ಮೋದಿಗೆ ಮಲ್ಲಿಕಾರ್ಜುನ ಖರ್ಗೆಯೆಂದರೆ ಹೆದರಿಕೆ: ಜಯಮಾಲ
Recommended Video
ಕಲಬುರಗಿ, ಏಪ್ರಿಲ್ 21: ಕೆಲವರಿಗೆ ಬಾಯಿಚಪಲ ಮಾತನಾಡುತ್ತಾರೆ. ದೇವರು ನಾಲಿಗೆ ಕೊಟ್ಟಿದ್ದಾನೆ ಉದ್ದ ಚಾಚುತ್ತಾರೆ, ಬಾಯಿ ಕೊಟ್ಟಿದ್ದಾನೆ ಅಗಲ ಮಾಡಿ ಏನೇನೋ ಮಾತನಾಡುತ್ತಾರೆ. ಆ ಬಗ್ಗೆ ನಾನು ಏನು ಹೇಳುವುದಿಲ್ಲ. ಯಾಕೆಂದರೆ, ನನ್ನ ಹಣೆಬರಹ ಬರೆಯುವವರು ನೀವು ನನ್ನ ಪರವಾಗಿವಾಗಿದ್ದೀರಿ. ಸಾಮೂಹಿಕ ಬೆಂಬಲ ಘೋಷಿಸಿದ್ದೀರಿ ಹಾಗಾಗಿ ನಿಮಗೆ ನಾನು ಆಭಾರಿಯಾಗಿದ್ದೇನೆ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನಗರದ ಕೋಸಗಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಆರ್ಯ ಈಡಿಗ ಸಮದಾಯದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂವಿಧಾನದ ಅಡಿಯಲ್ಲಿ ಎಲ್ಲಾ ಹಿಂದುಳಿದ, ದಲಿತ ಹಾಗೂ ಇತರೆ ಎಲ್ಲ ವರ್ಗಗಳಿಗೆ ಮೀಸಲಾತಿ ಒದಗಿಸಿದೆ. ಸಂವಿಧಾನದ ಆಶಯಗಳಿಗೆ ಧಕ್ಕೆ ಬಂದರೆ ಎಲ್ಲ ಸೌಲಭ್ಯಗಳು ರದ್ದಾಗಲಿವೆ. ಈ ಬಗ್ಗೆ ಎಚ್ಚರವಹಿಸಿ, ಕಾಂಗ್ರೆಸ್ ಪಕ್ಷಕ್ಕೆ ಹಾಗೂ ನನಗೆ ಮತ ನೀಡುವ ಮೂಲಕ ಸಂವಿಧಾನವನ್ನು ರಕ್ಷಿಸಬೇಕು ಎಂದು ಮನವಿ ಮಾಡಿದರು.
ಸಚಿವೆ ಜಯಮಾಲ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಇಡೀ ದೇಶದಲ್ಲಿ ಯಾರಿಗಾದರೆ ಹೆದರಿದ್ದರೆ ಅದು ಖರ್ಗೆ ಅವರಿಗೆ ಮಾತ್ರ. ಖರ್ಗೆ ಅವರು ಸಂಸತ್ತಿನಲ್ಲಿ ಮಾತನಾಡಿ ಸರಕಾರದ ಸಾಧನೆಗಳ ಬಗ್ಗೆ ಪ್ರಶ್ನೆ ಕೇಳುತ್ತಿದ್ದರೆ, ಮೋದಿ ಉತ್ತರಿಸುವುದೇ ಇಲ್ಲ ಎಂದು ಟೀಕಿಸಿದರು.

ಬಂಜಾರ ಸಮುದಾಯಕ್ಕೆ ಖರ್ಗೆ ಅವರ ಕೊಡುಗೆ ಏನು ಎಂದು ಜಾಧವ್ ಪ್ರಶ್ನೆ ಮಾಡ್ತಾರೆ. ನೀವೇ ಅಧಿಕಾರದಲ್ಲಿ ಇದ್ದರಲ್ಲ ಜಾಧವ್ ಅವರು ಚಿಂಚೋಳಿಯಲ್ಲಿ ಅದೇ ಬಂಜಾರ ಸಮುದಾಯ ಮಹಿಳೆಯರು ಹೊಟ್ಟೆ ಪಾಡಿಗೆ ದೂರದ ಊರುಗಳಿಗೆ ವಲಸೆ ಹೋಗುತ್ತಿದ್ದರೆ ನೀವೇನು ಕ್ರಮ ಕೈಗೊಂಡಿರಿ ಎಂದು ಪ್ರಶ್ನಿಸಿದರು.
ಕಳೆದ ಮೂರು ದಶಕಗಳಿಂದ ಅಧಿಕಾರದಲ್ಲಿದ್ದರಲ್ಲ ಅವರು ಈಡಿಗ ಸಮುದಾಯ ಭವನ ನಿರ್ಮಾಣ ಮಾಡಿಲ್ಲವಲ್ಲ ಯಾಕೆ? ಖರ್ಗೆ ಅವರನ್ನು ಕೇಳಿದ್ದರೆ ಕೊಡುತ್ತಿರಲಿಲ್ಲವೇ? ಎಂದು ಮಾಲೀಕಯ್ಯ ಗುತ್ತೇದಾರ ಹೆಸರು ಹೇಳದೆ ಕೇಳಿದರು.

ವೇದಿಕೆಯ ಮೇಲೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಜಾದ್, ಕೆ.ಬಿ.ಶಾಣಪ ಶರಣಪ್ಪ ಮಟ್ಟೂರು, ಶರಣಯ್ಯ ಗಾರಂಪಳ್ಳಿ, ಜಗದೇವ ಗುತ್ತೇದಾರ ಸೇರಿದಂತೆ ಮತ್ತಿತರಿದ್ದರು.











Click it and Unblock the Notifications