ಕಲಬುರಗಿ : ಫೈನಾನ್ಸ್‌ ಮೇಲೆ ದಾಳಿ, 50 ಲಕ್ಷ ಅಕ್ರಮ ಹಣ ವಶ

Posted By: Gururaj
Subscribe to Oneindia Kannada

ಕಲಬುರಗಿ, ನವೆಂಬರ್ 8 : ಫೈನಾನ್ಸ್ ಮೇಲೆ ದಾಳಿ ನಡೆಸಿದ ಪೊಲೀಸರು 50 ಲಕ್ಷ ರೂ. ದಾಖಲೆ ಇಲ್ಲದ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೀಟರ್ ಬಡ್ಡಿ ದಂಧೆ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಈಶಾನ್ಯ ವಲಯ ಐಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಕಲಬುರಗಿ ನಗರದ ಫೈನಾನ್ಸ್ ಗಳ ಮೇಲೆ ದಾಳಿ ಮಾಡಿದ್ದಾರೆ. 50 ಲಕ್ಷ ರೂ. ಅಕ್ರಮ ಹಣವನ್ನು ವಶಕ್ಕೆ ಪಡೆದುಕೊಂಡಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

Rs 50 lakh unaccounted money seized in Kalaburagi

ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಕರಣ್ ಗಾಯಕ್‌ವಾಡ್, ಮೀನಾಕ್ಷಿ ಕಾಂತ, ನಾಗರಾಜ್ ಕಲಶೆಟ್ಟಿ, ಶ್ರೀಕಾಂತ ಬಂಧಿತ ಆರೋಪಿಗಳು. ಕಲಬುರಗಿಯ ಆರ್.ಜೆ. ಬ್ರಹ್ಮಪೂರ್ ಹಾಗೂ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Rs 50 lakh unaccounted money seized in Kalaburagi

ಅಲೋಕ್ ಕುಮಾರ್ ಎಚ್ಚರಿಕೆ : 'ಯಾರಾದರೂ ಮೀಟರ್ ಬಡ್ಡಿ ವ್ಯವಹಾರ ಮಾಡಿದರೆ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳಲಾಗುವುದು' ಎಂದು ಈಶಾನ್ಯ ವಲಯದ ಐಜಿಪಿ ಅಲೋಕ್ ಕುಮಾರ್ ಎಚ್ಚರಿಕೆ ನೀಡಿದರು.

ಕಲಬುರಗಿಯಲ್ಲಿ ಮಾತನಾಡಿದ ಅವರು, 'ಕಲಬುರಗಿ ನಗರದಲ್ಲಿ ಈಗಾಗಲೇ ಮೀಟರ್ ಬಡ್ಡಿ ಮಾಡುವ 4 ಜನರನ್ನು ಬಂಧಿಸಲಾಗಿದೆ. ಆಕ್ರಮವಾಗಿ ಹಣ ಸಂಗ್ರಹದ ಮೇರೆಗೆ ದಾಳಿ ಮಾಡಿ. ಬಂಧಿಸಲಾಗಿದೆ. ನಗರದಲ್ಲಿ ಮೀಟರ್ ಬಡ್ಡಿ ವ್ಯವಹಾರ ಮಾಡುವರು ಯಾರಾದರೂ ಇದ್ದರೆ ಜನರು ಹತ್ತಿರದ ಪೋಲಿಸ್ ಠಾಣೆಗೆ ದೂರು ಕೊಡಬಹುದು' ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kalaburagi police on Wednesday seized unaccounted money worth 50 lakh after conducting raids on private money lenders in the city.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ