ಕಲಬುರಗಿ ಸಂಸದ ಉಮೇಶ್ ಜಾದವ್ ರಿಗೆ ಕೊವಿಡ್-19 ಪಾಸಿಟಿವ್
ಕಲಬುರಗಿ, ಆಗಸ್ಟ್.20: ಕೊರೊನಾವೈರಸ್ ಮಹಾಮಾರಿಯು ಜನಪ್ರತಿನಿಧಿಗಳ ಪಾಲಿಗೆ ಬೆನ್ನು ಬಿಡದ ಭೂತದಂತೆ ಕಾಡುತ್ತಿದೆ. ಕಲಬುರಗಿ ಲೋಕಸಭಾ ಕ್ಷೇತ್ರದ ಸಂಸದ ಡಾ.ಉಮೇಶ್ ಜಾದವ್ ಅವರಿಗೂ ಕೊವಿಡ್-19 ಸೋಂಕು ತಗಲಿರುವುದು ದೃಢಪಟ್ಟಿದೆ.
Recommended Video
ತಮಗೆ ಕೊರೊನಾವೈರಸ್ ಸೋಂಕು ತಗಲಿರುವ ಬಗ್ಗೆ ಸ್ವತಃ ಸಂಸದರೇ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮೊದಮೊದಲು ಕೊರೊನಾವೈರಸ್ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡವು. ಈ ಹಿನ್ನೆಲೆ ಅನುಮಾನಗೊಂಡು ಪರೀಕ್ಷೆಗೊಳಪಟ್ಟಾಗ ಸೋಂಕು ತಗಲಿರುವುದು ಪತ್ತೆಯಾಗಿದೆ.
"ನನ್ನ ಆರೋಗ್ಯದಲ್ಲಿ ಯಾವುದೇ ರೀತಿಯ ಏರುಪೇರು ಆಗಿಲ್ಲ. ನಾನು ಆರೋಗ್ಯವಾಗಿಯೇ ಇದ್ದು, ವೈದ್ಯರು ನೀಡಿರುವ ಸಲಹೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ ಎಂದು ಸಂಸದ ಡಾ.ಉಮೇಶ್ ಜಾಧವ್ ಟ್ವೀಟ್ ಮಾಡಿದ್ದಾರೆ.

ತಮ್ಮ ಪುತ್ರನಿಗೂ ಕೊವಿಡ್-19 ಪಾಸಿಟಿವ್:
ಸಂಸದ ಡಾ.ಉಮೇಶ್ ಜಾದವ್ ಜೊತೆಗೆ ತಮ್ಮ ಪುತ್ರ ಅವಿನಾಶ್ ಜಾದವ್ ಅವರಿಗೂ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ. ಹೀಗಾಗಿ ತಮ್ಮ ಜೊತೆಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಬೆಂಬಲಿಗರು ಒಮ್ಮೆ ಕೊರೊನಾವೈರಸ್ ಸೋಂಕು ತಪಾಸಣೆ ಮಾಡಿಸಿಕೊಳ್ಳುವಂತೆ ಸಂಸದರು ಟ್ವಿಟರ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.












Click it and Unblock the Notifications