148 ಕೋಟಿ ರೂ ಸಾಲ: ನೆಟ್ಟಿಗರು ಆಡಿಕೊಳ್ಳುವಂತೆ ಮಾಡಿದ ಕಾಫಿ ತೋಟ ಹರಾಜು ಪ್ರಕಟಣೆ
ಪ್ರತಿಯೊಬ್ಬರ ಜೀವನದ ಹಣಕಾಸಿನ ಭಾಗವಾಗಿರುವ ಬ್ಯಾಂಕ್‌ಗಳಲ್ಲಿ ಮಧ್ಯಮ ವರ್ಗದವರು ಒಂದು ಲಕ್ಷ ರೂಪಾಯಿ ಸಾಲ ಕೇಳಿದರೆ ಹತ್ತಾರು ದಾಖಲೆಗಳನ್ನು ಕೇಳುತ್ತಾರೆ. ಅಷ್ಟೇ ಅಲ್ಲ ಅದಕ್ಕೂ ಹತ್ತಾರು ಬಾರಿ ಅಲೆಯಬೇಕಾಗುತ್ತದೆ. ಮತ್ತೊಂದೆಡೆ ವಂಚಕ ಉದ್ಯಮಿಗಳಿಗೆ ಕೋಟ್ಯಂತರ ರೂಪಾಯಿ ಸಾಲವನ್ನು ಇದೇ ಬ್ಯಾಂಕುಗಳು ಮಂಜೂರು ಮಾಡಿಕೊಡುತ್ತವೆ. ಇಂದು ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಬ್ಯಾಂಕ್ ಗಳಿಗೆ ವಂಚಿಸುವ ಪ್ರಕರಣಗಳು ಬ್ಯಾಂಕ್ ಗಳನ್ನೇ ಅನುಮಾನಿಸುವಂತೆ ಮಾಡುತ್ತಿವೆ. ಕಾರ್ಪೊರೇಟ್ ವಲಯವು , ಉದ್ಯಮಿಗಳು ಬ್ಯಾಂಕ್ ಗಳಿಂದ ನೂರಾರು ಕೋಟಿ ರೂಪಾಯಿಗಳ ಸಾಲ ಪಡೆದು ನಂತರ ಕೈ ಎತ್ತುವ ಪ್ರಕರಣಗಳಿಗೆ ದೇಶದಲ್ಲಿ ನೂರಾರು ಉದಾಹರಣೆ ಇದ್ದರೆ ಮತ್ತೊಂದೆಡೆ ಜನಸಾಮಾನ್ಯರು ಪಡೆದ ಸಾಲಗಳನ್ನು ಬ್ಯಾಂಕಿನವರು ಮುಲಾಜಿಲ್ಲದೆ ವಸೂಲಿ ಮಾಡುತಿದ್ದಾರೆ.
ಈ ಕೆಟ್ಟ ಸಾಲಗಳಿಗೆ ಹೊಸತೊಂದು ಸೇರ್ಪಡೆ ದಿ ಗ್ರೇಟ್ ಇಂಡಿಯನ್ ತಮಾಶಾ ಕಂಪೆನಿ ಮತ್ತು ದಿ ಗ್ರೇಟ್ ಇಂಡಿಯನ್ ನೌಟಂಕಿ ಕಂಪೆನಿಗಳಾಗಿವೆ. ಈ ಎರಡೂ ಕಂಪೆನಿಗಳು ಐಡಿಬಿಐ, ಎಚ್‌ಡಿಎಫ್‌ಸಿ ಮತ್ತು ಬ್ಯಾಂಕ್ ಆಪ್ ಬರೋಡ ಬ್ಯಾಂಕ್ ಗಳ ದೆಹಲಿ ಶಾಖೆಯಿಂದ ಪಡೆದಿರುವ ಸಾಲವು ಸುಸ್ತಿ ಆಗಿದ್ದು ಈ ಅನುತ್ಪಾದಕ ಸಾಲಗಳ ಒಟ್ಟು ಮೊತ್ತ 148 ಕೋಟಿ ರೂಪಾಯಿಗಳಾಗಿವೆ.
ಐಡಿಬಿಐ ಬ್ಯಾಂಕ್ ಈ ಕಂಪೆನಿಗೆ ಸೇರಿದ ಆಸ್ತಿಯನ್ನು ಹರಾಜು ಹಾಕಲು ಮುಂದಾಗಿದ್ದು, ಈಗಾಗಲೇ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ. ಈ ಹರಾಜು ಪ್ರಕಟಣೆಯು ಸೋಷಿಯಲ್ ಮೀಡಿಯಾಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು ಈ ಕಂಪೆನಿಗಳ ಹೆಸರುಗಳು ನೆಟ್ಟಿಗರ ಗೇಲಿಗೆ ಕಾರಣವಾಗಿವೆ. ಅತ್ಯಂತ ಜವಾಬ್ದಾರಿಯಿಂದ ಸಾಲ ನೀಡಬೇಕಾದ ಬ್ಯಾಂಕುಗಳು ಸಾಲ ನೀಡುವಲ್ಲಿ ಎಡವಿದವೇ ಎಂಬ ಪ್ರಶ್ನೆ ಎದ್ದಿದೆ.

ದಿ ಗ್ರೇಟ್ ಇಂಡಿಯನ್ ನೌಟಂಕಿ ಎಂಬ ಕಂಪೆನಿಯು ಮೇಲಿನ ಮೂರು ಬ್ಯಾಂಕ್ ಗಳಿಂದ ಸಾಲ ಪಡೆದಿದ್ದು ಇದಕ್ಕೆ ಜಾಮೀನುದಾರರಾಗಿ ದಿ ಗ್ರೇಟ್ ಇಂಡಿಯನ್ ತಮಾಷಾ ಕಂಪೆನಿಯ ಆಸ್ತಿಗಳನ್ನು ನೀಡಿದೆ. ದಿ ಗ್ರೇಟ್ ಇಂಡಿಯನ್ ತಮಾಷಾ ಕಂಪೆನಿಗೆ ಅನುಮೋದ್ ಶರ್ಮಾ, ಡಾ ಅನು ಅಪ್ಪಯ್ಯ, ಸಂಜಯ್ ಚೌಧರಿ, ವಿರಾಫ್ ಸರ್ಕಾರಿ, ಎಂಬುವವರು ನಿರ್ದೇಶಕರಾಗಿದ್ದು ಇವರು ಸಾಲಕ್ಕೆ ಜಾಮೀನುದಾರರೂ ಆಗಿದ್ದಾರೆ.
ಈ ಕಂಪೆನಿ ಕೊಡಗಿನ ಬಲ್ಲಮಾವಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪೇರೂರು ಗ್ರಾಮದ ಸರ್ವೆ ನಂಬರ್ 7/5, 7/1, 7/3, 7/5 ಹಾಗೂ ಸರ್ವೆ ನಂಬರ್ 6 ಮತ್ತು 4 ರಲ್ಲಿ ಒಟ್ಟು 107.24 ಎಕರೆ ಕಾಫಿ ತೋಟ ಹೊಂದಿದೆ. ಈಗ ಐಡಿಬಿಐ ಬ್ಯಾಂಕ್ ಈ ಆಸ್ತಿಗಳನ್ನು 27-7-2022 ರಂದು ಆನ್ ಲೈನ್ ಹರಾಜಿಗೆ ಇಟ್ಟಿದೆ. ಈ ಆಸ್ತಿಗಳನ್ನು 16-7-2022 ರಂದು ಬಿಡ್ ದಾರರಿಗೆ ಪರಿಶೀಲಿಸುವ ಅವಕಾಶ ನೀಡಲಾಗಿದೆ.
ದಿ ಗ್ರೇಟ್ ಇಂಡಿಯನ್ ನೌಟಂಕಿ ಕಂಪನಿಯು ಐಡಿಬಿಐ ಬ್ಯಾಂಕ್‌ಗೆ 86.48 ಕೋಟಿ ರೂ., ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ 6.26 ಕೋಟಿ ರೂ. ಮತ್ತು ಬ್ಯಾಂಕ್ ಆಫ್ ಬರೋಡಾಕ್ಕೆ 49.23 ಕೋಟಿ ರೂ. ಸಾಲ ಮತ್ತು ಬಡ್ಡಿಯನ್ನು ಬಾಕಿ ಉಳಿಸಿಕೊಂಡಿದ್ದು ಈಗ ಕಾಪಿ ತೋಟಗಳನ್ನು ಹರಾಜು ಹಾಕುವ ಮೂಲಕ ಸಾಲ ವಸೂಲಾತಿಗೆ ಮುಂದಾಗಿದೆ. ಈ ಆಸ್ತಿಗಳಿಗೆ 11.53 ಕೋಟಿ ರೂಪಾಯಿಗಳ ಮೀಸಲು ಬೆಲೆಯನ್ನೂ ನಿಗದಿಪಡಿಸಿದೆ. ಈ ವರದಿಗಾರ ಆಸ್ತಿಗಳ ಆರ್ಟಿಸಿ ಯನ್ನು ಪರಿಶೀಲಿಸಿದಾಗ ಅವೆಲ್ಲವೂ ದಿ ಗ್ರೇಟ್ ಇಂಡಿಯನ್ ತಮಾಶಾ ಕಂಪೆನಿಯ ಹೆಸರಿನಲ್ಲಿವೆ.
ದಿ ಗ್ರೇಟ್ ಇಂಡಿಯನ್ ನೌಟಂಕಿ ಕಂಪನಿಯನ್ನು ಸೆಪ್ಟೆಂಬರ್ 2007 ರಲ್ಲಿ ದೆಹಲಿಯಲ್ಲಿ ನೋಂದಾಯಿತ ಕಚೇರಿಯೊಂದಿಗೆ ಸ್ಥಾಪಿಸಲಾಗಿದೆ. ಇದು ಭಾರತೀಯ ಸಂಸ್ಕೃತಿ ಮತ್ತು ಪ್ರದರ್ಶನ ಕಲೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಮನರಂಜನಾ ಸ್ಥಳಗಳು ಮತ್ತು ಪ್ರದರ್ಶನಗಳನ್ನು ಆಯೋಜನೆ ಮಾಡುವ ಚಟುವಟಿಕೆ ನಡೆಸುವುದಾಗಿ ಕಂಪೆನಿ ಸಚಿವಾಲಯಕ್ಕೆ ಮಾಹಿತಿ ನೀಡಿದೆ.
ಕಂಪೆನಿಯು ಕಿಂಗ್ಡಮ್ ಆಫ್ ಡ್ರೀಮ್ಸ್, ನೌಟಂಕಿ ಮಹಲ್ ಮತ್ತು ಕಲ್ಚರ್‌ಗಲ್ಲಿ ಎಂಬ ಪ್ರದರ್ಶನ ನೀಡುವುದಾಗಿ ಹೇಳಿಕೊಂಡಿದೆ. ಇನ್ನು ಜನವರಿ 2008
ರಲ್ಲಿ ಸ್ಥಾಪಿಸಲಾದ ದಿ ಗ್ರೇಟ್ ಇಂಡಿಯನ್ ತಮಾಶಾ ಕಂಪನಿಯು ರೂ 2 ಕೋಟಿ ರೂಪಾಯಿಗಳ ಅಧಿಕೃತ ಷೇರು ಬಂಡವಾಳದೊಂದಿಗೆ ಸರ್ಕಾರೇತರ ಕಂಪನಿ ಎಂದು ವರ್ಗೀಕರಿಸಲ್ಪಟ್ಟಿದೆ ಮತ್ತು ಅದರ ಪಾವತಿಸಿದ ಬಂಡವಾಳವು ರೂ 2 ಲಕ್ಷವಾಗಿದೆ. ಈ ಕಂಪೆನಿಗಳ ಹೆಸರುಗಳೇ ಗೇಲಿಗೆ ಕಾರಣವಾಗಿದ್ದು ಬ್ಯಾಂಕ್‌ಗಳ ವಿಶ್ವಾಸಾರ್ಹತೆ ಬಗ್ಗೆ ಸಾರ್ವಜನಿಕರು ಸಂದೇಹ ಪಡುವಂತಾಗಿದೆ.
Recommended Video
-
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ












Click it and Unblock the Notifications