ಕರ್ನಾಟಕದಲ್ಲಿ 2566 ಕೊರೊನಾ ಪ್ರಕರಣ ದಾಖಲು; 4 ಜಿಲ್ಲೆಗಳಲ್ಲಿ ಏರಿಕೆ
ಬೆಂಗಳೂರು, ಮಾರ್ಚ್ 26: ಕರ್ನಾಟಕದಲ್ಲಿ ಶುಕ್ರವಾರ 2566 ಹೊಸ ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಪ್ರಕರಣ ದಾಖಲಾಗಿದೆ. ಬೆಂಗಳೂರಿನಲ್ಲಿ 1490 ಹೊಸ ಪ್ರಕರಣಗಳು ದಾಖಲಾಗಿದ್ದು, ಕಲಬುರಗಿ, ಉಡುಪಿ ಹಾಗೂ ತುಮಕೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿವೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 981044ಗೆ ಏರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಸೋಂಕಿನಿಂದ ಒಟ್ಟು 13 ಮಂದಿ ಸಾವನ್ನಪ್ಪಿದ್ದಾರೆ. 1207 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೂ 948988 ಮಂದಿ ಗುಣಮುಖರಾಗಿದ್ದಾರೆ. ಕೊರೊನಾದಿಂದ 12484 ಮಂದಿ ಸಾವನ್ನಪ್ಪಿದ್ದಾರೆ. ಪ್ರಸ್ತುತ 19553 ಸಕ್ರಿಯ ಪ್ರಕರಣಗಳಿವೆ.
ಕರ್ನಾಟಕದಲ್ಲಿ 2523 ಹೊಸ ಪ್ರಕರಣ; ಬೆಂಗಳೂರಿನಲ್ಲಿ ಗರಿಷ್ಠ ದಾಖಲು
ಹಬ್ಬಗಳೂ ಸಮೀಪಿಸುತ್ತಿದ್ದು, ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.
ಜಿಲ್ಲಾವಾರು ಕೊರೊನಾ ವರದಿ: ಕಳೆದ 24 ಗಂಟೆಗಳಲ್ಲಿ ಬಾಗಲಕೋಟೆ 9, ಬಳ್ಳಾರಿ 27, ಬೆಳಗಾವಿ 25, ಬೆಂಗಳೂರು ಗ್ರಾಮಾಂತರ 59, ಬೆಂಗಳೂರು ನಗರ 1490, ಬೀದರ್ 65, ಚಾಮರಾಜನಗರ 1, ಚಿಕ್ಕಬಳ್ಳಾಪುರ 15, ಚಿಕ್ಕಮಗಳೂರು 6, ಚಿತ್ರದುರ್ಗ 20, ದಕ್ಷಿಣ ಕನ್ನಡ 72, ದಾವಣಗೆರೆ 6, ಧಾರವಾಡ 31, ಗದಗ 14, ಹಾಸನ 32, ಹಾವೇರಿ 5, ಕಲಬುರಗಿ 109, ಕೊಡಗು 6, ಕೋಲಾರ 45, ಕೊಪ್ಪಳ 6, ಮಂಡ್ಯ 34, ಮೈಸೂರು 67, ರಾಯಚೂರು 12, ರಾಮನಗರ 1, ಶಿವಮೊಗ್ಗ 14, ತುಮಕೂರು 126, ಉಡುಪಿ 210, ವಿಜಯಪುರ 36, ಯಾದಗಿರಿಯಲ್ಲಿ 10 ಪ್ರಕರಣಗಳು ಪತ್ತೆಯಾಗಿವೆ.