಾರ ಇದ್ದರೆ ದಾಖಲೆ ನೀಡಲಿ, ಅಲ್ಲದೆ ಅಧಿಕಾರಿಗಳು ಕೇಳುತ್ತಾರೆ ಎಂದಿದ್ದಾರೆ, ಅಂಥವರ ವಿರುದ್ದ ದೂರು ನೀಡಲಿ ಎಂದು ಕೆಂಪಣ್ಣ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ.

40% Commission : Siddaramaiah Challenges Kempanna To Provide Documents For The Allegation

ಅಪ್ಪರ್ ಭದ್ರ ವಿಚಾರದಲ್ಲಿ ನಿರ್ಮಲ ಸೀತಾರಾಮ ಬಜೆಟ್ ನಲ್ಲಿ ಹೇಳಿದ್ದಾರೆ. 2023-24 ಬಜೆಟ್ ನಲ್ಲಿ ಅಪ್ಪರ್ ಭದ್ರಾ ಯೋಜನೆಗೆ 5300 ಕೋಟಿ ಹೇಳಿದ್ದಾರೆ. ಬಜೆಟ್ ನಲ್ಲಿ ಹೇಳಿ ಒಂದು ರೂಪಾಯಿ ಕೂಡಾ ಕೊಟ್ಟಿಲ್ಲ. 8 ಸಾವಿರ ಕೋಟಿಯಲ್ಲಿ 6 ಸಾವಿರ ಕೋಟಿ ನೀಡಿದ್ದೇವೆ. ಅಪ್ಪರ್ ಭದ್ರಾ ವಿಚಾರದಲ್ಲಿ ಡಿಕೆಶಿ ಕೇಳಿದ್ದಾರೆ. ನಾನು ಕೂಡಾ ನೀರಾವರಿ ಮಂತ್ರಿಗಳನ್ನ ಕೇಳಿದ್ದೇನೆ. ಕೇಳಿದ್ರೆ ಕೊಡ್ಬೇಕು ಅಂತ ಎಲ್ಲಿದೆ, ಬಜೆಟ್ ನಲ್ಲಿ ಹೇಳಿದ್ದಾರೆ. ರಾಜ್ಯಸಭಾ ಸದಸ್ಯರಾಗಿ ನಿರ್ಮಲ ಸೀತಾರಾಮನ್ ರಾಜ್ಯದಿಂದ ಆಯ್ಕೆಯಾಗಿದ್ದಾರೆ. ನಮ್ಮ ರಾಜ್ಯ ಪ್ರತಿನಿಧಿಸಿದ್ದಾರೆ, ಜವಬ್ದಾರಿ ಇಲ್ವಾ ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.

ಮಿಸಸ್ ನಿರ್ಮಲ ಸೀತರಾಮನ್ ರಿಜೆಕ್ಟ್ ಮಾಡಿದ್ದಾರೆ. ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಕೇಂದ್ರದಿಂದ 5300 ಕೋಟಿ ಬರುತ್ತದೆ ಎಂದು ಹೇಳಿದ್ದರು. ರಾಷ್ಟ್ರೀಯ ಯೋಜನೆ ಘೋಷಣೆ ಮಾಡಿದ್ದಾರೆ, ಹಣ ಬಿಡುಗಡೆ ಮಾಡಿಲ್ಲ. ಕೇಂದ್ರ ಸರ್ಕಾರದ ಮೇಲೆ ನಿಮಗೆಲ್ಲಾ ಕೋಪ ಬರ್ಬೇಕು ಎಂದು ಹೇಳಿದರು.

40% Commission : Siddaramaiah Challenges Kempanna To Provide Documents For The Allegation

ನಾವು 100 ರೂ.ತೆರಿಗೆ ಕೊಟ್ಟರೆ 12 ರೂ ಮಾತ್ರ. ಇನ್ನುಳಿದ 88 ರೂ. ಕೇಂದ್ರಕ್ಕೆ ಹೋಗುತ್ತದೆ. ಗುಜರಾತ್ ಸಿಎಂ ಆದಾಗ ತೆರಿಗೆ ನಮ್ಮ ರಾಜ್ಯದ್ದು, ನಾವೇ ವಸೂಲಿ ಮಾಡುತ್ತೇವೆ. ನಮಗೆ ಅನ್ಯಾಯ ಆಗಿರುವುದು ನಿಜ ಎಂದ ಅವರು, ಇದನ್ನ ಹೇಳಿದ್ದು ಮಿಸ್ಟರ್ ಮೋದಿ. ಈಗ ದೇಶ ವಿಭಜನೆ ಎಂದು ಹೇಳುತ್ತಿದ್ದಾರೆ, ಆಗ ಏನೂ ಹೇಳುತ್ತಿದ್ದರು. ನಮ್ಮ ಪಾಲು ನಾವು ಕೇಳಿದ್ರೆ, ದೇಶ ವಿಭಜನೆ ಎನ್ನುತ್ತಾರೆ. ದೇಶ ವಿಭಜನೆ ಮಾಡಲು ಹೊರಟವರ್ಯಾರು ಮೋದಿ ಅಲ್ವ ಎಂದು ಪ್ರಶ್ನೆ ಮಾಡಿದ್ದಾರೆ. ನಿಮಗೆ ಕನ್ನಡಿಗರಾಗಿ ಕೋಪ ಬರಲ್ವಾ ಎಂದು ರಾಜ್ಯ ಬಿಜೆಪಿ ಸಂಸದರನ್ನು ಮುಖ್ಯಮಂತ್ರಿ ಪ್ರಶ್ನಿಸಿದರು.

ದೇಶ ವಿಭಜನೆ ಹೇಳಿಕೆ ನೀಡುವವರನ್ನ ಕೊಲ್ಲುವ ಕಾನೂನು ತರ್ಬೇಕು ಎಂದು ಮಾಜಿ ಸಚಿವ ಕೆ ಎಸ್‌ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಈಶ್ವರಪ್ಪನವರಿಗೆ ಕಡಿ, ಬಡಿ, ತರಿ ಇದು ಬಿಟ್ಟು ಬೇರೆ ಭಾಷೆ ಗೊತ್ತಿಲ್ಲ, ಈಶ್ವರಪ್ಪನ ವಿರುದ್ದ ಕ್ರಮ ತೆಗೆದುಕೊಳ್ಳುತ್ತೇವೆ. ಕಡಿ, ಬಡಿ, ಕೊಲ್ಲು, ಕತ್ತರಿಸು ಭಾಷೆ ಬಿಟ್ಟು ಬಿಜೆಪಿಗೆ ಏನು ಬರಲ್ಲ ಎಂದು ವಾಗ್ದಾಳಿ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+