ಶೀಘ್ರ 3450 ಏಕ ಶಿಕ್ಷಕ ಶಾಲೆಗಳ ವಿಲೀನ ಪ್ರಕ್ರಿಯೆ ಆರಂಭ!

ಬೆಂಗಳೂರು, ಜೂನ್ 12: ಗ್ರಾಮೀಣ ಭಾಗದಲ್ಲಿ ಶಾಲೆಗಳಲ್ಲಿ ಮಕ್ಕಳು ಕಡಿಮೆ ಇರುವ ಹಾಗೂ ಏಕೋಪಾಧ್ಯಾಯ ಶಾಲೆಗಳನ್ನು ಹತ್ತಿರದ ಶಾಲೆಗಳಿಗೆ ವಿಲೀನ ಮಾಡುವ ಪ್ರಕ್ರಿಯೆಗೆ ಮತ್ತೆ ಜೀವ ಬಂದಿದೆ.

ಪೋಷಕರು, ಶಿಕ್ಷಕರ ಒತ್ತಾಯದ ಮೇರೆಗೆ ಹಿಂದಿನ ಸರ್ಕಾರ ಈ ವಿಚಾರವನ್ನು ಅಲ್ಲಿಗೆ ಕೈಬಿಟ್ಟಿತ್ತು. ಇದೀಗ ಮತ್ತೊಮ್ಮೆ ಅದೇ ಮಾತುಗಳು ಕೇಳಿಬಂದಿವೆ. ಗ್ರಾಮೀಣ ಭಾಗದಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುವ ಹಾಗೂ ಏಕೋಪಾಧ್ಯಾಯ ಇರುವ ಒಟ್ಟು 3450 ಶಾಲೆಗಳನ್ನು ಸಮೀಪದ ಶಾಲೆಗಳಿಗೆ ವಿಲೀನಗೊಳಿಸಲು ಮುಂದಾಗಿದೆ.

ಇಷ್ಟೇ ಅಲ್ಲದೆ ಶಾಲೆಗಳತ್ತ ಮಕ್ಕಳನ್ನು ಆಕರ್ಷಿಸಲು 101 ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಈ ಶೈಕ್ಷಣಿಕ ವರ್ಷದಿಂದಲೇ ಎಲ್‌ಕೆಜಿ-ಯುಕೆಜಿ ಆರಂಭಿಸಲು ನಿರ್ಧರಿಸಿದೆ ಈ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್‌. ಮಹೇಶ್‌ ಈ ವಿಷಯ ತಿಳಿಸಿದ್ದಾರೆ.

ರಾಜ್ಯದ 3372 ಪ್ರಾಥಮಿಕ ಹಾಗೂ 78 ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಒಂದೇ ಶಿಕ್ಷಕರಿದ್ದಾರೆ. ಸುಮಾರು ಶೇ.7.89ರಷ್ಟು ಅಂದರೆ ಸುಮಾರು 30 ಸಾವಿರಕ್ಕೂ ಅಧಿಕ ಮಕ್ಕಳನ್ನು ಸಮೀಪದ ಶಾಲೆಗಳಿಗೆ ಸ್ಥಳಾಂತರಿಸಲಾಗುತ್ತದೆ.

ಈ ರೀತಿ ವಿಲೀನಗೊಳಿಸುವ ಶಾಲೆಗಳಿಗೆ ಹಳ್ಳಿಗಳಿಂದ ತೆರಳುವ ಮಕ್ಕಳಿಗೆ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ 700ರೂ. ಪ್ರಯಾಣ ಮೊತ್ತ ಒದಗಿಸಲು ಅವಕಾಶವಿದೆ. ಈ ಬಗ್ಗೆಯೂ ಪರಿಶೀಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

 13 ಜಿಲ್ಲೆಗಳಲ್ಲಿ 101 ಪೂರ್ವ ಪ್ರಾಥಮಿಕ ಶಾಲೆ

13 ಜಿಲ್ಲೆಗಳಲ್ಲಿ 101 ಪೂರ್ವ ಪ್ರಾಥಮಿಕ ಶಾಲೆ

ರಾಜ್ಯದ ಒಟ್ಟು 13 ಜಿಲ್ಲೆಗಳಲ್ಲಿ ಈ ವರ್ಷದಿಂದಲೇ ಪ್ರಾಯೋಗಿಕವಾಗಿ 101 ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವ ಮೂಲಕ ಎಲ್‌ಕೆಜಿ-ಯುಕೆಜಿ ತರಗತಿ ಆರಂಭಿಸಲಾಗುತ್ತದೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಪಠ್ಯಕ್ರಮ ಸಿದ್ಧಪಡಿಸಿದ್ದು, ಒಬ್ಬೊಬ್ಬ ಶಕ್ಷಕರನ್ನು ಇಲಾಖೆಯಿಂದಲೇ ಒದಗಿಸಲಾಗುತ್ತದೆ.

 ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ಕುರಿತು ಸಿಎಂ ಜೊತೆಗೆ ಚರ್ಚೆ

ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ಕುರಿತು ಸಿಎಂ ಜೊತೆಗೆ ಚರ್ಚೆ

ಪದವಿ ಹಂತದವರೆಗೆ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಬಗ್ಗೆ ಸಿಎಂ ಜತೆ ಚರ್ಚಿಸಲಾಗುವುದು. ಕೆಎಎಸ್ ಹಾಗೂ ಐಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಟಾಪರ್‌ಗಳಾಗುವಂತಹ ಸಾಮರ್ಥ್ಯವಿರುವ ಹೆಣ್ಣುಮಕ್ಕಳಿಗೆ ಎಸ್‌ಎಸ್‌ಎಲ್‌ಸಿ ನಂತರ ಯಾಕೆ ಶಾಲೆ ತ್ಯಜಿಸುತ್ತಾರೆ ಎನ್ನುವ ಕುರಿತು ಮಾತುಕತೆ ನಡೆಸಲಾಗುತ್ತದೆ.

 ಯಾವುದೇ ಶಾಲೆಯನ್ನು ಮುಚ್ಚುವುದಿಲ್ಲ

ಯಾವುದೇ ಶಾಲೆಯನ್ನು ಮುಚ್ಚುವುದಿಲ್ಲ

ಎಲ್‌ಪಿಎಸ್‌, ಎಚ್‌ಪಿಎಸ್ ಸೇರಿದಂತೆ ಏಕ ಶಿಕ್ಷಕ ಶಾಲೆಗಳಲ್ಲಿ 1ರಿಂದ 7 ನೇ ತರಗತಿವರೆಗೆ ಒಂದೊಂದು ತರಗತಿಯಲ್ಲಿ 8-10 ಮಕ್ಕಳಿದ್ದಾರೆ. ಇಂತಹ ಸನ್ನಿವೇಶದಲ್ಲಿ ಒಬ್ಬ ಶಿಕ್ಷಕ ಎಲ್ಲಾ ತರಗತಿಗಳ ಮಕ್ಕಳನ್ನು ನಿರ್ವಹಿಸುವುದು ಕಷ್ಟ. ಇಂತಹ ಶಾಲೆಗಳನ್ನು ಸಮೀಪದಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳಿರುವ ಶಾಲೆಗಳ ಜತೆ ವಿಲೀನಗೊಳಿಸಲಾಗುತ್ತದೆ. ಶಾಲೆಗಳನ್ನು ಮುಚ್ಚುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

 ಕರ್ನಾಟಕದಲ್ಲಿ 176 ಪಬ್ಲಿಕ್ ಶಾಲೆ ಆರಂಭ

ಕರ್ನಾಟಕದಲ್ಲಿ 176 ಪಬ್ಲಿಕ್ ಶಾಲೆ ಆರಂಭ

ಖಾಸಗಿ ಶಾಲೆಗಳಿಗೆ ಸ್ಪರ್ಧೆ ನೀಡುವ ಉದ್ದೇಶದಿಂದ ಅಗತ್ಯ ಮೂಲಸೌಕರ್ಯಗಳನ್ನು ಒಳಗೊಂಡ 176 ಪಬ್ಲಿಕ್ ಶಾಲೆಗಳನ್ನು ಸರ್ಕಾರ ಆರಂಭಿಸಿದೆ. 1ರಿಂದ 12ನೇ ತರಗತಿಗಳನ್ನು ಒಂದೇ ಕಡೆ ನಡೆಸಲಾಗುತ್ತದೆ.

 10 ಸಾವಿರ ಶಿಕ್ಷಕರ ನೇಮಕಕ್ಕೆ ಆದೇಶ

10 ಸಾವಿರ ಶಿಕ್ಷಕರ ನೇಮಕಕ್ಕೆ ಆದೇಶ

10 ಸಾವಿರ ಶಿಕ್ಷಕರ ನೇಮಕಾತಿಗೆ ಶೀಘ್ರ ಆದೇಶ ಪತ್ರ ನೀಡಲಾಗುತ್ತದೆ. ಪ್ರಸ್ತುತ ಇಲಾಖೆಯಲ್ಲಿ 22 ಸಾವಿರ ಶಿಕ್ಷಕರ ಕೊರತೆಯಿದ್ದು. ಪ್ರತಿ ವರ್ಷ 4 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಮುಂದಿನ ಎರಡು ವರ್ಷಗಳಲ್ಲಿ ಭರ್ತಿ ಮಾಡಲಿರುವ 8ಸಾವಿರ ಶಿಕ್ಷಕರ ಹುದ್ದೆಗಳನ್ನು ಏಕಕಾಲದಲ್ಲಿ ಭರ್ತಿ ಮಾಡಲು ಸರ್ಕಾರದ ಅನುಮತಿ ಕೋರಲಾಗುವುದು ಎಂದು ಸಚಿವ ಮಹೇಶ್‌ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+