ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ 22 ಪೊಲೀಸರಿಗೆ ರಾಷ್ಟ್ರಪತಿ ಪದಕ

|
Google Oneindia Kannada News

ಬೆಂಗಳೂರು, ಜನವರಿ 26 : ಕರ್ನಾಟಕದ 22 ಪೊಲೀಸರು ಪ್ರತಿಷ್ಠಿತ ರಾಷ್ಟ್ರಪತಿ ಪದಕ ಪಡೆದಿದ್ದಾರೆ. ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಸೇರಿದಂತೆ ವಿವಿಧ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಗಣರಾಜ್ಯೋತ್ಸವದ ಪ್ರಯುಕ್ತ ಪದಕ ನೀಡಲಾಗಿದೆ.

ಮೂವರು ಅಧಿಕಾರಿಗಳು ವಿಶಿಷ್ಟ ಸೇವಾ ಪದಕವನ್ನು ಪಡೆದಿದ್ದಾರೆ. ವಿವಿಧ ಹಂತದ ಅಧಿಕಾರಿಗಳು ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕವನ್ನು ಪಡೆದಿದ್ದಾರೆ.

22 Karnataka police personnel conferred with president medals

ವಿಶಿಷ್ಟ ಸೇವಾ ಪದಕ : ಡಾ.ಬಿ.ಎ.ಮಹೇಶ್ (ಡಿಐಜಿಪಿ, ನೇಮಕಾತಿ, ಬೆಂಗಳೂರು), ಟಿ.ಆರ್.ಸುರೇಶ್ (ಆಯುಕ್ತರು, ಮಂಗಳೂರು ವಿಭಾಗ), ಜಿ.ಎ.ಜಗದೀಶ್ (ಎಸಿಪಿ, ಸಂಚಾರಿ ಉತ್ತರ ವಿಭಾಗ, ಬೆಂಗಳೂರು).

ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ

ಆರ್.ಎಚ್.ನಾಯಕ್ (ಡಿಐಜಿಪಿ, ಇಂಟಲಿಜನ್ಸ್, ಬೆಂಗಳೂರು), ಹಂಜ ಹುಸೇನ್ (ಎಸ್ಪಿ, ಬಿಡಿಡಎಸ್, ಇಂಟಲಿಜನ್ಸ್ ಬೆಂಗಳೂರು), ಕೆ.ಪಿ.ರವಿಕುಮಾರ್ (ಎಸಿಪಿ, ಬಾಣಸವಾಡಿ ಸಬ್ ಡಿವಿಷನ್, ಬೆಂಗಳೂರು), ಯು.ಶರಣಪ್ಪ (ಡಿವೈಎಸ್‌ಪಿ, ಚಿಂಚೋಳಿ ಸಬ್ ಡಿವಿಷನ್, ಕಲಬುರಗಿ), ಸಿ.ಸಂಪತ್ ಕುಮಾರ್ (ಡಿವೈಸ್‌ಪಿ, ಸೋಮವಾರಪೇಟೆ, ಸಬ್ ಡಿವಿಷನ್, ಕೊಡಗು ಜಿಲ್ಲೆ).

ಎನ್.ಬಿ.ಸಕ್ರಿ (ಎಸಿಪಿ, ಹುಬ್ಬಳ್ಳಿ ನಗರ ದಕ್ಷಿಣ), ಕೆ.ಎಸ್.ನಾಗರಾಜ್ (ಡಿವೈಎಸ್‌ಪಿ, ತುಮಕೂರು), ಬಿ.ಬಾಲರಾಜು (ಡಿವೈಎಸ್‌ಪಿ, ಎಸಿಬಿ, ಬೆಂಗಳೂರು), ಕೆ.ಸತ್ಯನಾರಾಯಾಣ (ಸಿಪಿಐ, ಕಡೂರು, ಚಿಕ್ಕಮಗಳೂರು), ವಿ.ಎನ್.ಗುಣವತಿ (ಎಎಸ್‌ಸೈ, ಬೆಂಗಳೂರು), ಕೆ.ಆರ್.ವಿನುತಾ (ಎಎಸೈ, ಬೆಂಗಳೂರು).

ಜಿ.ಶ್ರೀನಿವಾಸ ಶೆಟ್ಟಿ (ಎಚ್‌ಸಿ-5689, ಉಪ್ಪಾರಪೇಟೆ, ಬೆಂಗಳೂರು), ಬಿ.ಎಚ್.ಹೇಮಕುಮಾರ್ (ಎಚ್‌ಸಿ ಫಾರೆಸ್ಟ್, ಸಿಐಡಿ, ಬೆಂಗಳೂರು), ಬಿ.ಎನ್.ಮೆಹಬೂಬ್ (ಸಿಎಚ್‌ಸಿ-590, ಹುಬ್ಬಳ್ಳಿ ಗ್ರಾಮಾಂತರ), ಪಿ.ಮಲ್ಲಿಕಾರ್ಜುನ ಹೆಗ್ಡೆ (ಎಚ್‌ಸಿ, ಎಸ್‌ಇಡಿ, ಸಿಐಡಿ, ಬೆಂಗಳೂರು), ಜಗನ್ನಾಥ್ (ಕೆಎಸ್ಆರ್‌ಪಿ, ಬೆಂಗಳೂರು), ಕಮಲಾಕ್ಷಾ (ಕೆಎಸ್‌ಆರ್‌ಪಿ, ಬೆಂಗಳೂರು), ಎಂ.ಕೃಷ್ಣೋಜಿರಾವ್ (ಡಿಎಆರ್‌, ಮೈಸೂರು).

English summary
Karnataka 3 IPS officers and 19 others from the police force have been chosen for the President’s police medal for their distinguished and meritorious services.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X