• search
  • Live TV
ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಲಬುರಗಿ: ಮೃತ ವೃದ್ಧನ ಮಗಳು ಕೊರೊನಾದಿಂದ ಗುಣಮುಖ

|

ಕಲಬುರಗಿ, ಮಾರ್ಚ್ 31: ಕಲಬುರಗಿಯಲ್ಲಿ ಕೊರೊನಾದಿಂದ ಮೃತಪಟ್ಟಿದ್ದ ವೃದ್ಧನ ಮಗಳು ಚೇತರಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕಲಬುರಗಿಯಲ್ಲಿ ಇತ್ತೀಚೆಗಷ್ಟೇ ವೃದ್ಧರೊಬ್ಬರು ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದ್ದರು, ಬಳಿಕ ಅವರಿಗೆ ಚಿಕಿತ್ಸೆ ನೀಡಿದ ವೈದ್ಯ ಹಾಗೂ ವೃದ್ಧನ ಮಗಳಿಗೆ ಕೊರೊನಾ ತಗುಲಿರುವುದು ತಿಳಿದುಬಂದಿತ್ತು.

ಇದೀಗ ವೃದ್ಧನ ಮಗಳ ವರದಿಯಲ್ಲಿ ಕೊರೊನಾ ನೆಗೆಟಿವ್ ಬಂದಿದ್ದು, ಗುಣಮುಖರಾಗುತ್ತಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ.

ಕೊರೊನಾ ಸೋಂಕಿತನಿಗೆ ಚಿಕಿತ್ಸೆ ನೀಡಿದ ವೈದ್ಯ ಬಿಚ್ಚಿಟ್ಟ ಆಘಾತಕಾರಿ ವಿಷ್ಯ! ಕೊರೊನಾ ಸೋಂಕಿತನಿಗೆ ಚಿಕಿತ್ಸೆ ನೀಡಿದ ವೈದ್ಯ ಬಿಚ್ಚಿಟ್ಟ ಆಘಾತಕಾರಿ ವಿಷ್ಯ!

ಕಳೆದ ಕೆಲವು ವಾರಗಳಿಂದ ಕಲಬುರಗಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧನ ಮಗಳು ಇದೀಗ ಸಂಪೂರ್ಣ ಚೇತರಿಸಿಕೊಂಡಿದ್ದು, ಇಂದು ಆಕೆಯ ವೈದ್ಯಕೀಯ ವರದಿಯನ್ನು ವೈದ್ಯರು ಬಿಡುಗಡೆ ಮಾಡಿದ್ದು, ವರದಿಯಲ್ಲಿ ಆಕೆಗೆ ಸೋಂಕು ಸಂಪೂರ್ಣ ಗುಣಮುಖವಾಗಿದೆ ಎಂದು ಹೇಳಲಾಗಿದೆ.

ಆ ಮೂಲಕ ಕಳೆದ ಹಲವು ವಾರಗಳ ಆಸ್ಪತ್ರೆ ವಾಸವನ್ನು ಆಕೆ ಪೂರ್ಣಗೊಳಿಸಿದ್ದು, ಇನ್ನು ತಮ್ಮ ಮನೆಯಲ್ಲೇ ಕ್ವಾರಂಟೈನ್ ಗೆ ಒಳಪಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

4 ಜನ ಪ್ರತ್ರಕರ್ತರೂ ಕ್ವಾರಂಟೈನ್: ಇನ್ನು ಸುದ್ದಿ ನೀಡುವ ಧಾವಂತದಲ್ಲಿ ಸೋಂಕಿತ ವ್ಯಕ್ತಿಯ ಕುಟುಂಬಸ್ಥರ ನೇರ ಸಂಪರ್ಕಕ್ಕೆ ಬಂದಿದ್ದ ನಾಲ್ಕು ಜನ ಪತ್ರಕರ್ತರನ್ನೂ ಕ್ವಾರಂಟೈನ್ ಮಾಡಲಾಗಿತ್ತು.

ಸೌದಿ ಅರೇಬಿಯಾದಿಂದ ಕಲಬುರಗಿಗೆ ವೃದ್ಧ ಫೆಬ್ರವರಿ 29ರಂದು ಬಂದಿದ್ದರು. ಅವರಿಗೆ ಮಾರ್ಚ್‌ 6ರಂದು ಆರೋಗ್ಯದಲ್ಲಿ ಜ್ವರ, ಕೆಮ್ಮು ಕಾಣಿಸಿಕೊಂಡಿದ್ದರಿಂದ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು. ಜ್ವರ ಕಡಿಮೆಯಾಗದ ಕಾರಣ ಮಾರ್ಚ್‌ 9ರಂದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಚಿಕಿತ್ಸೆ ಫಲಿಸದೇ ಕೊರೊನಾ ಸೋಂಕಿನಿಂದ ವೃದ್ಧ ಮಾರ್ಚ್‌ 10ರಂದು ಮೃತಪಟ್ಟಿದ್ದರು.ವ್ಯಕ್ತಿಯ ನೇರ ಸಂಪರ್ಕದಲ್ಲಿದ್ದ ಕುಟುಂಬದ 4 ಜನ ಸದಸ್ಯರನ್ನು ಇಲ್ಲಿನ ಇ.ಎಸ್.ಐ.ಸಿ ಮೆಡಿಕಲ್ ಅಸ್ಪತ್ರೆಯ ಐಸೊಲೇಷನ್ ವಾರ್ಡ್ ನಲ್ಲಿಟ್ಟು ಸೂಕ್ತ ಚಿಕಿತ್ಸೆ ನೀಡಲಾಗುತ್ತಿತ್ತು.

English summary
Karnatakas seventh COVID-19 case with the test results of a 45-year-old individual turning out to be Negative on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X