ದ್ವಿತೀಯ ಪಿಯುಸಿ ಪರೀಕ್ಷೆ-3; ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಬೆಂಗಳೂರು, ಮೇ 29: 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-3ಕ್ಕೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ ಮಾಡಲಾಗಿದೆ. ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ ಫಲಿತಾಂಶ ಉತ್ತಮಪಡಿಸಿಕೊಳ್ಳುವ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ-3ಕ್ಕೆ ಅರ್ಜಿ ಸಲ್ಲಿಸಬಹುದು.
ಈ ಕುರಿತು ಅಧ್ಯಕ್ಷರು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ, ಬೆಂಗಳೂರು ಆದೇಶ ಹೊರಡಿಸಿದ್ದಾರೆ. ಈ ಮೊದಲು 28/5/2024ರ ತನಕ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿತ್ತು.

ವಿದ್ಯಾರ್ಥಿಗಳು, ಪೋಷಕರ ದೂರವಾಣಿ ಕರೆಗಳ ಹಿನ್ನಲೆಯಲ್ಲಿ ದಿನಾಂಕ ವಿಸ್ತರಣೆ ಮಾಡಲಾಗಿದೆ. ಪರಿಷ್ಕೃತ ಆದೇಶದಂತೆ ವಿದ್ಯಾರ್ಥಿಗಳು ಕಾಲೇಜಿಗೆ ಪರೀಕ್ಷಾ ಶುಲ್ಕ ಪಾವತಿಸಲು ಕೊನೆಯ ದಿನಾಂಕ ದಂಡ ರಹಿತ 31/5/2024. ದಂಡ ಸಹಿತವಾಗಿ (50 ರೂ.) 1/6/2024 ರಿಂದ 3/6/2024.
2024ನೇ ಸಾಲಿನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆ-3ಕ್ಕೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ದಿನಾಂಕ 28-05-2024ರ ತನಕ ದಿನಾಂಕ ನಿಗದಿಪಡಿಸಲಾಗಿತ್ತು. ವಿದಾರ್ಥಿಗಳ ದೂರವಾಣಿ ಕರೆಗಳ ಮೇರೆಗೆ ಸದರಿ ಪರೀಕ್ಷೆಗೆ ಶುಲ್ಕ ಪಾವತಿಸುವ ದಿನಾಂಕವನ್ನು ವಿಸ್ತರಿಸಿ ಆದೇಶಿಸಲಾಗಿದೆ. ಇದು ವಿದ್ಯಾರ್ಥಿಗಳಿಗೆ ಅಂತಿಮ ಅವಕಾಶವಾಗಿದ್ದು, ಮುಂದೆ ಯಾವುದೇ ಕಾರಣಕ್ಕೂ ದಿನಾಂಕವನ್ನು ವಿಸ್ತರಿಸಲಾಗುವುದಿಲ್ಲ ಎಂದು ಆದೇಶ ಹೇಳಿದೆ.
ಎಲ್ಲಾ ಕಾಲೇಜಿನ ಪ್ರಾಂಶುಪಾಲರುಗಳು ದಿನಾಂಕ ವಿಸ್ತರಣೆ ಮಾಡಿರುವ ಕುರಿತು ಕಡ್ಡಾಯವಾಗಿ ಕಾಲೇಜಿನ ಸೂಚನಾ ಫಲಕದಲ್ಲಿ ಪ್ರಕಟಿಸಬೇಕು ಎಂದು ಸೂಚನೆ ನೀಡಲಾಗಿದೆ. ಕಾಲೇಜಿನ ಪ್ರಾಂಶುಪಾಲರು ಪರೀಕ್ಷೆ ಶುಲ್ಕವನ್ನು ಒಂದೇ ಕಂತಿನಲ್ಲಿ ಖಜಾನೆಗೆ ಸಂದಾಯ ಮಾಡಬೇಕಾದ ದಿನಾಂಕ ದಂಡರಹಿತವಾಗಿ 1/6/2024. ದಂಡ ಸಹಿತ (ದಿನಕ್ಕೆ 50 ರೂ. ನಂತೆ) 1/6/2024 ರಿಂದ 3/6/2024ರ ತನಕ.
ಪುನರಾವರ್ತಿತ ಹಾಗೂ ಫಲಿತಾಂಶ ಉನ್ನತೀಕರಣಕ್ಕಾಗಿ ವಿದ್ಯಾರ್ಥಿಗಳ ಮಾಹಿತಿಯನ್ನು ಮಂಡಲಿಯ ಪಿಯು ಎಕ್ಸಾಂ ಪೋರ್ಟಲ್ ಲಾಗಿನ್‌ನಲ್ಲಿ ಅಪ್‌ಡೇಟ್ ಮಾಡಲು ಕೊನೆಯ ದಿನಾಂಕ ದಂಡ ರಹಿತವಾಗಿ 3/6/2024. ದಂಡ ಸಹಿತವಾಗಿ (ದಿನಕ್ಕೆ 50 ರೂ.ನಂತೆ) 5/6/2024.
ಕಾಲೇಜಿನ ಪ್ರಾಂಶುಪಾಲರು ಪರೀಕ್ಷಾ ಅರ್ಜಿಗಳನ್ನು ಮೂಲ ಚಲನ್ ಸಹಿತ ಜಿಲ್ಲಾ ಉಪ ನಿರ್ದೇಶಕರ ಕಛೇರಿಗೆ ಕಡ್ಡಾಯವಾಗಿ ಸಲ್ಲಿಸಬೇಕಾದ ದಿನಾಂಕ 4/6/2024, ದಂಡ ಸಹಿತವಾಗಿ (ದಿನಕ್ಕೆ 50 ರೂ.) 6/6/2024.
ಜಿಲ್ಲಾ ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ರವರು ಪ್ರಾಂಶುಪಾಲರಿಂದ ಸ್ವೀಕರಿಸಿದ ಪರೀಕ್ಷಾ ಅರ್ಜಿಗಳನ್ನು ಮಂಡಲಿಯ ಜಾಲತಾಣದ PU EXAM Portal ಲಾಗಿನ್‌ನಲ್ಲಿ ಅಪ್‌ಡೇಟ್ ಮಾಡಿರುವುದನ್ನು ಖಾತ್ರಿಪಡಿಸಿಕೊಂಡು ಪ್ರಾಂಶುಪಾಲರಿಂದ ಅಪ್‌ಡೇಟ್ ಮಾಡಿರುವುದಕ್ಕೆ ಸಂಬಂಧಿಸಿದಂತೆ ಮುಚ್ಚಳಿಕೆ ಪತ್ರ ಪಡೆದ ನಂತರ ಕಾಲೇಜುವಾರು ಕ್ರೋಢೀಕೃತ ವಿದ್ಯಾರ್ಥಿಗಳ ಪಟ್ಟಿ, ಶುಲ್ಕ ಪಾವತಿಸಿರುವ ಮೂಲ ಚಲನ್ ಹಾಗೂ ಚೆಕ್ ಲಿಸ್ಟ್ ಅನ್ನು ಖುದ್ದಾಗಿ ಮಂಡಲಿಗೆ ದಿನಾಂಕ 7/6/2024ರಂದು ಸಲ್ಲಿಸಲು ಸೂಚಿಸಿದೆ.











Click it and Unblock the Notifications