ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲ್ಯಾಣ ಕರ್ನಾಟಕ; ಖಾಲಿ ಹುದ್ದೆಗಳು, ನೇಮಕಾತಿ ಮಾಡಬೇಕಾದ ಸಂಖ್ಯೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 27; ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಘೋಷಣೆ ಮಾಡಲಾಗುತ್ತದೆ. ಆದರೆ ಆ ಭಾಗದ ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆಯೇ ಆಡಳಿತ ನಡೆಸಲು ಸವಾಲಾಗುತ್ತದೆ.

ಕಳೆದ ವಾರ ಪೂರ್ಣಗೊಂಡ ಕರ್ನಾಟಕ ವಿಧಾನ ಮಂಡಲದ ಮುಂಗಾರು ಅಧಿವೇಶನದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಈ ಕುರಿತು ಚರ್ಚೆಗಳು ನಡೆಯಿತು. ನಾಮ ನಿರ್ದೇಶಿತ ಸದಸ್ಯರಾದ ಡಾ. ತಳವಾರ್ ಸಾಬಣ್ಣ ಈ ಕುರಿತು ಪ್ರಶ್ನಿಸಿದ್ದರು.

ಪ್ರಿಯಾಂಕ್ ಖರ್ಗೆಗೆ ಕಲ್ಯಾಣ ರಾಜ್ಯದ ಅಭಿವೃದ್ಧಿ ಬೇಕಿಲ್ಲ: ಸಿಎಂ ಬೊಮ್ಮಾಯಿ ಪ್ರಿಯಾಂಕ್ ಖರ್ಗೆಗೆ ಕಲ್ಯಾಣ ರಾಜ್ಯದ ಅಭಿವೃದ್ಧಿ ಬೇಕಿಲ್ಲ: ಸಿಎಂ ಬೊಮ್ಮಾಯಿ

ಮಾನ್ಯ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರಿಗೆ ಈ ಕುರಿತು ಪ್ರಶ್ನೆ ಕೇಳಿದ್ದರು. ಹಿಂದುಳಿದ ಭಾಗವಾದ ಕಲ್ಯಾಣ ಕಲ್ಯಾಣ ಕರ್ನಾಟಕದಲ್ಲಿ ಕರ್ನಾಟಕ ಸರ್ಕಾರದಿಂದ ನೇರ ನೇಮಕಾತಿ ಮುಖಾಂತರ ಮತ್ತು ಮುಂಬಡ್ತಿ ಮುಖಾಂತರ ಭರ್ತಿ ಮಾಡಬೇಕಾದ ಖಾಲಿ ಹುದ್ದೆಗಳ ಸಂಖ್ಯೆ ಎಷ್ಟು ಎಂದು ಕೇಳಿದ್ದರು.

Breaking; ಕಲಬುರಗಿ-ಕೊಲ್ಹಾಪುರ ರೈಲಿಗೆ ಹಸಿರು ನಿಶಾನೆ, ವೇಳಾಪಟ್ಟಿ Breaking; ಕಲಬುರಗಿ-ಕೊಲ್ಹಾಪುರ ರೈಲಿಗೆ ಹಸಿರು ನಿಶಾನೆ, ವೇಳಾಪಟ್ಟಿ

11,817 Post To Fill In Kalyana Karnataka Limit Under Direct Recruitment

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ನೇರ ನೇಮಕಾತಿಯಡಿ ಒಟ್ಟು 23,430 ಹುದ್ದೆಗಳು ಭರ್ತಿ ನೇರ ನೇಮಕಾತಿ ಮುಖಾಂತರ ಮತ್ತು ಮಾಡಬೇಕಾದ ಖಾಲಿ ಹುದ್ದೆಗಳಿದ್ದು, ಈ ಪೈಕಿ ವಿವಿಧ ನೇಮಕಾತಿ ಪ್ರಾಧಿಕಾರಗಳಿಂದ 11613 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದೆ ಹಾಗೂ 11817 ಹುದ್ದೆಗಳು ಭರ್ತಿ ಮಾಡಲು ಬಾಕಿ ಇರುತ್ತದೆ ಎಂದು ಸದನದಕ್ಕೆ ಮಾಹಿತಿ ನೀಡಲಾಗಿದೆ.

 ರಾಜ್ಯ ಬಿಡಿ, ಕಲ್ಯಾಣ ಕರ್ನಾಟಕದಲ್ಲೇ ರಾಯಚೂರಿಗೆ ತಾರತಮ್ಯ! ರಾಜ್ಯ ಬಿಡಿ, ಕಲ್ಯಾಣ ಕರ್ನಾಟಕದಲ್ಲೇ ರಾಯಚೂರಿಗೆ ತಾರತಮ್ಯ!

ಸ್ಥಳೀಯ ವ್ಯಕ್ತಿಗಳು ಲಭ್ಯವಿಲ್ಲ; 371 (ಜೆ) ವಿಶೇಷ ಸ್ಥಾನಮಾನ ಹೊಂದಿದ್ದರೂ ಸರ್ಕಾರವು ನೇಮಕಾತಿ ಪ್ರಕ್ರಿಯೆ ಕೈಗೊಳ್ಳದಿರಲು ಕಾರಣವೇನು? ಎಂದು ಸಹ ಸರ್ಕಾರವನ್ನು ಪ್ರಶ್ನಿಸಲಾಗಿದೆ. ಭಾರತದ ಸಂವಿಧಾನದ ಅನುಚ್ಛೇದ 371(ಜೆ) ಅನ್ವಯ ಸ್ಥಳೀಯ ವ್ಯಕ್ತಿಗಳಿಗೆ ಮೀಸಲಿರಿಸಲಾಗಿರುವ ಹುದ್ದೆಗಳಲ್ಲಿ ಕೆಲವು ಹುದ್ದೆಗಳನ್ನು ನ್ಯಾಯಾಲಯ ಪಕರಣಗಳಿಂದಾಗಿ ಹಾಗೂ ಅರ್ಹ ಸ್ಥಳೀಯ ವ್ಯಕ್ತಿಗಳು ಲಭ್ಯವಿಲ್ಲದಿರುವುದು ಮುಂತಾದ ಆಡಳಿತಾತ್ಮಕ ಕಾರಣಗಳಿಂದಾಗಿ ಭರ್ತಿ ಮಾಡಲು ಸಾಧ್ಯವಾಗಿರುವುದಿಲ್ಲ.

ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಪ್ರತಿ ತಿಂಗಳು ನಡೆಯುವ ಕಾರ್ಯದರ್ಶಿಗಳ ಸಭೆಯಲ್ಲಿ ಮತ್ತು ಅನುಚ್ಛೇಧ 371(ಜೆ) ಕುರಿತಾದ ಸಚಿವ ಸಂಪುಟ ಉಪ ಸಮಿತಿಯು ತನ್ನ ಸಭೆಗಳಲ್ಲಿ ಸ್ಥಳೀಯ ವೃಂದಗಳಲ್ಲಿ ಲಭ್ಯವಿರುವ ಖಾಲಿ ಹುದ್ದೆಗಳ ಪರಾಮರ್ಶೆ ನಡೆಸುತ್ತಿದ್ದು, ಸಾಧ್ಯವಾದಷ್ಟು ಶೀಘ್ರವಾಗಿ ಎಲ್ಲಾ ಸ್ಥಳೀಯ ವೃಂದದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳಿಗೆ ಸೂಚನೆಗಳನ್ನು ನೀಡಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.

11,817 Post To Fill In Kalyana Karnataka Limit Under Direct Recruitment

ಗುಣಮಟ್ಟದ ಆಡಳಿತ ಶಿಕ್ಷಣ ನೀಡಲು ಮತ್ತು ಪ್ರಾದೇಶಿಕ ಅಸಮಾನತೆ ನಿವಾರಿಸಲು ಸರ್ಕಾರ ದಿಟ್ಟ ಕ್ರಮ ಕೈಗೊಳ್ಳುವುದೇ? ಎಂದು ಪ್ರಶ್ನೆ ಮಾಡಲಾಗಿದೆ. ಗುಣಮಟ್ಟದ ಆಡಳಿತ ಶಿಕ್ಷಣ ನೀಡಲು ಮತ್ತು ಪ್ರಾದೇಶಿಕ ಅಸಮಾನತೆ ನಿವಾರಿಸಲು ಸರ್ಕಾರ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಸರ್ಕಾರ ತನ್ನ ಉತ್ತರದಲ್ಲಿ ತಿಳಿಸಿದೆ.

ನೇಮಕ ಹೊಂದಿ ನಿಯುಕ್ತಿಯಾದ ಮೇಲೆ ಬೇರೆ ಪ್ರದೇಶಗಳಿಗೆ ನಿಯೋಜನೆ. ಅಥವಾ ತಕ್ಷಣ ವರ್ಗಾವಣೆ ಮಾಡಿಕೊಳ್ಳುವುದಕ್ಕೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಲಾಗಿದೆ.

ಸರ್ಕಾರ ಸ್ಥಳೀಯ ವೃಂದದಲ್ಲಿ ನೇಮಕಗೊಂಡು ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿಯುಕ್ತಿಗೊಂಡ ವ್ಯಕ್ತಿಗಳ ವರ್ಗಾವಣೆಗೆ ಸರ್ಕಾರದ ಆದೇಶ ಸಂಖ್ಯೆ ಸಿಆಸುಇ 17 ಸೇನೌವ 2015, ದಿನಾಂಕ 27.04.2015ರಲ್ಲಿ ವರ್ಗಾವಣೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದು, ಅದರಂತೆ ಎಲ್ಲಾ ಇಲಾಖೆಗಳು ತಮ್ಮ ಹಂತದಲ್ಲಿಯೇ ಕ್ರಮವಹಿಸುತ್ತಿವೆ ಎಂದು ಉತ್ತರದಲ್ಲಿ ತಿಳಿಸಿದೆ.

ಲಿಫ್ಟ್ ಆಪರೇಟರ್ ಹುದ್ದೆ; ಕಲಬುರಗಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಲಿಫ್ಟ್ ಆಪರೇಟರ್ ಒಂದು ಹುದ್ದೆಯನ್ನು ಹೊರಗುತ್ತಿಗೆ ಆಧಾರದ ಮೇಲೆ ಪೂರೈಸಲು ಅರ್ಹ ಪೂರೈಕೆದಾರರು, ಮ್ಯಾನ್ ಪವರ್ ಏಜೆನ್ಸಿ ಹಾಗೂ ಲಿಫ್ಟ್ ಆಪರೇಟರ್ ಸರ್ವಿಸ್ ಏಜೆನ್ಸಿಗಳಿಂದ ಟೆಂಡರ್ ಆಹ್ವಾನಿಸಲಾಗಿದೆ.

ಕಲಬುರಗಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ. ಭರ್ತಿ ಮಾಡಿದ ಟೆಂಡರ್ ಅರ್ಜಿಯನ್ನು 2022ರ ಅಕ್ಟೋಬರ್ 15ರ ಸಂಜೆ 5 ಗಂಟೆಯೊಳಗಾಗಿ ಸಲ್ಲಿಸಬೇಕು.

ಆಸಕ್ತರು ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ನ್ಯಾಯಾಲಯದ https://districts.ecourts.gov.in/.../kalaburagi/tender ವೆಬ್‍ಸೈಟ್‍ ವೀಕ್ಷಿಸಬಹುದಾಗಿದೆ.

English summary
Under 23,430 post at Kalyana Karnataka limit 11,817 post should fill from direct recruitment said Karnataka government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X