ಬೆಂಗಳೂರು-ಮೈಸೂರು ರಸ್ತೆಯಲ್ಲಿ ಪ್ರತಿದಿನ 25 ಸಾವಿರ ವಾಹನ ಸಂಚಾರ

Recommended Video

      ಬೆಂಗಳೂರು-ಮೈಸೂರು ರಸ್ತೆಯಲ್ಲಿ ಪ್ರತಿದಿನ 25 ಸಾವಿರ ವಾಹನ ಸಂಚಾರ | Oneindia Kannada

      ಬೆಂಗಳೂರು, ಅಕ್ಟೋಬರ್ 13 : ಬೆಂಗಳೂರು-ಮೈಸೂರು ರಸ್ತೆ ಸಹವಾಸ ಬೇಡ ಭಾರಿ ಸಂಚಾರ ದಟ್ಟಣೆ ಎನ್ನುವ ಮಾತು ಸಾಮಾನ್ಯ. ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿನಿತ್ಯ 25 ಸಾವಿರ ವಾಹನಗಳು ಸಂಚಾರ ನಡೆಸುತ್ತವೆ ಎಂಬುದು ಸಮೀಕ್ಷೆ ವರದಿಯಿಂದ ಬಹಿರಂಗವಾಗಿದೆ.

      ಇಫ್ಕಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಆಗಸ್ಟ್ 25ರಿಂದ ಸೆಪ್ಟೆಂಬರ್ 5ರ ತನಕ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ವಾಹನಗಳ ಸಂಚಾರದ ಬಗ್ಗೆ ಸಮೀಕ್ಷೆ ನಡೆಸಿದೆ. ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, 6 ಪಥದ ಹೆದ್ದಾರಿ ಕಾಮಗಾರಿಯನ್ನು ಶೀಘ್ರವೇ ಆರಂಭಿಸಬೇಕು ಎಂದು ಹೇಳಿದೆ.

      ಅತ್ಯಾಧುನಿಕ ಯಂತ್ರಗಳ ಸಹಾಯದಿಂದ ವಾರದ ಏಳು ದಿನಗಳ ಕಾಲ ವಿವಿಧ ಪಾಳಿಯಲ್ಲಿ ಹೆದ್ದಾರಿಯಲ್ಲಿ ಸಂಚಾರ ನಡೆಸುವ ವಾಹನಗಳ ಸಮೀಕ್ಷೆ ನಡೆಸಲಾಗಿದೆ. ಶನಿವಾರ ಮತ್ತು ಭಾನುವಾರ 30 ಸಾವಿರ ವಾಹನಗಳು ಸಂಚಾರ ನಡೆಸಿರುವುದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.

      ಮೈಸೂರು ದಸರಾ ವೇಳೆಯಲ್ಲಿ ಪ್ರತಿದಿನ 50 ಸಾವಿರ ವಾಹನಗಳು ಸಂಚಾರ ನಡೆಸುತ್ತವೆ ಎಂದು ಸಮೀಕ್ಷೆ ಹೇಳಿದೆ. ಎರಡೂ ನಗರದ ನಡುವಿನ ಪ್ರಯಾಣದ ಅವಧಿ ಕಡಿಮೆ ಮಾಡಲು ಆರು ಪಥದ ರಸ್ತೆ ಕಾಮಗಾರಿ ಬೇಗನೇ ಆರಂಭಿಸುವುದು ಉತ್ತಮ ಎಂದು ಸಮೀಕ್ಷೆ ಸಲಹೆ ನೀಡಿದೆ.

      ಯಾವ ಸಮಯದಲ್ಲಿ ಹೆಚ್ಚು ಸಂಚಾರ

      ಯಾವ ಸಮಯದಲ್ಲಿ ಹೆಚ್ಚು ಸಂಚಾರ

      ಬೆಂಗಳೂರು-ಮೈಸೂರು ರಸ್ತೆಯಲ್ಲಿ ಬೆಳಗ್ಗೆ 7 ರಿಂದ 10, ಸಂಜೆ 6 ರಿಂದ 8 ಗಂಟೆಯ ತನಕ ಹೆಚ್ಚು ವಾಹನಗಳು ಸಂಚಾರ ನಡೆಸುತ್ತವೆ. ರಾತ್ರಿ 9 ಗಂಟೆ ತನಕ ಬೈಕ್, ಕಾರು ಸೇರಿದಂತೆ ಸಣ್ಣ ವಾಹನಗಳು, ರಾತ್ರಿ 9 ರಿಂದ ಬೃಹತ್ ಗಾತ್ರದ ಲಾರಿಗಳ ಸಂಚಾರ ಹೆಚ್ಚಿರುತ್ತದೆ ಎಂದು ಸಮೀಕ್ಷೆ ಹೇಳಿದೆ.

      7 ದಿನಗಳ ಕಾಲ ಸಮೀಕ್ಷೆ

      7 ದಿನಗಳ ಕಾಲ ಸಮೀಕ್ಷೆ

      ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ 7 ದಿನಗಳ ಕಾಲ ವಿವಿಧ ಪಾಳಿಯಲ್ಲಿ ಸಮೀಕ್ಷೆ ನಡೆಸಲಾಗಿದೆ. ಪ್ರತಿದಿನ 25 ಸಾವಿರ ವಾಹನಗಳು ಸಂಚಾರ ನಡೆಸುತ್ತವೆ. ಶನಿವಾರ, ಭಾನುವಾರ, ಸರ್ಕಾರಿ ರಜೆ ದಿನಗಳಲ್ಲಿ ವಾಹನ ದಟ್ಟಣೆ ಹೆಚ್ಚಿರುತ್ತದೆ. ಶನಿವಾರ-ಭಾನುವಾರ 30 ಸಾವಿರ ವಾಹನಗಳು ಸಂಚಾರ ನಡೆಸಿದ ಬಗ್ಗೆಯೂ ಮಾಹಿತಿ ಸಿಕ್ಕಿದೆ.

      4 ವಿಭಾಗದಲ್ಲಿ ಸಮೀಕ್ಷೆ

      4 ವಿಭಾಗದಲ್ಲಿ ಸಮೀಕ್ಷೆ

      ಹೆದ್ದಾರಿಯಲ್ಲಿ ಸಂಚಾರ ನಡೆಸುವ ವಾಹನಗಳನ್ನು 4 ವಿಭಾಗದಲ್ಲಿ ವಿಂಗಡಿಸಿ ಸಮೀಕ್ಷೆ ಮಾಡಲಾಗಿದೆ. ರಾಜ್ಯದ ನೋಂದಾಯಿತ ವಾಹನಗಳು, ವಾಣಿಜ್ಯ ವಾಹನ ಎಂದು ಸಮೀಕ್ಷೆ ನಡೆಸಲಾಗಿದ್ದು, ಸಮೀಕ್ಷೆಯ ಪೂರ್ಣ ಪ್ರಮಾಣದ ವರದಿಯನ್ನು ಇಫ್ಕಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ.

      ಶೀಘ್ರವೇ ಕಾಮಗಾರಿ

      ಶೀಘ್ರವೇ ಕಾಮಗಾರಿ

      ಬೆಂಗಳೂರು-ಮೈಸೂರು ನಡುವೆ 6 ಪಥದ ರಸ್ತೆ, ಎರಡೂ ಕಡೆ ಸರ್ವೀಸ್ ರಸ್ತೆ ನಿರ್ಮಾಣ ಮಾಡುವ ಕಾಮಗಾರಿ ಶೀಘ್ರದಲ್ಲೇ ಆರಂಭವಾಗುವ ನಿರೀಕ್ಷೆ ಇದೆ. ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಈ ಕುರಿತು ಚರ್ಚೆ ನಡೆಸಿದ್ದಾರೆ. ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ ಕಾಮಗಾರಿ ಆರಂಭವಾಗಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+