ಕರಾಳ ಮಂಗಳವಾರ, ರಸ್ತೆ ಅಪಘಾತಕ್ಕೆ 13 ಬಲಿ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 15 : ತಿರುಪತಿಗೆ ಹೋಗುತ್ತಿದ್ದ ಬೆಂಗಳೂರಿನ ಒಂದೇ ಕುಟುಂಬದ ಆರು ಮಂದಿ ಸೇರಿದಂತೆ ಒಟ್ಟು 13 ಜನರು ಮಂಗಳವಾರ ನಡೆದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಈ ಅಪಘಾತಗಳು ಸಂಭವಿಸಿವೆ.

6 ಜನರ ದುರ್ಮರಣ : ಆಂಧ್ರಪ್ರದೇಶದ ಚಿತ್ತೂರಿನ ಚಂದ್ರಗಿರಿ ಬಳಿ ನಡೆದ ಅಪಘಾತದಲ್ಲಿ ಬೆಂಗಳೂರಿನ ಚಿಕ್ಕಜಾಲ ಸಮೀಪದ ಬಿಲ್ಲಮಾರನಹಳ್ಳಿ ಗ್ರಾಮದ ಒಂದೇ ಕುಟುಂಬದ ಆರು ಜನರು ಮೃತಪಟ್ಟಿದ್ದಾರೆ. ಸೋಮವಾರ ರಾತ್ರಿ 1.30ಕ್ಕೆ ಗ್ರಾಮದಿಂದ ಎಲ್ಲರೂ ತಿರುಪತಿಗೆ ಟೆಂಟೋ ಟ್ರಾವೆಲರ್ ಮೂಲಕ ಪ್ರವಾಸ ಹೊರಟಿದ್ದರು. ಟಿಟಿಗೆ ಲಾರಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. [ಅಪಘಾತವಾದಾಗ ಜೀವ ಉಳಿಸಲು ನೆರವಾಗಿ]

road accident

ಮೃತಪಟ್ಟವರನ್ನು ಸುರೇಶ (27), ಕಿರಣ್ (27), ಮಂಗಳ ಗೌರಿ (23), ಸುಜಾತಮ್ಮ (36), ಪಾರ್ವತಮ್ಮ (48), ರಮ್ಯಾ (23) ಎಂದು ಗುರುತಿಸಲಾಗಿದೆ. ಮಾಲಮ್ಮ, ನಾಗಮ್ಮ, ಮಧು, ಮುನಿಯಮ್ಮ, ಶೋಭಾ ಅವರು ಅಪಘಾತದಲ್ಲಿ ಗಾಯಗೊಂಡಿದ್ದಾರೆ. [ದೇಹ ತುಂಡಾದರೂ ಕಣ್ಣು ದಾನ ಮಾಡಿ ಬೆಳಕಾದರು]

ಬೈಕ್ ಸವಾರನ ದೇಹವೇ ಛಿದ್ರ : ಬೈಕ್‌ಗೆ ಲಾರಿ ಡಿಕ್ಕಿ ಹೊಡೆದಿದ್ದರಿಂದ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬೆಂಗಳೂರಿನ ಹೊಸೂರು ಮುಖ್ಯ ರಸ್ತೆಯ ಬೊಮ್ಮಸಂದ್ರ ಬಳಿ ನಡೆದಿದೆ. ಮೃತಪಟ್ಟವರನ್ನು ವಿಜಯ್‍ ಕಾಂತ್ (30) ಎಂದು ಗುರುತಿಸಲಾಗಿದೆ.

ವಿಜಯ್ ಕಾಂತ್ ಬೈಕ್‌ನಲ್ಲಿ ಚಂದಾಪುರದಿಂದ ಬೊಮ್ಮಸಂದ್ರಕ್ಕೆ ಕೆಲಸಕ್ಕೆ ಹೋಗಲು ಬರುತ್ತಿದ್ದಾಗ, ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಇದರಿಂದಾಗಿ ವಿಜಯ್ ಕಾಂತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ದೇಹ ಛಿದ್ರವಾಗಿತ್ತು.

ತುಮಕೂರಿನಲ್ಲಿ ದಂಪತಿ ಸಾವು : ಬೈಕ್‌ನಲ್ಲಿ ಬರುತ್ತಿದ್ದ ದಂಪತಿಗೆ ಲಾರಿ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ತುಮಕೂರಿನಲ್ಲಿ ಮಂಗಳವಾರ ಸಂಜೆ ನಡೆದಿದೆ.

4 ವಿದ್ಯಾರ್ಥಿಗಳು ಸಾವು : ವಿಜಯವಾಡ-ಹೈದರಾಬಾದ್ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ ಬಸ್ ಮರಕ್ಕೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದ್ದರಿಂದ ಈ ಅಪಘಾತ ಸಂಭವಿಸಿದೆ.

ಮೃತಪಟ್ಟವರು ಉಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು. ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ ಹೈದರಾಬಾದ್‍ಗೆ ವಾಪಸ್ ಆಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಬಸ್ ಚಾಲಕ ಕುಡಿದು ವೇಗವಾಗಿ ಬಸ್ ಚಾಲನೆ ಮಾಡಿದ್ದೇ ಘಟನೆಗೆ ಕಾರಣ ಎಂದು ತಿಳಿದುಬಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
13 killed in separate road accident in Karnataka and Andhra Pradesh on Tuesday, March 15, 2016.
Please Wait while comments are loading...