ಕಲಬುರಗಿಯಲ್ಲಿ ಸತ್ತ ವ್ಯಕ್ತಿಯ ಮರ್ಮಾಂಗ ಹಿಡಿದು ಕಣ್ಣೀರಿಟ್ಟ ಮಾನಸಿಕ ಅಸ್ವಸ್ಥೆ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಕಲಬುರಗಿ, ಮೇ 18: ಇಲ್ಲಿನ ರೈಲು ನಿಲ್ದಾಣದಲ್ಲಿ ಬುಧವಾರ ನಡೆದ ಘಟನೆಯೊಂದು ಸ್ಥಳದಲ್ಲಿದ್ದವರಿಗೆ ವಿಚಿತ್ರ ಎನಿಸುವುದರ ಜತೆಗೆ ಮುಜುಗರ ಉಂಟು ಮಾಡಿತು. ಅಸಲಿಗೆ ಅಲ್ಲಿ ಆಗಿದ್ದೇನು ಗೊತ್ತಾ? ಮಾನಸಿಕ ಅಸ್ವಸ್ಥೆಯೊಬ್ಬಳು ಮೃತ ವ್ಯಕ್ತಿಯ ಮರ್ಮಾಂಗವನ್ನು ಹಿಡಿದು ರೋದಿಸುತ್ತಿದ್ದಳು. ಮೃತ ವ್ಯಕ್ತಿಗೂ ಈ ಮಾನಸಿಕ ಅಸ್ವಸ್ಥೆಗೂ ಏನು ಸಂಬಂಧ ಎಂಬುದು ಅಲ್ಲಿರುವ ಯಾರಿಗೂ ಗೊತ್ತಿರಲಿಲ್ಲ.

ಅಂದಹಾಗೆ, ಈ ರೀತಿ ವಿಚಿತ್ರವಾಗಿ ವರ್ತಿಸುತ್ತಾ ತನ್ನ ನೋವನ್ನು ಹೊರಹಾಕಿದ ಮಹಿಳೆಯ ಗುರುತು ಸಹ ಪತ್ತೆಯಾಗಿರಲಿಲ್ಲ. ಆಕೆ ಮಾತ್ರ ಶವದ ಪಕ್ಕ ಕುಳಿತು ಒಂದೇ ಸಮನೆ ಅಳುತ್ತಿದ್ದಳು. ಅಲ್ಲಿಂದ ಕಳುಹಿಸಿದರೂ ಕದಲಲಿಲ್ಲ. ಆದರೆ ಆ ನಂತರ ಗೊತ್ತಾಗಿದ್ದು ಏನೆಂದರೆ, ಆಕೆ ರೈಲು ನಿಲ್ದಾಣದಲ್ಲಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿರುವವಳು.

Kalaburagi

ಮೃತ ವ್ಯಕ್ತಿ ಹಾಗೂ ಆ ಮಹಿಳೆಯು ರೈಲು ನಿಲ್ದಾಣದ ಇರುಕು ಜಾಗಗಳಲ್ಲಿ ಒಟ್ಟಿಗೆ ಇರುತ್ತಿದ್ದರು ಎಂದು ಕೆಲವರು ಹೇಳಿದರು. ಆ ವ್ಯಕ್ತಿ ಮೃತಪಟ್ಟ ನಂತರ ಮತ್ತಷ್ಟು ಆಘಾತಕ್ಕೆ ಈಡಾಗಿದ್ದ ಈ ಮಹಿಳೆ ವರ್ತನೆ ನೋಡಿ, ಮಕ್ಕಳ ಸಹಾಯವಾಣಿಗೆ ಕರೆ ಮಾಡಿ, ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆಮೇಲೆ ಸ್ಥಳಾಕ್ಕೆ ಬಂದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮತ್ತಿತರರು ಆಕೆಯ ಮಕ್ಕಳನ್ನು ರಕ್ಷಿಸಿ, ಬಾಲಮಂದಿರಕ್ಕೆ ಒಪ್ಪಿಸಿದ್ದಾರೆ.

ಇನ್ನೂ ಕರುಣಾಜನಕ ಸನ್ನಿವೇಶ ಏನು ಗೊತ್ತಾ, ಮಕ್ಕಳ ಪರಿವೆಯೇ ಇಲ್ಲದ ಆ ಮಹಿಳೆಯು ವ್ಯಕ್ತಿಯ ಶವಪರೀಕ್ಷೆ ಸ್ಥಳಕ್ಕೂ ತೆರಳಿದ್ದಾಳೆ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mentally ill woman express her feeling in different way in Kalaburagi railway station.
Please Wait while comments are loading...