• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2013 ನೇ ಸಾಲಿನ ಆರ್ಯ‌ಭಟ ಪ್ರಶಸ್ತಿ ಪ್ರಕಟ

By Ashwath
|
ಬೆಂಗಳೂರು, ಜೂ.13 : ನಗರದ ಆರ್ಯ‌ಭಟ ಸಾಂಸ್ಕೃತಿಕ ಸಂಸ್ಥೆ 2013ರ ತನ್ನ 39ನೇ ವಾರ್ಷಿ‌ಕ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಜೂನ್‌. 22 ಭಾನುವಾರ ಸಂಜೆ 6.30ಕ್ಕೆ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದೆ. ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ‌‌ ಡಾ.ಶಿವರಾಜ್‌ ವಿ. ಪಾಟೀಲ್‌ ಕಾರ್ಯ‌ಕ್ರಮವನ್ನು ಉದ್ಘಾಟಿಸಲಿದ್ದಾರೆ.

ವಿಧಾನ ಪರಿಷತ್‌ ಸಭಾಪತಿ ಡಿ.ಹೆಚ್‌‌‌.ಶಂಕರಮೂರ್ತಿ‌, ರಾಷ್ಟ್ರೀಯ ದೂರದರ್ಶನ ವಾಹಿನಿಯ ಹೆಚ್ಚುವರಿ ಮಹಾನಿರ್ದೇಶಕ ನಾಡೋಜ ಡಾ. ಮಹೇಶ್‌‌ ಜೋಶಿ, ಕನ್ನಡ ಪ್ರಭ ಸಂಪಾದಕ ವಿಶ್ವೇಶ್ವರ ಭಟ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಆರ್ಯ‌ಭಟ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಎಚ್‌‌‌.ಎಲ್‌.ಎನ್‌ ರಾವ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2013 ನೇ ಸಾಲಿನ ಆರ್ಯ‌ಭಟ ಪ್ರಶಸ್ತಿ ಪಡೆದ ಸಾಧಕರ ವಿವರ

ಶಿಕ್ಷಣ
ಡಾ| ಮಧುಕರ್‌‌‌ ಅಂಗೂರ್‌‌‌, ಕುಲಾಧಿಪತಿ ಅಲಿಯನ್ಸ್‌‌‌ ವಿಶ್ವವಿದ್ಯಾಲಯ, ಬೆಂಗಳೂರು,
ಡಾ| ಗುರು ಮಾಧವ ರಾವ್‌‌, ಕುಲಪತಿ, ರಾಕ್‌ ಮೆಡಿಕಲ್‌ ಹೆಲ್ತ್‌ ಅಂಡ್‌ ಸೈನ್ಸ್‌‌ ವಿಶ್ವವಿದ್ಯಾಲಯ, ಯುಎಇ,
ಡಾ| ಪೆರುಮಾಳ್‌ ಸಾಮಿ, ಕುಲಪತಿ, ನೂರುಲ್‌ ಇಸ್ಲಾಂ ವಿಶ್ವವಿದ್ಯಾಲಯ ಕನ್ಯಾಕುಮಾರಿ, ತಮಿಳುನಾಡು
ಪ್ರೊ. ನಯನಿ ಮೆಲೆಗೊಂಡ, ಕೊಲಂಬೋ ವಿಶ್ವವಿದ್ಯಾಲಯ ಶ್ರೀಲಂಕಾ

ವೈದ್ಯಕೀಯ : ಡಾ.ಎನ್‌‌‌.ಕೆ. ವೆಂಕಟರಮಣ, ಡಾ. ಮಹೇಶ್‌ ವರ್ಮ‌, ಡಾ. ಜಗನ್ನಾಥ್‌‌ ದೀಕ್ಷಿತ್‌‌‌‌‌, ಡಾ. ಎನ್‌‌.ರಮೇಶ್‌‌
ನಾಗರಿಕ ರಕ್ಷಣೆ : Lt.Col ಸಂಜಯ್‌‌ ಸೆಹಗಲ್‌
ಫ್ಯಾಶನ್‌ ಡಿಸೈನ್‌ : ಅನೀಶ್‌‌‌ ತಹಿಮ್‌
ಬ್ಯಾಂಕಿಂಗ್‌‌ : ಎಂ ನರೇಂದ್ರ, ಸಿಎಂಡಿ ಇಂಡಿಯನ್‌ ಓವರ್‌‌‌‌ಸೀಸ್‌‌ ಬ್ಯಾಂಕ್‌, ಚೆನ್ನೈ
ಕರಕುಶಲ : ಕೆನರಾ ಬ್ಯಾಂಕ್‌‌ ಪ್ರಾಯೋಜಿತ ಕೆಪಿಜೆ ಪ್ರಭು ಆರ್ಟಿ‌ಸಸ್‌‌ ಟ್ರೈನಿಂಗ್‌‌‌ ಇನ್ಸ್ಟಿಟ್ಯೂಟ್‌

ಸಮಾಜ ಸೇವೆ : ಡಾ. ಪಿ.ದಯಾನಂದ ಪೈ, ಬಿ.ಕೆ ಕರುಣ, ನವೀನ್‌‌‌ಕುಮಾರ್‌ ಜಗ್ಗಿ, ಮನೋಹರ್‌ ಎಸ್‌. ಶೆಟ್ಟಿ, ದಿನೇಶ್‌ ಜೋಷಿ, ಲಯನ್‌ ಸತ್ಯಪ್ರಕಾಶ್‌‌ ಉಪಾಧ್ಯ, ರಾಜ್‌ಕುಮಾರ್‌ ಬೆಹರೈನ್‌‌, ಸತೀಶ್‌ ಪೂಜಾರಿ ಶಾರ್ಜಾ‌, ಎಂ.ಎಸ್‌ ವೆಂಕಟೇಶ್‌‌, ಎಂ ದೇವೇಂದ್ರ ರೆಡ್ಡಿ, ಸ್ನೇಕ್‌ ಶ್ಯಾಮ್‌, ಸುನೀತಾ ಮೂರ್ತಿ‌‌‌ ಬಿ.ಎ.
ಎಂಜಿನಿಯರಿಂಗ್‌ : ಗುರು ರಾವ್‌ ಯುಎಸ್‌ಎ, ರಾಮನಾಥ್‌ ಯುಎಸ್‌ಎ
ಮಾಹಿತಿ ತಂತ್ರಜ್ಞಾನ : ಭವನಿ ಶಂಕರ್‌‌‌

ಪ್ರೆಸ್‌ ಫೋಟೋಗ್ರಾಫರ್‌ ‌: ಆಸ್ಟ್ರೋ ಮೋಹನ್‌‌
ಶಿಲ್ಪಕಲೆ : ಜಿ.ಎಲ್‌‌.ಭಟ್‌‌
ಜಾದೂ : ಪ್ರೊ.ಎಸ್‌‌‌.ಪಿ. ನಾಗೇಂದ್ರ ಪ್ರಸಾದ್‌‌‌‌‌
ಕನ್ನಡ ಮತ್ತು ಸಂಸ್ಕೃತಿ : ಮಲ್ಲಿಕಾರ್ಜು‌ನ ರುದ್ರಪ್ಪ ಗೌಡ, ದುಬೈ
ಫೋಟೋಗ್ರಫಿ : ಮುರಳೀಧರ್‌.ಕೆ., ಎನ್‌. ಕುಮಾರ್‌
ಸಾಹಿತ್ಯ : ಶಕುಂತಲ ಭಟ್‌

ಯೋಗಾ : ಯೋಗಾಚಾರ್ಯ‌ ಶ್ರೀ ಪಟ್ಟಾಭಿರಾಮ್‌
ಧಾರ್ಮಿ‌ಕ : ಕೆ.ಎಲ್‌.ಶ್ರೀನಿವಾಸನ್‌
ಕಿರುತೆರೆ : ಟಿ.ಎನ್‌ ಸೀತಾರಾಮ್‌
ರಂಗಭೂಮಿ : ಮಂಡ್ಯ ರಮೇಶ್‌‌
ಹಿನ್ನಲೆ ಗಾಯನ : ಎಂಎ ಅನುಪಮ
ವಾದ್ಯ ಸಂಗೀತ ಡ್ರಮ್ಸ್‌‌ : ಅರುಣ್‌ ಕುಮಾರ್‌‌

ಯಕ್ಷಗಾನ : ರಾಮಚಂದ್ರ ಹೆಗ್ಡೆ ಚಿಟ್ಟಾಣಿ
ಸ್ಯಾಕ್ಸೋಫೋನ್‌: ವಿದ್ವಾನ್‌‌ ಹರಿದಾಸ್‌ ಡ್ರೋಗ್ರ
ಸುಗಮ ಸಂಗೀತ: ಸೋಮಸುಂದರಂ ಎಸ್‌‌‌., ಬಿ. ಸಿ. ಪದ್ಮಾವತಿ ಶ್ರೀಧರ್‌‌‌‌,
ಕರ್ನಾಟಕ ವಾದ್ಯ ಸಂಗೀತ ಕೊಳಲು : ವಿದುಷಿ ದ್ವಾರಕಿ ಕೃಷ್ಣಸ್ವಾಮಿ
ಹಿಂದೂಸ್ಥಾನಿ ಸಂಗೀತ : ಹೆಗ್ಗಾರ ಅನಂತ ಹೆಗ್ಡೆ
ಭರತನಾಟ್ಯ : ವಿದುಷಿ. ಜಿ. ಎಸ್‌‌. ರಾಜಲಕ್ಷ್ಮಿ, ಕೆ.ಜಯಲಕ್ಷ್ಮಿ ಜಿತೇಂದರ್‌‌‌, ಡಾ| ವಸಂತ್‌‌, ಕಿರಣ್‌‌, ಭಾರತಿ ಅವಿರೆಡ್ಡಿ ಜರ್ಮನಿ, ಎಂ.ಎಸ್‌‌. ಶ್ರೀ ಲಕ್ಷ್ಮಿ ಸಿಂಗಪುರ್‌‌‌‌‌, ವಿದುಷಿ ರೋಹಿಣಿ ಅನಂತ್‌‌‌ ದುಬೈ

ಬಹುಮುಖ ಪ್ರತಿಭೆ : ವಸುಮತಿ ರಘುನಾಥ್‌‌, ಶ್ವೇತಾ ಪ್ರಭು
ಲಲಿತ ಕಲೆ : ವಿಶ್ವನಾಥ್‌‌ ಪ್ರಸಾದ್‌‌ ಹೆಚ್‌‌,
ನೃತ್ಯ ನಿರ್ದೇಶನ : ಮಹೇಶ್‌ ಕುಮಾರ್‌. ಟಿ

ಯುವ ಪ್ರತಿಭೆ ವಿಭಾಗ
ಭರತನಾಟ್ಯ: ಶ್ವೇತಾ ಪುರೋಹಿತ್‌‌‌, ಸಿಂಧು ಪುರೋಹಿತ್‌, ಶ್ರೇಯಾ ಬಾಲಾಜಿ, ಎಂ ಅನನ್ಯ
ನೃತ್ಯ : ರೇಣುಕಾ ಉಪಾದ್ಯ
ಸ್ಯಾಕ್ಸೋಫೋನ್‌ : ಮೇಘನ ಸಾಲಿಗ್ರಾಮ
ವಾದ್ಯ ಸಂಗೀತ ತಬಲ : ಎನ್‌. ಪ್ರಜ್ವಲ್‌

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Bangalore-based Aryabhata Cultural Oragnisation presented its 39th annual awards to over 63 persons. The Award presentation function will be held on June 22, Sunday of 6.30 PM at Ravindra Kalakshetra.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more