ಪ್ರಕಾಶ್ ರೈ ಕಾರು ಅಡ್ಡಗಟ್ಟಿದ ಮೋದಿ ಅಭಿಮಾನಿಗಳು

Recommended Video

      ಪ್ರಕಾಶ್ ರೈ ( ರಾಜ್ ) ಕಾರ್ ನ ಅಡ್ಡಗಟ್ಟಿದ ಮೋದಿ ಅಭಿಮಾನಿಗಳು | Oneindia Kannada

      ಕಲಬುರಗಿ, ಏಪ್ರಿಲ್ 13: ಬಲಪಂಥೀಯರ ವಿರುದ್ಧ ಸಮರ ಸಾರಿರುವ ನಟ ಪ್ರಕಾಶ್ ರೈ ಅವರು ನಿನ್ನೆ ಮೋದಿ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾದರು.

      ಅಂಬೇಡ್ಕರ್‌ ಜಯಂತಿ ಸರಣಿ ಕಾರ್ಯಕ್ರಮ ಉದ್ಘಾಟಿಸಲೆಂದು ನಿನ್ನೆ (ಏಪ್ರಿಲ್ 13) ಕಲಬುರಗಿಗೆ ಆಗಮಿಸಿದ್ದ ಪ್ರಕಾಶ್ ರೈ ಅವರ ಕಾರನ್ನು ಮೋದಿ ಅಭಿಮಾನಿಗಳು ಅಡ್ಡಗಟ್ಟಿ ಪ್ರತಿಭಟನೆ ಮಾಡಿದರು. ಕಾರಿಗೆ ಕೈ ಇಂದ ಗುದ್ದಿ, 'ಮೋದಿ, ಮೋದಿ' ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

      ಪ್ರಕಾಶ್ ರೈ ಹಾಗೂ ಇನ್ನೂ ಕೆಲವರು ತೆರಳುತ್ತಿದ್ದ ಕಾರನ್ನು ಅಡ್ಡಗಟ್ಟಿದ 10-15 ಜನರ ಗುಂಪು, ಮೋದಿ.. ಮೋದಿ ಘೋಷಣೆಯ ಜೊತೆಗೆ, 'ಭಾರತ ದೇಶ ಹಿಂದೂಗಳದ್ದು, ಕರ್ನಾಟಕ ಹಿಂದೂಗಳದ್ದು' ಎಂದು ಹಿಂದಿಯಲ್ಲಿ ಘೋಷಣೆಗಳನ್ನು ಕೂಗಿದರು.

      Prakash rai car attacked by Modi follwers

      ಪ್ರಕಾಶ್ ರೈ ಅವರು ಮೋದಿ ಹಾಗೂ ಬಿಜೆಪಿ ವಿರುದ್ಧ ಪ್ರಚಾರ ಮಾಡುತ್ತಿದ್ದು, ನರೇಂದ್ರ ಮೊದಿ ಅವರಿಗೆ ಜಸ್ಟ್ ಆಸ್ಕಿಂಗ್ (#justasking) ಮೂಲಕ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇತ್ತೀಚೆಗೆ ತಾನೇ ಬಿಜೆಪಿ ಪಕ್ಷವನ್ನು ಕ್ಯಾನ್ಸರ್‌ಗೆ ಹೋಲಿಸಿದ್ದ ಪ್ರಕಾಶ್ ರೈ, ಬಿಜೆಪಿಗೆ ಮತ ಹಾಕಬೇಡಿ ಎಂದಿದ್ದರು.

      ಪ್ರಕಾಶ್ ರೈ ಅವರ ಕಾರಿಗೆ ಮೋದಿ ಅಭಿಮಾನಿಗಳು ಮುತ್ತಿಗೆ ಹಾಕಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಗತಿಪರರು ಇದನ್ನು ವಿರೋಧಿಸಿದ್ದರೆ, ಮೋದಿ ಅಭಿಮಾನಿಗಳು ಪ್ರತಿಭಟನಾಕಾರರ ಕಾರ್ಯಕ್ಕೆ ಭೇಷ್ ಎಂದಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+