ಸಿದ್ದರಾಮಯ್ಯ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ: ಬಿಎಸ್ ವೈ

Posted By: ಕಲಬುರಗಿ ಪ್ರತಿನಿಧಿ
Subscribe to Oneindia Kannada

ಕಲಬುರಗಿ, ಡಿಸೆಂಬರ್ 04 : ಸಿದ್ದರಾಮಯ್ಯ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಸಂಸದ ಪ್ರತಾಪ್ ಸಿಂಹ ಅವರನ್ನು ಬಂಧಿಸಿದ್ದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಪ್ರತಾಪ್ ಸಿಂಹ ವರ್ತನೆ ಬಗ್ಗೆ ಸಿದ್ದರಾಮಯ್ಯ ನುಡಿಮುತ್ತುಗಳು!

ಪರಿವರ್ತನಾಯಾತ್ರೆಯ 24ನೆಯ ದಿನವಾದ ಸೋಮವಾರ ಕಲಬುರಗಿ ಕಮಲಾಪುರದಲ್ಲಿ ಸಮಾವೇಶದಲ್ಲಿ ಮಾತನಾಡಿದ ಅವರು, ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಯನ್ನು ಸಿದ್ದರಾಮಯ್ಯನವರ ಸರ್ಕಾರ ಕಡೆಗಣಿಸಿದೆ. ಇಂತಹ ರೈತವಿರೋಧಿ ಸರ್ಕಾರವನ್ನು ಕಿತ್ತೊಗೆಯಲು ಜನರು ಕಾತುರರಾಗಿದ್ದಾರೆ ಎಂದು ವಾಕ್ ಪ್ರಹಾರ ನಡೆಸಿದರು.

Yeddyurappa blames MP Pratap simha arrest is political vendetta

ನವಕರ್ನಾಟಕ ಬಿಜೆಪಿ ಪರಿವರ್ತನಾ ಯಾತ್ರೆ ಸಮಾವೇಶ ಉದ್ದೇಶಿಸಿ ಬಿಜೆಪಿ ರಾಜ್ಯಾದ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿಕೆ ಯಾತ್ರಗೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಶೀರ್ವದಿಸಿದ್ದಾರೆ ಹೋದಕಡೆಯಲ್ಲೆಲ್ಲ ಯಾತ್ರೆಗೆ ಅದ್ಭುತ ಬೆಂಬಲ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಮೂಕ್ತ ಕರ್ನಾಟಕ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಬಜೆಟ್ ಲೆಕ್ಕ ಲಕ್ಷ ಕೋಟಿ ಮೀರುತ್ತಿದೆ, ನಮ್ಮ ಕಾಲದಲ್ಲಿ 60/70 ಸಾವಿರ ಕೋಟಿ ಬಜೆಟ್ ಮಂಡನೆ ಮಾಡುತ್ತಿದ್ದೆವು. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಸ್ಪರ್ಧೆ ವಿಚಾರ ಆ ಸ್ಥಾನಕ್ಕೆ ಯಾರೇ ಸ್ಪರ್ಧಿಸಿದರು ಏನು ಬದಲಾವಣೆಯಾಗಲ್ಲ ನನ್ನ ಕಂಡರೆ ಮೋದಿಗೆ ಭಯ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ ಮೋದಿ ಮುಂದೆ ಸಿದ್ದರಾಮಯ್ಯ ಬಚ್ಚಾ, ನಾಚಿಕೆಯಾಗಬೇಕು ನಿಮಗೆ ಎಂದು ಹೇಳಿದರು.

ಪ್ರತಾಪ್ ಸಿಂಹ ಬಂಧನ ವಿರೋಧಿಸಿ ಮೈಸೂರಿನಲ್ಲಿ ಬಿಜೆಪಿ ಪ್ರತಿಭಟನೆ

ಯುಪಿ ಯಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಉದಾಹರಣೆ 2018 ರ ಚುನಾವಣೆಯಲ್ಲಿ ಅಮಿತ್ ಶಾ ತಿಂಗಳು ಕಾಲ ಬೆಂಗಳೂರಲ್ಲಿ ಇರಲಿದ್ದಾರೆ ಸಿದ್ದರಾಮಾಯ್ಯ & ಟೀಂಗೆ ಈಗಾಗಲೇ ನಡುಕ ಶುರುವಾಗಿದೆ ಎಂದರು. ಮುಖಂಡರುಗಳಾದ ಶ್ರೀರಾಮುಲು, ಗೋವಿಂದ್, ಕಾರಜೋಳ, ಅರವಿಂದ್ ಲಿಂಬಾವಳಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP state president BS Yeddyurappa alleged that Mysuru MP Pratap simha arrest was political vendetta by chief minister Siddaramaiah.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ