• search
  • Live TV
ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಲಬುರಗಿ : ಇಬ್ಬರು ವಕೀಲರು ಸೇರಿ ಮೂರು ಸಾವು

By Manjunatha
|

ಕಲಬುರಗಿ, ನವೆಂಬರ್ 22 : ಜಿಲ್ಲೆಯ ಅಫಜಲಪುರ ತಾಲ್ಲೂಕು ಮಲ್ಲಾಬಾದ ಬಳಿ ಕಾರು ಮತ್ತು ಟಿಪ್ಪರ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ವಕೀಲರು ಸೇರಿ ಮೂವರು ಮೃತಪಟ್ಟಿದ್ದಾರೆ.
ಕಲಬುರ್ಗಿಯ ಶ್ರೀರಂಗ ಶೇಡಗಿಕರ್ (42), ರಮೇಶ್ ಜಿ.ದೊಡ್ಡಮನಿ (40) ಹಾಗೂ ಕಾರು ಚಾಲಕ ಮೃತಪಟ್ಟವರು.

ಕಾರು ಚಾಲಕನ ಹೆಸರು ತಿಳಿದು ಬಂದಿಲ್ಲ. ಇವರೆಲ್ಲರೂ ಕಲಬುರ್ಗಿಯಿಂದ ಅಫಜಲಪುರಕ್ಕೆ ತೆರಳುತ್ತಿದ್ದರು. ಈ ವೇಳೆ ಎದುರಿನಿಂದ ಬಂದ್ ಟಿಪ್ಪರ್ ಡಿಕ್ಕಿ ಹೊಡೆದಿದೆ.

ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಯುವಕನ ಬಂಧನ
ಕಲಬುರಗಿ ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿ ಕಾಲೇಜು ಮುಂದೆ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಕಾರ ಭೋಸಗಾ ಗ್ರಾಮದ ಕಾಡಸಿದ್ದ ಅಲಿಯಾಸ್ ಸಿದ್ದು ಬಿರಾದಾರ ಬಂಧಿತ ಯುವಕ.
ಪ್ರತಿ ದಿನ ಕಾಲೇಜಿಗೆ ಹೋಗಿ ಬರುವ ಹುಡುಗಿಯರನ್ನು ಈತ ಚುಡಾಯಿಸುತ್ತಿದ್ದ, ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿತ್ತು.

ಪತಿಯಿಂದಲೇ ಪತ್ನಿಯ ಕೊಲೆ
ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಇರಗಪಳ್ಳಿ ಗ್ರಾಮದಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ.

ನವಿತಾ ರವಿಶಂಕರ ಕಲಶೆಟ್ಟಿ (20) ಮೃತಪಟ್ಟವರು. ಸುಲೇಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಟುಂಬದ ಸಣ್ಣ ಕಲಹವೇ ದೊಡ್ಡದಾಗಿ ಪತಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

English summary
Two lawyers and a car driver dies in accident happen in Kalaburgi district's Ajlapura talluk's Mllabad vellage. in another incident in Kalaburagi a husband kills is wife.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X