ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ನಗರಗಳಲ್ಲಿ 128 ಮಹಿಳಾ ಕ್ಲಿನಿಕ್‌ಗಳು ತೆರೆಯಲು ಚಿಂತನೆ

|
Google Oneindia Kannada News

ಬೆಂಗಳೂರು ಜುಲೈ 14: ಮಹಿಳೆಯರು ಶೀಘ್ರದಲ್ಲೇ ತಮ್ಮ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಹೆಚ್ಚು ಸೌಲಭ್ಯವನ್ನು ಪಡೆಯಲಿದ್ದಾರೆ. ನಗರ ಪ್ರದೇಶಗಳಲ್ಲಿ ಆಗಸ್ಟ್ ವೇಳೆಗೆ 128 ಮಹಿಳಾ ಕ್ಲಿನಿಕ್‌ಗಳನ್ನು ಪ್ರಾರಂಭಿಸಲು ರಾಜ್ಯ ಆರೋಗ್ಯ ಇಲಾಖೆ ಯೋಜಿಸುತ್ತಿದೆ. 57 ಕ್ಲಿನಿಕ್‌ಗಳು ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿದ್ದರೆ, ಉಳಿದವು ರಾಜ್ಯಾದ್ಯಂತ ಇತರ ನಗರಗಳಲ್ಲಿ ನೆಲೆಗೊಳ್ಳಲಿವೆ ಎಂದು ರಾಷ್ಟ್ರೀಯ ಆರೋಗ್ಯ ಮಿಷನ್‌ನ ನಿರ್ದೇಶಕಿ ಡಾ.ಅರುಂದತಿ ಚಂದ್ರಶೇಖರ್ ತಿಳಿಸಿದ್ದಾರೆ.

"ಇಡೀ ದೇಶದಲ್ಲಿ ಇಂತಹ ಮಹಿಳೆಯರಿಗೇ ಪ್ರತ್ಯೇಕವಾದ ಚಿಕಿತ್ಸಾಲಯಗಳನ್ನು ಪ್ರಾರಂಭಿಸುತ್ತಿರುವುದು ಕರ್ನಾಟಕದಲ್ಲೇ ಮೊದಲು" ಎಂದು ಅವರು ಹೇಳಿದರು.

ಹದಿಹರೆಯದವರು ಮತ್ತು ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳು, ಸ್ಕ್ರೀನಿಂಗ್, ಕೌನ್ಸಿಲಿಂಗ್, ಕುಟುಂಬ ಯೋಜನೆ ಸೇವೆಗಳು, ಆಂಟಿ-ನೇಟಲ್ ಕೇರ್ ಮತ್ತು ಇತರವುಗಳನ್ನು ಪರಿಹರಿಸಲು ಖಾಸಗಿ ವಲಯದ ಮಹಿಳಾ ಚಿಕಿತ್ಸಾಲಯಗಳ ಸಾಲಿನಲ್ಲಿ ಮಹಿಳಾ ಕ್ಲಿನಿಕ್ಗಳನ್ನು ಸ್ಥಾಪಿಸಲಾಗುವುದು. ಈ ಚಿಕಿತ್ಸಾಲಯಗಳು ನಗರ ಸಾರ್ವಜನಿಕ ಆರೋಗ್ಯ ಕೇಂದ್ರಗಳ ಭಾಗವಾಗಿರುತ್ತವೆ. ಅಲ್ಲಿ ಮಹಿಳೆಯರನ್ನು ಪರೀಕ್ಷಿಸಲು ಪ್ರತ್ಯೇಕ ಭಾಗ ಅಥವಾ ಕೊಠಡಿಯನ್ನು ನಿಗದಿಪಡಿಸಲಾಗಿದೆ. ಇದು ಚಿಕಿತ್ಸೆಯ ಸಮಯದಲ್ಲಿ ಗೌಪ್ಯತೆ ಮತ್ತು ಸೌಕರ್ಯವನ್ನು ಖಚಿತಪಡಿಸುವುದು. ನಾವು ಇತ್ತೀಚೆಗೆ ಪ್ರಾಯೋಗಿಕವಾಗಿ ಮೈಸೂರಿನಲ್ಲಿ ಇಂತಹ 10 ಕ್ಲಿನಿಕ್‌ಗಳನ್ನು ಪ್ರಾರಂಭಿಸಿದ್ದೇವೆ ಮತ್ತು ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಡಾ ಅರುಂದತಿ ಹೇಳಿದರು.

128 Womens Clinics to be opened in Karnataka cities

ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪ್ರಸಾದ್ ಕೆ.ಹೆಚ್ ಮಾತನಾಡಿ, ಮೈಸೂರಿನ ಮಹಿಳಾ ಕ್ಲಿನಿಕ್‌ಗಳಲ್ಲಿ ದಿನಕ್ಕೆ ಕನಿಷ್ಠ 50 ರಿಂದ 100 ಮಹಿಳಾ ರೋಗಿಗಳು ಬರುತ್ತಿದ್ದಾರೆ. ಸಿಬ್ಬಂದಿಯಲ್ಲಿ ಮಹಿಳಾ ವೈದ್ಯರು ಮತ್ತು ನರ್ಸ್‌ಗಳು ಇದ್ದಾರೆ ಎಂದು ಅವರು ಹೇಳಿದರು.

ಸರ್ಕಾರಿ ವಲಯದ ಮಹಿಳಾ ಚಿಕಿತ್ಸಾಲಯಗಳ ಪರಿಕಲ್ಪನೆಗೆ ಪ್ರತಿಕ್ರಿಯಿಸಿದ ಖ್ಯಾತ ಸ್ತ್ರೀರೋಗ ತಜ್ಞ ಡಾ ಪದ್ಮಿನಿ ಪ್ರಸಾದ್, " ಪುರುಷ ಮತ್ತು ಮಹಿಳೆ ಇಬ್ಬರನ್ನೂ ಸಮಾನವಾಗಿ ಪರಿಗಣಿಸುತ್ತಿದ್ದರೂ, ಈ ಮುಂದುವರಿದ ಯುಗದಲ್ಲಿಯೂ ಸಹ, ಸಾಂಪ್ರದಾಯಿಕ ಮತ್ತು ವಿದ್ಯಾವಂತ ಕನಿಷ್ಠ 20 ಪ್ರತಿಶತ ಮಹಿಳೆಯರು ಪುರುಷ ವೈದ್ಯರನ್ನು ಭೇಟಿ ಮಾಡಲು ಹಿಂಜರಿಯುತ್ತಾರೆ. ವಿಶೇಷವಾಗಿ ಸ್ತ್ರೀರೋಗ ಸಮಸ್ಯೆಗಳು ಮತ್ತು ಹೆರಿಗೆಗೆ ಸಂಬಂಧಿಸಿದ ವಿಷಯಗಳಿಗೆ ಪುರುಷ ವೈದ್ಯರನ್ನು ಸಂಪರ್ಕಿಸಲು ಮಹಿಳೆಯರು ಮುಜುಗರಗೊಳ್ಳುತ್ತಾರೆ. ತೀವ್ರವಾದ ರಕ್ತಸ್ರಾವ ಮತ್ತು ಇತರ ಸಮಸ್ಯೆಗಳಿಗೆ ಸಂಬಂಧಿಸಿದ ತಮ್ಮ ಸಮಸ್ಯೆಗಳನ್ನು ಮರೆಮಾಚುವ ಅನೇಕ ಮಹಿಳೆಯರು ಗರ್ಭಾಶಯ ಮತ್ತು ಕ್ಯಾನ್ಸರ್‌ನಂತಹ ಸಮಸ್ಯೆಗಳಿಗೆ ತಡವಾಗಿ ನಮ್ಮನ್ನು ಸಂಪರ್ಕಿಸುತ್ತಾರೆ," ಎಂದು ಹೇಳಿದರು.

128 Womens Clinics to be opened in Karnataka cities

ಈ ಚಿಕಿತ್ಸಾಲಯಗಳು ಮಹಿಳೆಯರು ತಮ್ಮ ವೈಯಕ್ತಿಕ, ಖಾಸಗಿ, ಗೌಪ್ಯ ವಿಷಯಗಳನ್ನು ಮಹಿಳಾ ವೈದ್ಯರೊಂದಿಗೆ ಹಂಚಿಕೊಳ್ಳಲು ಸಹಾಯ ಮಾಡುತ್ತವೆ ಮತ್ತು ಅನೇಕ ಸಮಸ್ಯೆಗಳನ್ನು ಪ್ರಾರಂಭದಲ್ಲಿಯೇ ಪರಿಹರಿಸಬಹುದು ಮತ್ತು ಚಿಕಿತ್ಸೆ ನೀಡಬಹುದು. ಗ್ರಾಮೀಣ ಪ್ರದೇಶದಲ್ಲೂ ಇಂತಹ ಕ್ಲಿನಿಕ್‌ಗಳನ್ನು ಆರಂಭಿಸಿದರೆ ಅನುಕೂಲವಾಗುತ್ತದೆ ಎಂದು ಡಾ. ಪದ್ಮಿನಿ ಪ್ರಸಾದ್ ಹೇಳಿದರು.

Recommended Video

ಬಿಸಿಸಿಐ ಅಧ್ಯಕ್ಷನ ಮಾತಿಗೆ ನಿಟ್ಟುಸಿರು ಬಿಟ್ಟ ವಿರಾಟ್ | *Cricket | OneIndia Kannada

English summary
state health department is planning to start 128 women's clinics in urban areas in August.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X