ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ: ಶೇ. 21.1ರಷ್ಟು ಮಂದಿಗೆ ಮುನ್ನೆಚ್ಚರಿಕೆ ಡೋಸ್: ಕೋವೀಶಿಲ್ಡ್-ಕಾರ್ಬೆವಾಕ್ಸ್ ಕೊರತೆ

|
Google Oneindia Kannada News

ಬೆಂಗಳೂರು, ಜನವರಿ 02: ಕೊರೊನಾ ಮುನ್ನೆಚ್ಚರಿಕೆ ಲಸಿಕೆ (3ನೇ) ಡೋಸ್‌ ಅನ್ನು ಹೆಚ್ಚಿನ ಸಂಖ್ಯೆಯ ಜನರು ಪಡೆದುಕೊಳ್ಳಬೇಕು ಎಂದು ಸೂಚಿಸಿದೆ. ಆದರೆ ಕರ್ನಾಟಕದಲ್ಲಿ ಕೋವೀಶಿಲ್ಡ್ ಮತ್ತು ಕಾರ್ಬೆವಾಕ್ಸ್ ದಾಸ್ತಾನು ಖಾಲಿ ಆಗಿದ್ದು, 7 ಲಕ್ಷ ಡೋಸ್ ಕೋವ್ಯಾಕ್ಸಿನ್ ಡೋಸ್‌ಗಳು ಮಾತ್ರ ದಾಸ್ತಾನು ಆರೋಗ್ಯ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಅಗತ್ಯದ ಪ್ರಮಾಣ ನೋಡಿಕೊಂಡು ಕೇಂದ್ರ ಸರ್ಕಾರಕ್ಕೆ ಲಸಿಕೆ ಡೋಸ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುವಂತೆ ಮನವಿ ಮಾಡಲಾಗುವುದು. ಜನವರಿ 1ರ ಭಾನುವಾರ ರಾಜ್ಯದಲ್ಲಿ 18 ವರ್ಷಕ್ಕಿಂತ ಮೇಲಿನ ಸುಮಾರು 5 ಲಕ್ಷ ಮಂದಿ ಅಂದರೆ ಶೇ. 21.1ರಷ್ಟು ಜನರು ಕೋವಿಡ್ ಲಸಿಕೆ 3ನೇ ಡೋಸ್ ಪಡೆದಿದ್ದಾರೆ.

ಕೋವಿಡ್ ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಡೋಸ್‌ ಹೆಚ್ಚಿಸಲು 'ಹರ್ ಘರ್ ದಸ್ತಕ್ ಅಭಿಯಾನ'ದ ಪುನರಾರಂಭಿಸಲು ಚಿಂತನೆ ನಡೆದಿದೆ ಎಂದು ಇಲಾಖೆ ಹೇಳಿದೆ.

21% eligible people had received Covid 3rd Dose till Jan.1, Covishield-Corbevax no stock

ಈ ಹಿಂದೆ ಎರಡನೇ 2021 ರ ನವೆಂಬರ್ ನಲ್ಲಿ ಎರಡನೇ ಡೋಸ್ ಪಡೆಯುವಂತೆ ಜನರನ್ನು ಪ್ರೇರೆಪಿಸಲು, ಲಸಿಕೆ ಖಚಿತತೆಗಾಗಿ ದೇಶಾದ್ಯಂತೆ 'ಹರ್ ಘರ್ ದಸ್ತಕ್ ಲಸಿಕೆ ಅಭಿಯಾನ' ಆರಂಬಿಸಲಾಯಿತು. ಮನೆ ಮನೆಗೆ ಭೇಟಿ ನೀಡುವ ಜೊತೆಗೆ ಈ ಸಂಬಂಧ ಆರೋಗ್ಯ ಕಾರ್ಯಕರ್ತರನ್ನು ಮತ್ತು ಸರ್ಕಾರೇತರ ಸಂಸ್ಥೆಗಳನ್ನು ಸಜ್ಜುಗೊಳಿಸಲಾಗಿತ್ತು. ಅದರಂತೆ ಈಗ ಕೋವಿಡ್ ಮುನ್ನೆಚ್ಚರಿಕೆ ಡೋಸ್ ಪ್ರಯೋಜನ, ಮಹತ್ವದ ಬಗ್ಗೆ ಅರಿವು ಮೂಡಿಸಲು ಅಭಿಯಾನ ಕೈಗೊಳ್ಳಲಾಗುವುದು. ಮೂರನೇ ಡೋಸ್‌ ಅರ್ಹರ ಸಂಖ್ಯೆ ಹಾಗೂ ಲಸಿಕೆ ದಾಸ್ತಾನು ಆಧಾರದಲ್ಲಿ ಜಿಲ್ಲೆಗಳಿಗೆ ಅಗತ್ಯ ಸೂಚನೆ ನೀಡಲಾಗಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (ಪಿಎಚ್‌ಎಎನ್‌ಎ) ಕಾರ್ಯಕಾರಿ ಸಮಿತಿ ಸದಸ್ಯ ಡಾ.ಆರ್.ರವೀಂದ್ರ ಮಾತನಾಡಿ, ಹೆಚ್ಚಿನ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗಳ ದಾಸ್ತಾನು ಕಡಿಮೆ ಇದೆ. ಕೆಲವೆಡೆ ದಾಸ್ತಾನು ಇಲ್ಲ ಎನ್ನಲಾಗಿದೆ. ಕಳೆದ ಅಕ್ಟೋಬರ್‌ ತಿಂಗಳಿನಲ್ಲಿ ಬೇಡಿಕೆ ಕಡಿಮೆಯಾದ ಕಾರಣ ಮತ್ತು ಸರ್ಕಾರವು ಎಲ್ಲರಿಗೂ ಉಚಿತ ಲಸಿಕೆಗಳನ್ನು ನೀಡಲು ಪ್ರಾರಂಭಿಸಿದ್ದರಿಂದ ಆಸ್ಪತ್ರೆಗಳಲ್ಲಿ ಸಂಗ್ರಹಣೆ ಕಡಿಮೆ ಆಯಿತು.

21% eligible people had received Covid 3rd Dose till Jan.1, Covishield-Corbevax no stock

ಸದ್ಯ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿನ ಲಭ್ಯ ಲಸಿಕೆ ದಾಸ್ತಾನನ್ನು ಖಾಲಿ ಮಾಡಲು ಯತ್ನಿಸಿವೆ. ಒಂದಷ್ಟು ಕೋವಾಕ್ಸಿನ್ ಡೋಸ್‌ಗಳು (ಒಂದು ಬ್ಯಾಚ್) ಜನವರಿ ಅಂತ್ಯಕ್ಕೆ ಎಕ್ಸ್‌ಪೈರಿ ಆಗಲಿವೆ. ಕಳೆದ ಆರು ತಿಂಗಳಿನಿಂದ ಎಷ್ಟೇಷ್ಟು ದಾಸ್ತಾನು ಇವೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಿಲ್ಲ ಎಂದು ಅವರು ವಿವರಿಸಿದ್ದಾರೆ.

English summary
21% eligible people had received Covid 3rd Dose till Jan.1, Covishield-Corbevax no stock in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X