3 ಜನರ ಬಲಿ ತೆಗೆದ ಡ್ರೈವರ್‌ಗೆ ಮುಂದುವರಿದ ಶೋಧ

ಮೇ.6ರಂದು ನಗರದಿಂದ ಮುರುಗಮಲೆಗೆ ತೆರಳುತ್ತಿದ್ದ ಖಾಸಗಿ ಬಸ್ ಬಚ್ಚವಾರಹಳ್ಳಿ ಬಾರ್ಲಹಳ್ಳಿ ಕ್ರಾಸ್‌ಗಳ ನಡುವಿನ ತಿರುವಿನಲ್ಲಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಇಬ್ಬರು ಅಂಗನವಾಡಿ ಶಿಕ್ಷಕಿಯರು ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರು.
ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ದಂಡುಪಾಳ್ಯದ ಅಂಗ ವಾಡಿ ಕಾರ್ಯಕರ್ತೆ ಮಮತಾ(33), ಡಿ.ಎಂ.ಲಕ್ಷ್ಮೀ ನಾರಾಯಣ್ (40)ಅವರ ಪತ್ನಿ ಕಲಾವತಿ ಭೀಕರವಾಗಿ ಸಾವನ್ನಪ್ಪಿದ್ದರು.[ಬೆಂಗಳೂರು:14 ಕಳ್ಳರ ಬಂಧನ, 2.5 ಕೆಜಿ ಚಿನ್ನ ಜಪ್ತಿ]
ಅಪಘಾತ ಸಂಭವಿಸಿದ ಕೂಡಲೇ ಚಾಲಕ ಬಸ್‌ನಿಂದ ಜಿಗಿದು ಪರಾರಿಯಾಗಿದ್ದ. ಡಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣ ಜಖಂ ಗೊಂಡಿದ್ದು , ಮಮತಾ ಬೈಕ್‌ನಿಂದ ಸುಮಾರು ದೂರ ಹಾರಿ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಕಲಾವತಿ ಮತ್ತು ಆಕೆಯ ಗಂಡ ಲಕ್ಷ್ಮೀನಾರಾಯಣ್ ಮೇಲೆ ಬಸ್ ಹರಿದಿದ್ದರಿಂದ ಇಬ್ಬರ ದೇಹಗಳು ಛಿದ್ರವಾಗಿ ಹೋಗಿತ್ತು.[ತಮಾಷೆ ಕರೆಗೆ ಪ್ರತಿಭಾವಂತ ವಿದ್ಯಾರ್ಥಿನಿ ಸಾವು]
ಗ್ರಾಮಾಂತರ ಠಾಣೆಯ ಪೊಲೀಸರು ಬಸ್ ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು, ಪ್ರಕರಣ ದಾಖಲಿಸಿದ್ದು ಚಾಲಕನ ಶೋಧ ಕಾರ್ಯವವನ್ನು ಆರಂಭಿಸಿದ್ದಾರೆ.












Click it and Unblock the Notifications