ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ತಂತ್ರಜ್ಞಾನಗಳ ಬಗ್ಗೆ 10 ಸಾವಿರ ರೈತರಿಗೆ ತರಬೇತಿ: ಸಚಿವ ಕೃಷ್ಣಬೈರೇಗೌಡ

By Mahesh
|
Google Oneindia Kannada News

ಬೆಂಗಳೂರು, ಜುಲೈ 14: ಕೃಷಿ ತಂತ್ರಜ್ಞಾನದ ಬಗ್ಗೆ ಪ್ರಸಕ್ತ ವರ್ಷ 10,300 ರೈತರಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ಅವರು ಸದನದಲ್ಲಿ ತಿಳಿಸಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಸದಸ್ಯ ಬಸನಗೌಡ ಆರ್‌. ಪಾಟೀಲ್‌ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಕೃಷಿ ಸಚಿವ ಕೃಷ್ಣ ಬೈರೇಗೌಡ ಉತ್ತರಿಸಿದರು.

Over 10, 000 farmers to get Agriculture Technology training : Krishna Byre Gowda

ನೂತನ ಕೃಷಿ ತಂತ್ರಜ್ಞಾನಗಳ ಬಗ್ಗೆ ಕೃಷಿ ಇಲಾಖೆಯಿಂದ ತರಬೇತಿ, ಪ್ರವಾಸ, ಕೃಷಿ ಅಭಿಯಾನ, ಪ್ರಾತ್ಯಕ್ಷಿಕೆಗಳು, ಕೃಷಿ ಮೇಳ ಮುಖಾಂತರ ರೈತರಿಗೆ ಮಾಹಿತಿ ತಲುಪಿಸಲಾಗುತ್ತದೆ. ಭೂ ಸಮೃದ್ಧಿ ಯೋಜನೆಯಡಿ ಕಳೆದ ಮೂರು ವರ್ಷ ಗಳಲ್ಲಿ 7,441 ರೈತರಿಗೆ ತರಬೇತಿ ನೀಡಲಾಗಿದೆ. ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳಿಂದ ಈ ವರ್ಷ 12,810 ರೈತ/ರೈತ ಮಹಿಳೆಯರಿಗೆ ತರಬೇತಿ ನೀಡಲಾಗುವುದು ಎಂದು ಹೇಳಿದ್ದಾರೆ.

ಕೃಷಿ ಯಂತ್ರೋಪಕರಣಗಳಿಗೆ 1,66,922 ಹಾಗೂ ಟಾರ್ಪಲಿನ್ಸ್‌ಗಳಿಗೆ 3,73,986 ಮತ್ತು ಕೃಷಿ ಘಟಕಗಳಿಗೆ 4,052 ರೈತರಿಂದ ಅರ್ಜಿ ಸಲ್ಲಿಕೆ ಯಾಗಿವೆ. ಅನುದಾನ ಲಭ್ಯತೆ ಆಧರಿಸಿ ಉಪಕರಣಗಳನ್ನು ಪೂರೈಕೆ ಮಾಡಲಾಗುವುದು ಎಂದಿದ್ದಾರೆ.

ಕೃಷಿ ಯಂತ್ರೋಪಕರಣಗಳ ಪೂರೈಕೆಗಾಗಿ 2015-16ನೇ ಸಾಲಿನಲ್ಲಿ 359.60 ರು ಕೋಟಿ ನಿಗದಿ ಮಾಡಲಾಗಿತ್ತು. ಪ್ರಸಕ್ತ ವರ್ಷ ಅದನ್ನು 432.43 ಕೋಟಿ ರು ಗೆ ಹೆಚ್ಚಿಸಲಾಗಿದೆ ಎಂದು ಅವರು ವಿವರಿಸಿದರು.

English summary
Over 10, 000 farmers in Karnataka to get Agriculture Technology training soon said Agriculure minister Krishna Byre Gowda during the assembly session
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X