ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ 18 ಪೊಲೀಸರಿಗೆ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 14: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪೊಲೀಸ್ ಸೇವೆಗೆ ನೀಡುವ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ ರಾಜ್ಯದ 18 ಅಧಿಕಾರಿ, ಸಿಬ್ಬಂದಿಗೆ ಲಭಿಸಿದೆ.

ಸ್ವಾತಂತ್ರ್ಯೋತ್ಸವ ಪ್ರಯುಕ್ತ ಕೇಂದ್ರ ಸರ್ಕಾರ ಸುರಕ್ಷಾ ಬಲಗಳಿಗೆ ನೀಡುವ ಪೊಲೀಸ್‌ ಸೇವಾ ಪದಕದಲ್ಲಿ ರಾಜ್ಯದ 18 ಅಧಿಕಾರಿಗಳು ಸೇರಿದಂತೆ 675 ಮಂದಿಗೆ ಪದಕಗಳನ್ನು ಘೋಷಿಸಿದೆ. ರಾಜ್ಯದ ಹನ್ನೊಂದು ಡಿವೈಎಸ್‌ಪಿಗಳು ಸೇರಿದಂತೆ ವಿವಿಧ ಹಂತದ ಪೊಲೀಸ್‌ ಅಧಿಕಾರಿಗಳಿಗೆ ಒಟ್ಟು 18 ಸಿಬ್ಬಂದಿಗೆ ಈ ಗೌರವ ದೊರೆತಿವೆ.

 ರಾಜ್ಯದ 21 ಹೆಮ್ಮೆಯ ಪೊಲೀಸರಿಗೆ ರಾಷ್ಟ್ರಪತಿ ಪದಕ ಗೌರವ ರಾಜ್ಯದ 21 ಹೆಮ್ಮೆಯ ಪೊಲೀಸರಿಗೆ ರಾಷ್ಟ್ರಪತಿ ಪದಕ ಗೌರವ

ಈ ಬಾರಿಯ 72ನೇ ರಾಷ್ಟ್ರಪತಿ ಪದಕ ಗೌರವಕ್ಕೆ ರಾಜ್ಯದ 18 ಪೊಲೀಸರು ಪಾತ್ರರಾಗಿದ್ದಾರೆ. ಗಣನೀಯ ಸೇವೆ ಸಲ್ಲಿಸಿದ ಪೊಲೀಸರಿಗೆ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಸಮಯದಲ್ಲಿ ನೀಡುವ ಪದಕಗಳಲ್ಲಿ ಶೌರ್ಯ ಪ್ರಶಸ್ತಿ, ವಿಶಿಷ್ಟ ಸೇವಾಪದಕ, ಚಕ್ರ ಪ್ರಶಸ್ತಿ ಹಾಗೂ ಶ್ಲಾಘನೀಯ ಸೇವಾ ಪದಕ ಪ್ರಶಸ್ತಿ ಸೇರಿವೆ.

18 Karnataka police personnel honored with meritorious service medal

- ಟಿ ಸುಂದರಾಜು ಡೆಪ್ಯುಟಿ ಕಮಾಂಡೆಂಟ್‌, ಕೆಎಸ್‌ಆರ್‌ಪಿ, ತುಮಕೂರು

-ಎಂ.ಎನ್‌. ಕರಿಬಸವನಗೌಡ, ಎಸಿಪಿ, ಬೆಂಗಳೂರು ನಗರ

-ಸಿ ಗೋಪಾಲ್ ಎಸಿಪಿ, ಮೈಸೂರು ನಗರ

-ಕೆ ಪುರುಷೋತ್ತಮ್‌ ಡಿವೈಎಸ್‌ಪಿ, ಸಿಐಡಿ, ಬೆಂಗಳೂರು

-ಟಿ ರಂಗಪ್ಪ ಡಿವೈಎಸ್‌ಪಿ, ಸಿಐಡಿ, ಬೆಂಗಳೂರು

-ಟಿ ಕೋದಂಡರಾಮ ಡಿವೈಎಸ್‌ಪಿ, ಎಸಿಬಿ, ಬೆಂಗಳೂರು ಜಿಲ್ಲೆ

-ಉಮೇಶ್‌ ಜಿ ಸೇಠ್‌ ಡಿವೈಎಸ್‌ಪಿ, ಎಸಿಬಿ, ಮೈಸೂರು

-ಆರ್‌ಎಸ್‌ ಉಜ್ಜನಕೊಪ್ಪ ಡಿವೈಎಸ್‌ಪಿ, ಎಸಿಬಿ, ಕೊಪ್ಪಳ

-ಮಂಜುನಾಥ್‌ ಕೆ ಡಿವೈಎಸ್‌ಪಿ, ದಾವಣಗೆರೆ

18 Karnataka police personnel honored with meritorious service medal

-ಎಂ ಬಾಬು ಡಿವೈಎಸ್‌ಪಿ, ದಾವಣಗೆರೆ

-ಸದಾನಂದ ಎ ಡಿವೈಎಸ್‌ಪಿ, ಹಾಸನ

-ಸುಧೀರ್‌ ಎಸ್‌ ಶೆಟ್ಟಿ ಪಿಐ, ಸಿಐಡಿ, ಬೆಂಗಳೂರು

-ಟಿಎನ್‌ ನಾಗಭೂಷಣ್‌ ಎಎಸ್‌ಐ, ಸಿಐಡಿ, ಬೆಂಗಳೂರು

-ಕೆಸಿ ಕೋಮಲಾಚಾರ್ ಎಎಸ್‌ಐ, ಹಾವೇರಿ

-ಎಚ್‌ಎಂ ಪಾಪಣ್ಣ ಸ್ಪೆಷನ್‌ ಎಆರ್‌ಎಸ್‌ಐ, ಕೆಎಸ್‌ಆರ್‌ಪಿ, ಬೆಂಗಳೂರು

-ಎಸ್‌ ಸಿದ್ಲಿಂಗೇಶ್ವರ್‌ ಸಿಎಚ್‌ಸಿ, ಬೆಂಗಳೂರು

-ಎಸ್‌ಎಂ ಬಿಳಗಿ ಸ್ಪೆಷಲ್‌ ಆರ್‌ಎಚ್‌ಸಿ, ಕೆಎಸ್‌ಆರ್‌ಪಿ, ಮೈಸೂರು

English summary
On the eve of 72 Independence day union home ministry has declared meritorious medal for 675 personnel including 18 of Karnataka state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X