ಮೋದಿ ಏನು ಕರ್ನಾಟಕ ಮುಖ್ಯಮಂತ್ರಿ ಆಗ್ತಾರಾ? ಖರ್ಗೆ ಲೇವಡಿ
Recommended Video

ಕಲಬುರಗಿ, ಮೇ 1: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮೋದಿ ಭೇಟಿಯಿಂದ ರಾಜ್ಯದ ದಿಕ್ಸೂಚಿ ಬದಲಾಗುವುದಿಲ್ಲ ಎಂದಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ದುರ್ಬಲವಾಗಿದೆ. ಅದಕ್ಕೆ ಟಾನಿಕ್ ನೀಡಲು ಮೋದಿ ಬರುತ್ತಿದ್ದಾರೆ. ಅವರ ಬಂದರೆ ರಾಜ್ಯ ರಾಜಕೀಯದ ದಿಕ್ಸೂಚಿ ಬದಲಾಗಲಿದೆ ಎನ್ನುತ್ತಾರೆ. ಆದರೆ, ಅವರೇನು ಇಲ್ಲಿ ಮುಖ್ಯಮಂತ್ರಿಯಾಗಲು ಬರುತ್ತಿದ್ದಾರೆಯೇ. ಭಾಯಿಯೋಂ ಬೆಹೆನೋ ಎಂದು ಹೇಳಿ ಹೋಗಲಷ್ಟೇ ಅವರು ಬಂದಿರೋದು ಎಂದು ವ್ಯಂಗ್ಯವಾಡಿದರು.
ಮೋದಿ ಅವರಿಂದ ಕರ್ನಾಟಕಕ್ಕೆ ಯಾವ ಪ್ರಯೋಜನವೂ ಆಗಿಲ್ಲ. ಅವರು ರಾಜ್ಯದ ಜನರಿಗೆ ಉದ್ಯೋಗ ನೀಡಿದ್ದಾರೆಯೇ? ಆರ್ಥಿಕ ನೆರವು ನೀಡಿದ್ದಾರೆಯೇ? ಯಾವ ಯೋಜನೆಗೂ ನಯಾಪೈಸೆ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ನಾವು ನಮ್ಮ ಕೆಲಸದ ಆಧಾರದಲ್ಲಿ ಮತ ಕೇಳುತ್ತೇವೆ. ಮೋದಿ ಅವರಿಗೆ ಜನರ ಎದುರು ಬರಲು ಮುಖವಿಲ್ಲ. ಇದುವರೆಗೂ ನೀಡಿದ ಭರವಸೆಗಳಲ್ಲಿ ಒಂದನ್ನೂ ಈಡೇರಿಸಿಲ್ಲ. ದೇಶದ ಹಿತದೃಷ್ಟಿಯಿಂದ ಬಿಜೆಪಿಯನ್ನು ಹೊರಗಿಡಬೇಕು ಎಂದು ಖರ್ಗೆ ಟೀಕಿಸಿದರು.












Click it and Unblock the Notifications