ನನ್ನ ಮಗಳು ಫೇಲ್ ಆಗಲು ರಾಜಕೀಯ ಆರೋಪಗಳೇ ಕಾರಣ: ಉಮೇಶ್ ಜಾಧವ್

Recommended Video

      ತಮ್ಮ ಮಗಳು ಫೇಲ್ ಆಗಿದ್ದಕ್ಕೆ ಪರೋಕ್ಷವಾಗಿ ಖರ್ಗೆ ಕುಟುಂಬದ ಮೇಲೆ ಆರೋಪ ಹೊರಿಸಿದ ಉಮೇಶ್ ಜಾಧವ್ | Oneindia Kannada

      ಚಿಂಚೋಳಿ, ಮೇ 8: ನನ್ನ ಮಗಳು ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಲು ರಾಜಕೀಯ ಆರೋಪಗಳೇ ಕಾರಣ ಎಂದು ಕಲಬುರಗಿಯ ಲೋಕಸಭಾ ಅಭ್ಯರ್ಥಿ ಉಮೇಶ್ ಜಾಧವ್ ಆರೋಪಿಸಿದ್ದಾರೆ.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗಳು ದ್ವಿತೀಯ ಪಿಯುಸಿಯಲ್ಲಿ ಫೇಲ್ ಆಗಲು ನಮ್ಮ ಮೇಲಿದ್ದ ರಾಜಕೀಯ ಆರೋಪಗಳೇ ಕಾರಣ, ಮಗಳು ಮಾನಸಿಕವಾಗಿ ಕುಗ್ಗಿದ್ದಳು.

      ಖರ್ಗೆ ಕುಟುಂಬದವರು ನಮ್ಮ ಮೇಲೆ ನಡೆಸಿದ ದಬ್ಬಾಳಿಕೆ, ಇತರೆ ಆರೋಪಗಳಿಂದಾಗಿ ಆಕೆಗೆ ಬಹಳ ನೋವಾಗಿತ್ತು. ಪರೀಕ್ಷೆ ಬರೆಯುವ ಮನಸ್ಥಿತಿಯಲ್ಲಿಯೂ ಆಕೆ ಇರಲಿಲ್ಲ, ಖಿನ್ನತೆಗೆ ಒಳಗಾಗಿದ್ದಳು. ಅವಳಿಗೆ ಕಡಿಮೆ ಅಂಕ ಬರಲು ರಾಜಕೀಯವೇ ಕಾರಣ, ನಾನು ಕಾಂಗ್ರೆಸ್‌ನ್ನು ಬಿಟ್ಟು ಬಿಜೆಪಿಗೆ ಸೇರಲು ಕೂಡ ಇಂಥದ್ದೇ ಕಾರಣಗಳಿದ್ದವು ಎಂದು ಹೇಳಿದರು.

      Umesh jadhav blames Congress for his daughter fails in PUC exams

      ಉಮೇಶ್ ಜಾಧವ್ ವಿರುದ್ಧ ತಿರುಗಿಬಿದ್ದಿರುವ ಸಚಿವ ಪ್ರಿಯಾಂಕ್ ಖರ್ಗೆ, ಉಮೇಶ್ ಕಾಂಗ್ರೆಸ್ ಬಿಡಲು ಕಾರಣ ಏನೆಂಬುದು ಅವರಿಗೆ ತಿಳಿಯುತ್ತಿಲ್ಲ ಹಾಗಾಗಿ ಏನೇನೋ ಮಾತನಾಡುತ್ತಾರೆ. ಅವರು ವಿವೇಕವಿಲ್ಲದವರು ಆದರೆ ನಮಗೆ ವಿವೇಕ ಇದೆ ಎಂದರು.

      ಉಮೇಶ್ ಅವರು ನಮ್ಮ ಬಗ್ಗೆ ಮಾತನಾಡಿದಾಗ ನಮ್ಮ ತಾಯಿ, ಮಕ್ಕಳು ಅವರ ಬಗ್ಗೆ ಕೇಳುತ್ತಾರೆ ಆದರೆ ನಾವು ಯಾವತ್ತೂ ಅವರ ಬಗ್ಗೆ ಮನೆಯಲ್ಲಿ ಮಾತನಾಡಿಲ್ಲ, ರವಿ ಕುಮಾರ್ ಹಾಗೂ ಉಮೇಶ್ ಜಾಧವ್ ಕೆಲಸಕ್ಕೆ ಬಾರದವರು ಎಂದು ತೀಕ್ಷ್ಣವಾಗಿ ನುಡಿದರು.

      ಎಸ್‌ಎಸ್‌ಎಲ್‌ಸಿಯಲ್ಲಿ ಹಾಸನ ನಂಬರ್ ಒನ್ ಸ್ಥಾನ ಪಡೆದಾಗ ಸಚಿವ ಎಚ್‌ಡಿ ರೇವಣ್ಣ ಹಾಸನ ನಂಬರ್ ಒನ್ ಸ್ಥಾನ ಗಳಿಸಲು ತನ್ನ ಪತ್ನಿ ಭವಾನಿಯೇ ಕಾರಣ ಎಂಬ ವಿಚಿತ್ರ ಹೇಳಿಕೆಯನ್ನು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+