ಠಾಣೆಯಲ್ಲೇ ಎಣ್ಣೆ ಪಾರ್ಟಿ, ಓರ್ವ ASI ಸೇರಿ ಇಬ್ಬರು ಪೇದೆಗಳು ಅಮಾನತು

Posted By:
Subscribe to Oneindia Kannada

ವಿಜಯಪುರ, ಜೂನ್ 14 : ಬೇಲಿಯೇ ಎದ್ದು ಹೊಲ ಮೇಯುವಂತೆ ವಿಜಯಪುರದ ಜಲನಗರ ಠಾಣೆಯ ಪೊಲೀಸರೇ ಠಾಣೆಯನ್ನು ಬಾರ್ ಮಾಡಿಕೊಂಡಿದ್ದಾರೆ.

ಹೌದು..ಹಾಡು ಹಗಲೇ ಠಾಣೆಯನ್ನೇ ಬಾರ್ ಮಾಡಿಕೊಂಡು ಎಣ್ಣೆ ಪಾರ್ಟಿ ಮಾಡುತ್ತಿದ್ದ ಎಎಸ್ ಐ ಮಾಳೆಗಾಂವ್, ಪೇದೆ ಸೊಡ್ಡಿ ಹಾಗೂ ಇದಕ್ಕೆಲ್ಲ ಸಹಕರಿಸಿದ ಮಹಿಳಾ ಪೇದೆ ಪದ್ಮಾವತಿ ಅವರನ್ನು ಅಮಾನುತುಗೊಳಿಸಲಾಗಿದೆ.

3 Jalanagar police station cops suspended for indiscipline on duty

ಮದ್ಯದ ಜತೆ ಸ್ನ್ಯಾಕ್ಸ್ ಗೆ ಅಂತ ಠಾಣೆ ಪಕ್ಕದ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆ ಮನೆಯ ಉಪ್ಪಿನಕಾಯಿ, ಬಜ್ಜಿ, ಮಿರ್ಚಿ, ಊಟವನ್ನು ಠಾಣೆಗೆ ತರಿಸಿಕೊಂಡು ಶಿಸ್ತು ಉಲ್ಲಂಘನೆ ಮಾಡಿದ್ದರಿಂದ ಮೂವರನ್ನು ಅಮಾನತುಗೊಳಿಸಿ ವಿಜಯಪುರ ಎಸ್ಪಿ ಕುಲದೀಪ್ ಕುಮಾರ್ ಜೈನ್ ಆದೇಶ ಹೊರಡಿಸಿದ್ದಾರೆ.

ಠಾಣೆಯಲ್ಲಿ ಮದ್ಯ ಸೇವಿಸಿರುವುದು ದೃಡಪಟ್ಟಿಲ್ಲ ಈ ಬಗ್ಗೆ ಸೂಕ್ಷ್ಮವಾಗಿ ತನಿಖೆ ನಡೆಸಲಾಗುವುದು. ಒಂದು ವೇಳೆ ಮದ್ಯ ಸೇವಿಸಿದ್ದರೆ ಅವರ ಮೇಲೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಸ್ ಪಿ ಕುಲದೀಪ್ ಕುಮಾರ್ ಜೈನ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka News : Three cops including Assistant Sub-Inspector of Police suspended. The accused trio were using the Jalanagar station in Vijapura district as their private Bar.
Please Wait while comments are loading...