ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸಲು ಬಂದ ಯಮ..!

Posted By:
Subscribe to Oneindia Kannada

ಕಲಬುರಗಿ, ನವೆಂಬರ್ 28: 'ಕಡ್ಡಾಯವಾಗಿ ಹೆಲ್ಮೆಟ್ ಹಾಕಿಕೊಳ್ಳಿ, ಇಲ್ಲವಾದರೆ ನನ್ನ ಜತೆ ನಡೆಯಿರಿ'! - ಹೀಗೆಂದು ಹೇಳಿದ್ದು ಬೇರೆ ಯಾರೂ ಅಲ್ಲ, ಸ್ವತಃ ಯಮ. ಸಾರ್ವಜನಿಕರಲ್ಲಿ ಹೆಲ್ಮೆಟ್ ಧರಿಸುವ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾ ಪೊಲೀಸರು ಕೈಗೊಂಡಿರುವ ಹೊಸ ಉಪಾಯವಿದು.

ಯಮಲೋಕದ ಸಿಇಓ ಯಮಣ್ಣನ ಪೀಕಲಾಟ

ಯಮನ ವೇಷಧರಿಸಿದ ವ್ಯಕ್ತಿ ಒಂದು ಕೈಯಲ್ಲಿ ಯಮಪಾಷ ಮತ್ತೊಂದು ಹೆಲ್ಮೆಟ್ ಹಿಡಿದು ಹೆಲ್ಮೆಟ್ ಹಾಕದಿದ್ದರೆ ಯಮಪಾಷವೇ ಗಟ್ಟಿ ಎನ್ನುತ್ತಾ ಜಾಗೃತಿ ಮೂಡಿಸುತ್ತಿದ್ದಾನೆ. ಅವನಿಗೆ ಬಿಳಿ ಸಮವಸ್ತ್ರ ತೊಟ್ಟ ಟ್ರಾಫಿಕ್ ಪೊಲೀಸರ ಬೆಂಬಲ.

Kalaburagi Traffic police using unique technic to create awareness about road safety

ಹಾಸ್ಯದ ಮೂಲಕ ಹೆಚ್ಚು ಪರಿಣಾಮಕಾರಿಯಾಗಿ ಜನಗಳಿಗೆ ಸಂದೇಶ ತಲುಪಿಸಲು ಕಲಬುರಗಿ ಜಿಲ್ಲೆಯ ಪೊಲೀಸರು ಯಮನ ಮೊರೆ ಹೋಗಿದ್ದಾರೆ. ಜಿಲ್ಲೆಯಲ್ಲಿ ಅಪಘಾತ ಪ್ರಮಾಣ ಕಡಿಮೆ ಮಾಡುವ ಕಾರ್ಯಕ್ರಮಗಳನ್ನು ಹಾಕಿಕೊಂಡಿರುವ ಪೊಲೀಸರು ಸಂಚಾರಿ ನಿಯಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ರೀತಿಯ ವಿಶಿಷ್ಟ ಪ್ರಯೋಗ ಮಾಡುತ್ತಿದ್ದಾರೆ.

ಜೋಕ್ : ಯಮನ ಬೇಸ್ತು ಬೀಳಿಸಿಲು ಹೋಗಿ ಪ್ಲಾನ್ ಉಲ್ಟಾ!

ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳಿಗೆ ತೆರಳಿ ಅಲ್ಲಿಯೂ ಸಂಚರಿ ನಿಯಮಗಳ ಬಗ್ಗೆ ಪಾಠ ಮತ್ತು ಪ್ರಾತ್ಯಕ್ಷಿಕೆ ನೀಡುವ ಯೋಜನೆ ಕಲಬುರಗಿ ಪೊಲೀಸರದ್ದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kalaburagi Traffic police using unique technic to create awareness about road safety. Kalaburagi Traffic Police creating road safety awareness by using mythology characters.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ