ಕರ್ನಾಟಕದಲ್ಲಿ 14 ಲಕ್ಷದ ಗಡಿ ದಾಟಿದ ಕೊರೊನಾವೈರಸ್ ಪ್ರಕರಣ

ಬೆಂಗಳೂರು, ಏಪ್ರಿಲ್ 27: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿನ ಎರಡನೇ ಅಲೆ ಮತ್ತಷ್ಟು ಭೀಕರವಾಗುತ್ತಿದೆ. ರಾಜ್ಯದಲ್ಲಿ ಒಂದೇ ದಿನ ಹೊಸ ಪ್ರಕರಣಗಳ ಸಂಖ್ಯೆ ಒಂದು ವಾರದಲ್ಲಿ ಎರಡನೇ ಬಾರಿ 30 ಸಾವಿರದ ಗಡಿಯನ್ನೂ ದಾಟಿ ಹೋಗಿದೆ.

ಕಳೆದ 24 ಗಂಟೆಗಳಲ್ಲಿ 31,830 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದು ದಿನದಲ್ಲಿ 180 ಮಂದಿ ಮಹಾಮಾರಿಗೆ ಬಲಿಯಾಗಿದ್ದರೆ, ಇದೇ ಅವಧಿಯಲ್ಲಿ 10793 ಸೋಂಕಿತರು ಗುಣಮುಖರಾಗಿದ್ದಾರೆ.

ಬೆಂಗಳೂರಿನಲ್ಲೇ ಒಂದು ದಿನದಲ್ಲಿ 17550 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 6,87,751ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲೇ 97 ಮಂದಿ ಪ್ರಾಣ ಬಿಟ್ಟಿದ್ದು, ಈವರೆಗೂ 6002 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ., ಬೆಂಗಳೂರಿನಲ್ಲಿ 2,06,223 ಸಕ್ರಿಯ ಪ್ರಕರಣಗಳಿವೆ.

 31830 New Coronavirus Cases Reported in Karnataka Today, State Tally Rise to 1400775

ಮಂಗಳವಾರದ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 14,00,775 ಕೊರೊನಾವೈರಸ್ ಸೋಂಕಿತ ಪ್ರಕರಣಗಳಿವೆ. ಈ ಪೈಕಿ 10,84,050 ಸೋಂಕಿತರು ಗುಣಮುಖರಾಗಿದ್ದು, ಸೋಂಕಿಗೆ ಈವರೆಗೂ 14807 ಮಂದಿ ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ ರಾಜ್ಯದಲ್ಲಿ 3,01,899 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?

ರಾಜ್ಯದಲ್ಲಿ ಒಟ್ಟು 31830 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 283, ಬಳ್ಳಾರಿ 907, ಬೆಳಗಾವಿ 219, ಬೆಂಗಳೂರು ಗ್ರಾಮಾಂತರ 599, ಬೆಂಗಳೂರು 17550, ಬೀದರ್ 328, ಚಾಮರಾಜನಗರ 212, ಚಿಕ್ಕಬಳ್ಳಾಪುರ 544, ಚಿಕ್ಕಮಗಳೂರು 275, ಚಿತ್ರದುರ್ಗ 145, ದಕ್ಷಿಣ ಕನ್ನಡ 486, ದಾವಣಗೆರೆ 300, ಧಾರವಾಡ 423, ಗದಗ 119, ಹಾಸನ 503, ಹಾವೇರಿ 99, ಕಲಬುರಗಿ 772, ಕೊಡಗು 373, ಕೋಲಾರ 548, ಕೊಪ್ಪಳ 382, ಮಂಡ್ಯ 737, ಮೈಸೂರು 2042, ರಾಯಚೂರು 736, ರಾಮನಗರ 169, ಶಿವಮೊಗ್ಗ 256, ತುಮಕೂರು 1196, ಉಡುಪಿ 477, ಉತ್ತರ ಕನ್ನಡ 205, ವಿಜಯಪುರ 531, ಯಾದಗಿರಿ 414 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.

Recommended Video

      ಉಚಿತ ಆಂಬುಲೆನ್ಸ್ ಸೇವೆ ಒದಗಿಸಿಕೊಟ್ಟ ತೇಜಸ್ವಿ ಸೂರ್ಯ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+