ಕಲಬುರಗಿ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳಾ ರೋಗಿ ಮೇಲೆ ಅತ್ಯಾಚಾರ, ಆರೋಪಿ ಬಂಧನ
ಗುಲ್ಬರ್ಗ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಯು 750 ಹಾಸಿಗೆಗಳನ್ನು ಹೊಂದಿದೆ. ಇಲ್ಲಿ ಭದ್ರತಾ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದೆ.
ಕಲಬುರಗಿ, ಮಾರ್ಚ್ 19: ರಾಜ್ಯದಲ್ಲಿ ಮಹಿಳೆಯರ ಮೇಲೆ ಹಲ್ಲೆ, ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಲೇ ಇವೆ. ಕಳೆದ ತಿಂಗಳು ರಾಜ್ಯ ರಾಜಧಾನಿ ದೆಹಲಿಯಲ್ಲಿ ಮೂವರು ಮಹಿಳೆಯರನ್ನು ಹತ್ಯೆ ಮಾಡಲಾಗಿದೆ. ಈ ಘಟನೆಗಳ ಬೆನ್ನಲ್ಲೆ ಕಲಬುರಗಿಯಲ್ಲಿಯೂ ಅಮಾನವೀಯ ಘಟನೆ ವರದಿಯಾಗಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳಾ ರೋಗಿಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಕಲಬುರಗಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಘಟನೆಯ ನಂತರ, ರೋಗಿಯ ಸಂಬಂಧಿಕರು ಆರೋಪಿಯನ್ನು ಹಿಡಿದು ಭದ್ರತಾ ಸಿಬ್ಬಂದಿಗೆ ತಿಳಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಗುಲ್ಬರ್ಗ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ (ಜಿಮ್ಸ್) ಈ ಘಟನೆ ನಡೆದಿದ್ದು, ಅದೇ ರಾತ್ರಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮತ್ತು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. "ರೋಗಿಯು ಕಳೆದ ಆರು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರೋಗಿಯ ಮಾನಸಿಕ ಸ್ಥಿತಿ ಸರಿಯಿಲ್ಲ. ಘಟನೆ ಸಂಭವಿಸಿದಾಗ, ಇಬ್ಬರು ಭದ್ರತಾ ಸಿಬ್ಬಂದಿ ತಮ್ಮ ಪಾಳಿ ಬದಲಾಯಿಸುತ್ತಿದ್ದರು ಎಂದು ಜಿಮ್ಸ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಂಬರಯ್ಯ ರುದ್ರವಾಡಿ ಹೇಳಿದ್ದಾರೆ.
"ರೋಗಿಗೆ ದೈನಂದಿನ ನಿತ್ಯಕರ್ಮಗಳನ್ನು ( ಮೂತ್ರ ವಿಸರ್ಜನೆ ಹಾಗೂ ಮಲ ವಿಸರ್ಜನೆ) ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಅವರಿಗೆ ಇದರಿಂದ ಮುಜುಗರವಾಗುತ್ತಿದ್ದು, ಬೇರೆ ವಾರ್ಡ್‌ನಲ್ಲಿ ಇರುತ್ತಾರೆ. ಒಬ್ಬರೇ ವಾರ್ಡ್‌ನಲ್ಲಿದ್ದ ಕಾರಣ ಆರೋಪಿ ದುಷ್ಕೃತ್ಯ ಎಸಗಿದ್ದಾನೆ. ಭದ್ರತಾ ಸಿಬ್ಬಂದಿ ತಮ್ಮ ಪಾಳಿ ಬದಲಾಯಿಸುತ್ತಿದ್ದ ಕಾರಣ ಅವರಿಗೆ ವಾರ್ಡ್‌ಗೆ ನುಸುಳಲು ಸುಲಭವಾಗಿದೆ" ಎಂದು ಶಸ್ತ್ರಚಿಕಿತ್ಸಕ ಡಾ.ಅಂಬರಯ್ಯ ರುದ್ರವಾಡಿ ಮಾಹಿತಿ ನೀಡಿದ್ದಾರೆ.

ಗುಲ್ಬರ್ಗ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಯು 750 ಹಾಸಿಗೆಗಳನ್ನು ಹೊಂದಿದೆ. ಇಲ್ಲಿ ಭದ್ರತಾ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದ್ದೇವೆ. ಈ ಹಿಂದೆ ಆಸ್ಪತ್ರೆಯಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ಭದ್ರತಾ ಸಿಬ್ಬಂದಿ ಮೂರು ಪಾಳಿಯಲ್ಲಿ ಕೆಲಸ ಮಾಡುವುದರಿಂದ ರಾತ್ರಿ ಹೆಚ್ಚಿನ ಭದ್ರತೆಗೆ ಸಿಬ್ಬಂದಿಯನ್ನು ನೇಮಿಸಲು ನಾವು ಈಗಾಗಲೇ ಉನ್ನತ ಅಧಿಕಾರಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ ಎಂದು ಡಾ. ರುದ್ರವಾಡಿ ಹೇಳಿದ್ದಾರೆ.
ಘಟನೆಯ ನಂತರ, ರೋಗಿಯ ಸಂಬಂಧಿಕರು ಆರೋಪಿಯನ್ನು ಹಿಡಿದು ಭದ್ರತಾ ಸಿಬ್ಬಂದಿಗೆ ತಿಳಿಸಿದಾಗ ಆರೋಪಿಯನ್ನು ಬಂಧಿಸಲಾಗಿದೆ. ಬ್ರಹ್ಮಪುತ್ರ ಪೊಲೀಸ್ ಠಾಣೆಯಲ್ಲಿ ಜಿಐಎಂಎಸ್ ಸಿಬ್ಬಂದಿ ನರ್ಸ್ ದೂರಿನ ಆಧಾರದ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆ ನಡೆದ ವೇಳೆ ಕರ್ತವ್ಯದಲ್ಲಿದ್ದ ಕರ್ತವ್ಯನಿರತ ವೈದ್ಯ ಮತ್ತು ಇತರ ಸಿಬ್ಬಂದಿಯನ್ನು ಪತ್ತೆ ಮಾಡುತ್ತೇವೆ. ಭದ್ರತಾ ಲೋಪವನ್ನು ಪರಿಶೀಲಿಸುತ್ತಿದ್ದೇವೆ. ಈ ಬಗ್ಗೆ ಶೀಘ್ರದಲ್ಲೇ ಉನ್ನತ ವೈದ್ಯಕೀಯ ಶಿಕ್ಷಣ ಅಧಿಕಾರಿಗಳಿಗೆ ವರದಿಯನ್ನು ಕಳುಹಿಸುತ್ತೇವೆ ಎಂದು ಜಿಮ್ಸ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಂಬರಯ್ಯ ರುದ್ರವಾಡಿ ಹೇಳಿದ್ದಾರೆ.
ಘಟನೆ ಬಗ್ಗೆ ಜಿಮ್ಸ್ ನಿರ್ದೇಶಕಿ ಹಾಗೂ ಡೀನ್ ಡಾ.ಕವಿತಾ ಪಾಟೀಲ್ ಮಾತನಾಡಿ, ''ಆಸ್ಪತ್ರೆ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಜಿಲ್ಲಾ ಆಸ್ಪತ್ರೆ ಅಧಿಕಾರಿಗಳು ಅವರ ಅಗತ್ಯಗಳಿಗೆ ನಮ್ಮಿಂದ ಅನುಮೋದನೆ ಪಡೆಯಬೇಕು. ಜಿಲ್ಲಾ ಕೇಂದ್ರದಲ್ಲಿರುವ ಏಕೈಕ ಆಸ್ಪತ್ರೆ ಇದಾಗಿದೆ. ಜಿಲ್ಲೆಯ ಬಡ ರೋಗಿಗಳು ಇದನ್ನೇ ಅವಲಂಬಿಸಿರುವುದರಿಂದ ನಾವು ಆಸ್ಪತ್ರೆಯ ಅವಶ್ಯಕತೆಗಳಿಗೆ ತಕ್ಷಣ ಸ್ಪಂದಿಸುತ್ತೇವೆ" ಎಂದು ಮಾಹಿತಿ ನೀಡಿದ್ದಾರೆ.












Click it and Unblock the Notifications