ಕಲಬುರಗಿ: ಈಶಾನ್ಯ ಸಾರಿಗೆ ಬಸ್ ನಲ್ಲಿ ಮಗುವಿನ ಜನ್ಮ ನೀಡಿದ ಮಹಿಳೆ

Subscribe to Oneindia Kannada

ಕಲಬುರಗಿ, ಸೆಪ್ಟೆಂಬರ್ 17: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್ಇಕೆಆರ್ಟಿಸಿ) ಬಸ್ಸಿನಲ್ಲೇ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ.

'ಹೈದರಾಬಾದ್‌-ಕರ್ನಾಟಕ ಭಾಗದ ಅಭಿವೃದ್ಧಿಗೆ ಸರ್ಕಾರ ಬದ್ಧ'

ಚಿಂಚೋಳಿಯ ಚಟ್ರಸಾಲ್ ಗ್ರಾಮಕ್ಕೆ ಸೇರಿದ 26 ವರ್ಷದ ಮಹಿಳೆ ಜ್ಯೋತಿ ತಮ್ಮ ಗಂಡ ಮತ್ತು ಅತ್ತೆಯ ಜತೆ ತಂಡೂರಿಗೆ ಪ್ರಯಾಣ ಮಾಡುತ್ತಿದ್ದರು. ಬಸ್ ಸೇಡಂ ಹೊರಭಾಗದಲ್ಲಿ ಚಿಂಚೋಳಿ ಕ್ರಾಸ್ ದಾಟಿ ಮುಂದೆ ಹೋಗಿತ್ತು ಅಷ್ಟೆ. ಈ ವೇಳೆ ಜ್ಯೋತಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ.

Woman delivers baby in NEKRTC bus

ತಕ್ಷಣ ಚಾಲಕ ಶಿವರಾಜ್ ಬಸ್ಸು ನಿಲ್ಲಿಸಿ ಮಹಿಳೆಯರನ್ನು ಹೊರತುಪಡಿಸಿ ಉಳಿದವರನ್ನು ಬಸ್ಸಿನಿಂದ ಇಳಿಯಲು ಹೇಳಿದ್ದಾರೆ. ನಂತರ ಬಸ್ಸಿನಲ್ಲಿದ್ದ ಮಹಿಳೆಯರ ಸಹಾಯದಿಂದ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ನಂತರ ಮಗುವನ್ನು ಮತ್ತು ತಾಯಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Woman delivered a baby on the North East Karnataka Road Transport Corporation (NEKRTC) bus at Kalaburagi.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ