ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿ ಅಕ್ಕಪಕ್ಕ ಇರುವವರೇ ಜೈಲಿಗೆ ಹೋಗಿ ಬಂದವರು: ಶರಣ ಪ್ರಕಾಶ್

By ಕಲಬುರಗಿ ಪ್ರತಿನಿಧಿ
|
Google Oneindia Kannada News

ಕಲಬುರಗಿ, ಫೆಬ್ರವರಿ 10 : ಫೆಬ್ರವರಿ 12 ರಂದು ಮಧ್ಯಾಹ್ನ 3.30 ಕ್ಕೆ ಜೇವರ್ಗಿಯಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪಾಲ್ಗೊಳ್ಳಲಿದ್ದಾರೆ ಬಳಿಕ ಕಲಬುರಗಿಯ ಎನ್ ವಿ ಕಾಲೇಜು ಮೈದಾನದಲ್ಲಿ ನಡೆಯುವ ಸಮಾವೇಶ ಹಾಗೂ ರೋಡ್ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ತಿಳಿಸಿದ್ದಾರೆ.

13 ರಂದು ಬೆಳಗ್ಗೆ ದಿ ಖಮರ್‌ಉಲ್ ಇಸ್ಲಾಂ ನಿವಾಸಕ್ಕೆ ಭೇಟಿ ಐತಿಹಾಸಿಕ ಖ್ವಾಜಾ ಬಂದೇ ನವಾಜ್ ದರ್ಗಾ ಮತ್ತು ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನಂತರ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಎಚ್ ಕೆ ಸಿಸಿಐ ಸಭಾಂಗಣದಲ್ಲಿ ಉದ್ಯಮಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ರಾಜ್ಯ ಪ್ರವಾಸದ ವೇಳೆಯೂ ರಾಹುಲ್ ಗಾಂಧಿ ಟೆಂಪಲ್ ರನ್ರಾಜ್ಯ ಪ್ರವಾಸದ ವೇಳೆಯೂ ರಾಹುಲ್ ಗಾಂಧಿ ಟೆಂಪಲ್ ರನ್

ರಾಹುಲ್ ಗಾಂಧಿ ಜೊತೆ ,ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುವ ಸಾಧ್ಯತೆ ಕಡಿಮೆ ಇದೆ. ಪ್ರವಾಸದ ಸಂದರ್ಭದಲ್ಲಿ ರಾಹುಲ್ ಗಾಂಧಿಗೆ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಸಾಥ್ ನೀಡಲಿದ್ದಾರೆ. ರಾಜ್ಯ ಉಸ್ತುವಾರಿ ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ ಜತೆಯಾಗಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Rahul gandhi day out in Kalaburagi

ರಾಜ್ಯ ಸರ್ಕಾರ 10 % ಸರ್ಕಾರ ಪ್ರಧಾನಿ ಮೋದಿ ಹೇಳಿಕೆ ವಿಚಾರದ ಕುರಿತು ಮಾತನಾಡಿದ ಅವರು, ನರೇಂದ್ರ ಮೋದಿ ಈ ದೇಶದ ಓರ್ವ ಪ್ರಧಾನಿ ಅವರ ಘನತೆಗೆ ತಕ್ಕಂತೆ ಮಾತನಾಡುವುದನ್ನ ಕಲಿಯಲಿ ಬಿಜೆಪಿಯ ಬಹುತೇಕರು ಜೈಲಿಗೆ ಹೋಗಿಬಂದಿದ್ದಾರೆ.

ಅಕ್ಕಪಕ್ಕ ಭ್ರಷ್ಟರನ್ನ ಕೂಡಿಸಿಕೊಂಡು ರಾಜ್ಯದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅಮಿತ್ ಷಾ ಇವರಿಗೆ ಯಾವ ನೈತಿಕತೆ ಇದೆ ನಮ್ಮ ಸರ್ಕಾರದ ಬಗ್ಗೆ ಮಾತಾಡೋಕೆ? 10 % ಬಗ್ಗೆ ದಾಖಲೆಗಳು ಇದೆ ಎಂದು ಮೋದಿ ಹೇಳುತ್ತಾರೆ ಮೊದಲು ದಾಖಲೆಗಳು ಬಿಡುಗಡೆ ಮಾಡಲಿ ಎಂದು ಸವಾಲೆಸೆದರು.

English summary
Rahul Gandhi will address rally in Jevargi on February 12 and will visit Khwaja Bande Nawaz Dargah and Sharana Basaveshwar mutt on February 13. said district development minister Sharan prakash patil on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X